More

  ಸಾತನೂರಿಗಿದೆ ವಿಶಿಷ್ಟ ಇತಿಹಾಸ

  ಎಂ.ಎಸ್.ಸಿದ್ದಲಿಂಗೇಶ್ವರ ಮಾಗಡಿ

  ಪ್ರತಿಯೊಂದು ಗ್ರಾಮಕ್ಕೂ ತನ್ನದೆ ಆದ ಇತಿಹಾಸ ಇರುತ್ತದೆ. ಅಂತೆಯೇ, ಮಾಗಡಿ ಪಟ್ಟಣದಿಂದ 5 ಕಿಮೀ ದೂರದಲ್ಲಿರುವ ಸಾತನೂರು ಗ್ರಾಮವೂ ಐತಿಹಾಸಿಕ ಘಟನಾವಳಿಗೆ ಸಾಕ್ಷಿಯಾಗಿದೆ.

  ಸಾತನೂರಿಗಿದೆ ವಿಶಿಷ್ಟ ಇತಿಹಾಸ

  ಪುಂಡರೀಕ ವಿಠ್ಠಲ 16ನೇ ಶತಮಾನದಲ್ಲಿ ಮಾಗಡಿ ತಾಲೂಕಿನ ಸಾತನೂರು ಗ್ರಾಮದಲ್ಲಿ ಶ್ರೀಕೃಷ್ಣನ ದೇವಾಲಯದಲ್ಲಿ ಸಂಗೀತ ಅಭ್ಯಾಸ ನಡೆಸಿ ಸಂಗೀತ ಗ್ರಂಥಗಳನ್ನು ಇಲ್ಲಿಯೇ ರಚಿಸಿದ್ದು, ರಾಗಮಾಲಿಕ ಮತ್ತು ರಸಮಂಜರಿ ಎಂಬ ಶಾಸ್ತ್ರೀಯ ಸಂಗೀತ ಗ್ರಂಥಗಳಾಗಿವೆ.

  ಪುಂಡರೀಕ ಎಂಬುವರು ಒಬ್ಬ ಕವಿಯಾಗಿದ್ದು, ಸಾತನೂರು ಗ್ರಾಮದಲ್ಲಿ ಹುಟ್ಟಿ ಬೆಳೆದಿದ್ದಾರೆ. ಬಾಲ್ಯದಲ್ಲಿ ದಡ್ಡರಾಗಿದ್ದ ಅವರನ್ನು ಪಾಲಕರು ನಿಂದಿಸುತ್ತಿದ್ದರು. ಮುಂದೆ ಅವರು, ಪ್ರತಿ ದಿನ ಸಂಗೀತ ಅಭ್ಯಾಸ ಮೂಲಕ ಅಕ್ಬರ್ ನ ಆಸ್ಥಾನದಲ್ಲಿ ದೊಡ್ಡ ಕವಿಯಾಗುತ್ತಾರೆ. ಈ ವೇಳೆ ಅಕ್ಬರ್ ಕವಿಯ ಹಿನ್ನೆಲೆ ಕೇಳಿದ ವೇಳೆ ದಕ್ಷಿಣ ಕಾಶಿ ಶಿವಗಂಗೆಯಿಂದ 30 ಕಿಮೀ ದೂರದ ಮಾಗಡಿ ಬಳಿಯ ಸಾತನೂರು ನನ್ನ ಗ್ರಾಮ, ಅಲ್ಲಿ ನನ್ನ ಆರಾಧ್ಯ ದೇವ ಪುಂಡರೀಕ ವಿಠ್ಠಲ. ನಾನು ಅಪ್ಪಟ ಕನ್ನಡಿಗ ಎಂದು ತಿಳಿಸಿದ್ದಾರೆ.

  ಪುಂಡರೀಕ ವಿಠ್ಠಲನ ಶಿಷ್ಯನಾದ ಶ್ರೀಕಂಠ ಎಂಬುವನು ಕೂಡ ಇಲ್ಲಿಯೇ ಇದ್ದು, ಪುಂಡರೀಕರ ವಿಠ್ಠಲರ ನಂತರ ಸಂಗೀತ ಕಲೆಗಳನ್ನು ಮುಂದುವರಿಸಿದರು. ಸಾತನೂರು ಗ್ರಾಮ ಈ ಹಿಂದೆ ಕೃಷ್ಣದೇವರಾಯ ಮತ್ತು ಅಕ್ಕ ಮತ್ತು ಬುಕ್ಕರಾಯರು ಆಳ್ವಿಕೆಯಲ್ಲಿತ್ತು.

  ಸಾತನೂರು ಗ್ರಾಮದಲ್ಲಿ ಪುಂಡರೀಕ ವಿಠ್ಠಲ ಶಾಸ್ತ್ರೀಯ ಸಂಗೀತದ ವಿದ್ವತ್ತು ಕಲಿತು ಹೊರ ರಾಜ್ಯದ ರಾಜರ ಆಸ್ಥಾನ ಮತ್ತು ಅನೇಕ ರಾಜಮನೆತನಗಳು ನಡೆಸುತ್ತಿದ್ದ ಸಂಗೀತ ಕಛೇರಿಗಳಲ್ಲಿ ಭಾಗವಹಿಸಿ ಸ್ಥಳೀಯ ಪ್ರಾಂತ್ಯದ ಹೆಸರನ್ನು ಚಿರಸ್ಥಾಯಿಯಾಗಿಸಿದ್ದಾರೆ.

  ಪುಂಡರೀಕ ವಿಠ್ಠಲರು, ಹೆಚ್ಚಾಗಿ ಮೈಸೂರು ಸಂಸ್ಥಾನದ ಒಡೆಯರ ಅಶ್ರಯದಲ್ಲಿ ಸಂಗೀತ ವಿದ್ವಾನ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರ ಕುಟುಂಬದವರಾದ ಸತ್ಯನಾರಾಯಣ ರಾವ್ ಕೂಡ ಸಂಗೀತದಲ್ಲಿ ಅದ್ವಿತಿಯ ಸಾಧನೆ ಮಾಡಿದ್ದು, ಇತ್ತೀಚೆಗೆ ಪದ್ಮಶ್ರೀ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

  ವಿಠ್ಠಲನ ವಿಗ್ರಹ ಆಕರ್ಷಣೆ

  ಸಾತನೂರಿಗಿದೆ ವಿಶಿಷ್ಟ ಇತಿಹಾಸ
  ಮಹಾರಾಷ್ಟ್ರದ ಪಂಡರಾಪುರದಲ್ಲಿರುವ ಪಾಂಡುರಂಗ ವಿಠ್ಠಲನ ದೇವಾಲಯ ಹೊರತು ಪಡಿಸಿದರೆ ಅಂಥಹ ಸುಂದರ ವಿಗ್ರಹ ಇರುವುದು ಇಲ್ಲೆ. ಕೃಷ್ಣ ಶಿಲೆಯಿಂದ ನಿರ್ಮಾಣವಾಗಿರುವ ವಿಠ್ಠಲನ ವಿಗ್ರಹ ಆಕರ್ಷಕವಾಗಿದೆ.

  ದೇಗುಲಗಳ ನೆಲೆಬೀಡು

  ಇತ್ತೀಚೆಗೆ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಅಭಿವೃದ್ಧಿಪಡಿಸಲಾಗಿದೆ. ಪುಂಡರೀಕ ವಿಠ್ಠಲ ಮತ್ತು ಸಾತನೂರಿಗೆ ಸಂಬಂಧಪಟ್ಟ ಇತಿಹಾಸದ ಮಾಹಿತಿ ಒಳಗೊಂಡ ಲೇಖನಗಳು, ಒಲೆಗರಿಗಳನ್ನು ಸಂರಕ್ಷಿಸಿ ಇಡಲಾಗಿದೆ. ಪುಂಡರೀಕ ವಿಠ್ಠಲನ ಎದುರು ಪ್ರಾಣ ದೇವರಾಗಿ ಆಂಜನೇಯ ಸ್ವಾಮಿ ದೇವಾಲಯವನ್ನು ವ್ಯಾಸರಾಯರು ಪ್ರತಿಷ್ಠಾಪಿಸಿದ್ದಾರೆ.

  ಸಾತನೂರಿಗಿದೆ ವಿಶಿಷ್ಟ ಇತಿಹಾಸ
  ಚೋಳರು ಒಂದೇ ದಿನ ಸ್ವಯಂ ಭುವನೇಶ್ವರ ದೇವರನ್ನು ಪ್ರತಿಷ್ಠಾಪಿಸಿದ್ದಾರೆ. ಪುಂಡರೀಕ ದೇವಾಲಯ ಬಲಭಾಗದಲ್ಲಿ ಶಾಸನಗಳನ್ನು ಕೆತ್ತಲಾಗಿದೆ. ಇದನ್ನು ಪುರಾತತ್ವ ಇಲಾಖೆ ಮತ್ತು ಚಿತ್ರಕಲಾ ಪರಿಷತ್ ಇಲಾಖೆ ಭೇಟಿ ನೀಡಿ ಪರಿಶೀಲಿಸಿದ್ದು, ಪುಂಡರೀಕ ವಿಠ್ಠಲ ದೇವಾಲಯದ ಇತಿಹಾಸವನ್ನು ಸ್ಥಳೀಯ ಸಂಗೀತಗಾರರು ಕೂಡ ಉಳಿಸಲು ಕೈ ಜೋಡಿಸಿದ್ದಾರೆ.

  ಖ್ಯಾತ ಸಂಗೀತಗಾರರ ಗ್ರಾಮದ ಇತಿಹಾಸ ಮುನ್ನಲೆಗೆ ಬರಲು ಕನ್ನಡ ಸಂಸ್ಕೃತಿ ಇಲಾಖೆ, ಪುರಾತತ್ವ ಇಲಾಖೆ ಹೆಚ್ಚು ಗಮನ ತೊರಿದರೆ ಇದರ ಇತಿಹಾಸ ಮತಷ್ಟು ಬೆಳಕಿಗೆ ಬಂದು ಸಂಗೀತ ಕ್ಷೇತ್ರಕ್ಕೆ ಮತಷ್ಟು ಅನುಕೂಲಕರವಾಗಲಿದೆ.

  ರಸ್ತೆಗಳಿಲ್ಲದೆ ತೊಂದರೆ

  ಸಾತನೂರು ಗ್ರಾಮದಲ್ಲಿ 700ಕ್ಕೂ ಹೆಚ್ಚು ಮನೆಗಳಿದ್ದು, 1200ಕ್ಕೂ ಜನಸಂಖ್ಯೆ ಇದೆ. ಬಹುತೇಕ ಮಂದಿ ವೀಳ್ಯದೆಲೆ, ಅಡಕೆ, ತೆಂಗು, ರಾಗಿ ಬೆಳೆಯುತ್ತಾರೆ. ಈ ಗ್ರಾಮದ ಮತಷ್ಟು ಅಭಿವೃದ್ಧಿಗೆ ಸರ್ಕಾರ ಮುಂದಾಗಬೇಕಿದೆ ಎಂಬುದು ನಾಗರಿಕರ ಅಭಿಪ್ರಾಯ.

  ಅನಂತ ಕುಮಾರ್ ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ದೆಹಲಿಯಲ್ಲಿ ಸಂಗ್ರಹಿಸಲಿಟ್ಟಿದ್ದ ಸಾತನೂರು ಗ್ರಾಮದ ಪುಂಡರೀಕ ವಿಠ್ಠಲನ ಗ್ರಂಥವನ್ನು ವೀಕ್ಷಿಸಿ ಮಾಜಿ ಸಚಿವ ಎಚ್.ಎಂ.ರೇವಣ್ಣ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ದನ್ನು ಸ್ಮರಿಸಬಹುದಾಗಿದೆ.

  ಗ್ರಾಮದಲ್ಲಿ ಶನಿಮಹಾತ್ಮ ದೇವಾಲಯ, ಪಟ್ಟಲದಮ್ಮ, ಆಂಜನೇಯ, ವಿಠಲಗೋಪಾಲಸ್ವಾಮಿ, ಚೋಳರ ಕಾಲದ ಸೋಮೇಶ್ವರ ದೇವಾಲಯಗಳು ಪ್ರಸಿದ್ಧಿಹೊಂದಿದೆ. ದೇವಾಲಯಗಳಿಗೆ ರಸ್ತೆಗಳಿಲ್ಲದೆ ಭಕ್ತರು ತೊಂದರೆ ಅನುಭವಿಸುವಂತಾಗಿದೆ.

  ಸಾತನೂರಿಗಿದೆ ವಿಶಿಷ್ಟ ಇತಿಹಾಸಸಾತನೂರು ಗ್ರಾಮದ ಪುಂಡರೀಕ ವಿಠ್ಠಲನ ದೇಗುಲ ಏಕಶಿಲೆಯಲ್ಲಿದ್ದು, ಪ್ರಭಾವಳಿಯಲ್ಲಿ ದಶಾವತಾರ, ಬಲಭಾಗದಲ್ಲಿ ರುಕ್ಷ್ಮಿಣಿ ಎಡಭಾಗದಲ್ಲಿ ಸತ್ಯಭಾವ, ಗರುಡವಾಹನದ ಮೇಲೆ ಈ ದೇವರನು ಕೆತ್ತಿರುವುದು ವಿಶೇಷವಾಗಿದೆ. ದೇವಾಲಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು.

  ಕಾವೇರಯ್ಯ, ಪಾಂಡುರಂಗ ದೇವಾಲಯ ಅರ್ಚಕ

  ಸಾತನೂರಿಗಿದೆ ವಿಶಿಷ್ಟ ಇತಿಹಾಸಕವಿ ಪುಂಡರೀಕ ವಿಠ್ಠಲ ಪ್ರಪಂಚದಲ್ಲೆ ಪ್ರಸಿದ್ಧಿಹೊಂದಿದ್ದಾರೆ. ಆದರೆ ಅವರ ಗ್ರಾಮ ಸಾತನೂರು ಅಭಿವೃದ್ಧಿಯಲ್ಲಿ ಹಿಂದುಳಿದೆ. ಈ ಗ್ರಾಮದ ಅಭಿವೃದ್ಧಿಗೆ ಮತ್ತು ದೇವಾಲಯವನ್ನು ಸಮಗ್ರ ಅಭಿವೃದ್ಧಿಪಡಿಸಿ ವಿಶ್ವಪಾರಂಪರಿಕ ಪ್ರವಾಸಿ ತಾಣವನ್ನಾಗಿಸಲು ಮುಂದಾಗಬೇಕು.
  ಎಸ್.ಆರ್.ನವೀನ್
  ಗ್ರಾಮಸ್ಥ

  ಸಾತನೂರಿಗಿದೆ ವಿಶಿಷ್ಟ ಇತಿಹಾಸಜಗತ್ತಿನೆಲ್ಲೆಡೆ ಪ್ರಸಿದ್ಧಿ ಹೊಂದಿದ ಪಂಡರೀಕ ವಿಠ್ಠಲನ ದೇವಾಲಯಕ್ಕೆ ಈಗಾಗಲೇ ಕಾಯಕಲ್ಪ ನೀಡಲಾಗಿದ್ದು, ಮತ್ತಷ್ಟು ಅಭಿವೃದ್ಧಿಗೆ ಸಂಸದರು, ಶಾಸಕರ ಜತೆಗೂಡಿ ಅವರ ಸಹಕಾರ ಪಡೆಯಲಾಗುವುದು.
  ಮಲ್ಲಿಕಾರ್ಜುನಯ್ಯ

  ಸಾತನೂರು ಗ್ರಾಪಂ ಅಧ್ಯಕ್ಷ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts