More

    ಮಾಗಡಿ ತಾಲೂಕಿನ ಬೆಟ್ಟಹಳ್ಳಿ ಕಾಲನಿಯಲ್ಲಿ ಚಿರತೆ ಸೆರೆ

    ಕುದೂರು: ಬೆಟ್ಟಹಳ್ಳಿ ಕಾಲನಿಗರ ನಿದ್ದೆಗೆಡಿಸಿದ್ದ ಚಿರತೆಯೊಂದು ಗುರುವಾರ ಬೆಳಗ್ಗೆ ಬೋನಿಗೆ ಬಿದ್ದಿದೆ.
    ಅರಣ್ಯ ಅಧಿಕಾರಿಗಳು ಕಾಲನಿಯ ಹೊಲದಲ್ಲಿ ಇಟ್ಟಿದ್ದ ಬೋನನ್ನು ಗ್ರಾಮಸ್ಥರೇ ಸ್ಥಳಾಂತರಿಸಿ, ಕಳೆದ ನವೆಂಬರ್‌ನಲ್ಲಿ ಚಿರತೆ ದಾಳಿಯಿಂದ ಮೃತನಾದ ಕೆಂಚಯ್ಯನ ಮನೆಯ ಪಕ್ಕದಲ್ಲಿ ಇಟ್ಟು, ಒಳಗೆ ನಾಯಿ ಕಟ್ಟಿದ್ದರು. ಗುರುವಾರ ಮುಂಜಾನೆ 3 ಗಂಟೆಯಲ್ಲಿ ಚಿರತೆ ಶಬ್ದ ಕೇಳಿದ್ದರಿಂದ ಬಂದು ನೋಡಿದಾಗ ಸೆರೆಯಾಗಿರುವುದು ಕಂಡುಬಂದಿದೆ.

    ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಚಿರತೆ ದಾಳಿಗೆ ಬಲಿಯಾದ ಕೆಂಚಯ್ಯನ ಕುಟುಂಬಕ್ಕೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಪರಿಹಾರ ನೀಡುವವರೆಗೂ ಚಿರತೆ ಒಯ್ಯಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ನೆಲಮಂಗಲ ಅರಣ್ಯಾಧಿಕಾರಿ ಶಾಂತಕುಮಾರ್ ಅವರು 15 ದಿನದೊಳಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದ ನಂತರ ಸ್ಥಳಾಂತರಕ್ಕೆ ಅವಕಾಶ ನೀಡಿದರು.

    ಕುದೂರು ಠಾಣೆ ಪಿಎಸ್‌ಐ ಟಿ.ಎಚ್. ಮಂಜುನಾಥ್, ಶಾಸಕರ ಆಪ್ತ ಸಹಾಯಕ ಪುರುಷೋತ್ತಮ್, ಸ್ಥಳೀಯರಾದ ಜಯರಾಮ್, ಮಂಜೇಶ್ ಇದ್ದರು.

    ಉಳಿದ ಚಿರತೆಗಳನ್ನು ಹಿಡಿಯಲು ಮನವಿ: ಬೆಟ್ಟಹಳ್ಳಿ ಕಾಲನಿಯಲ್ಲಿ ಮೂರು ಚಿರತೆಗಳ ಪೈಕಿ ಒಂದು ಸೆರೆಯಾಗಿದೆ. ಉಳಿದ 2 ಚಿರತೆಗಳನ್ನು ಹಿಡಿಯಲು ಬೋನು ಇಡುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಆಧಿಕಾರಿಗಳಿಗೆ ಮನವಿ ಮಾಡಿದರು.

    ಇಲಾಖೆ ಎಡವಟ್ಟು: ಬೆಟ್ಟಹಳ್ಳಿ ಕಾಲನಿ ಹೊಲದಲ್ಲಿ ನೆಪಮಾತ್ರಕ್ಕೆ ಬೋನಿಟ್ಟು, ಒಳಗೆ ಹಲಸಿನ ಹಣ್ಣು ಇಟ್ಟು ತಿಂಗಳು ಕಳೆದರೂ ಚಿರತೆ ಹಿಡಿಯಲು ಸಾಧ್ಯವಾಗಿರಲಿಲ್ಲ. ಆದರೆ ಬೋನನ್ನು ಗ್ರಾಮಕ್ಕೆ ತಂದು, ನಾಯಿ ಕಟ್ಟಿದ್ದರಿಂದ ಚಿರತೆ ಸೆರೆ ಸಿಕ್ಕಿದೆ ಎಂದು ಗ್ರಾಮಸ್ಥರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts