More

    ಪವಿತ್ರ ಭೂಮಿ ಭಾರತ ಈಗ ಅತ್ಯಾಚಾರಿಗಳ ನಾಡು: ಮದ್ರಾಸ್ ಹೈಕೋರ್ಟ್ ಬೇಸರ

    ಚೆನ್ನೈ: “ಪವಿತ್ರ ಭೂಮಿ ಭಾರತ ಈಗ ಅತ್ಯಾಚಾರಿಗಳ ನಾಡಾಗಿದೆ. ಇಲ್ಲಿ ಪ್ರತಿ 15 ನಿಮಿಷಗಳಿಗೊಮ್ಮೆ ಅತ್ಯಾಚಾರ ನಡೆಯುತ್ತಿದೆ..” -ಇಂಥದ್ದೊಂದು ಅಭಿಪ್ರಾಯವನ್ನು ನ್ಯಾಯಾಲಯವೇ ವ್ಯಕ್ತಪಡಿಸಿದೆ. ಅತ್ಯಾಚಾರ ಪ್ರಕರಣವೊಂದರ ಕುರಿತಂತೆ ಮದ್ರಾಸ್​ ಹೈಕೋರ್ಟ್​ನಲ್ಲಿ ಗುರುವಾರ ನಡೆದ ವಿಚಾರಣೆ ವೇಳೆ ನ್ಯಾಯಾಧೀಶರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಅತ್ಯಾಚಾರ ಸಂತ್ರಸ್ತೆ, ಅಸ್ಸಾಮ್​ನಿಂದ ವಲಸೆ ಬಂದಿರುವ ಕೂಲಿ ಕಾರ್ಮಿಕೆಯ ಪ್ರಕರಣ ಸಂಬಂಧ ನ್ಯಾಯವಾದಿ ಎ.ಪಿ. ಸೂರ್ಯಪ್ರಕಾಶಂ ವಾದ ಮಂಡಿಸಿದ್ದರು. ಸಂತ್ರಸ್ತೆಗೆ ಆಶ್ರಯ ಒದಗಿಸಬೇಕು, ಡೆಪ್ಯುಟಿ ಇನ್​ಸ್ಪೆಕ್ಟರ್ ಜನರಲ್​ ನೇತೃತ್ವದ ತಂಡದ ಮೂಲಕ ಪ್ರಕರಣದ ತನಿಖೆ ನಡೆಸಬೇಕು ಎಂದು ಡಿಜಿಪಿ ಅವರಿಗೆ ಸೂಚಿಸಬೇಕು. ಅಲ್ಲದೆ ಸಂತ್ರಸ್ತರ ಪರಿಹಾರ ನಿಧಿ ಮೂಲಕ ಸರ್ಕಾರ ಆರ್ಥಿಕವಾಗಿಯೂ ನೆರವಾಗುವಂತೆ ನಿರ್ದೇಶಿಸಬೇಕು ಎಂದು ವಕೀಲರು ನ್ಯಾಯಪೀಠಕ್ಕೆ ಮನವಿ ಮಾಡಿಕೊಂಡಿದ್ದರು.
    ವಕೀಲರ ವಾದವನ್ನು ಆಲಿಸಿದ ನ್ಯಾಯಾಧೀಶರು, ಪವಿತ್ರ ಭೂಮಿ ಭಾರತ ಈಗ ಅತ್ಯಾಚಾರಿಗಳ ನಾಡಾಗಿದೆ, ಪ್ರತಿ 15 ನಿಮಿಷಗಳಿಗೊಮ್ಮೆ ಅತ್ಯಾಚಾರ ನಡೆಯುತ್ತಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

    ಕೊಯಂಬತ್ತೂರಿನಲ್ಲಿ ನೆಲೆಸಿದ್ದ ವಲಸೆ ಕಾರ್ಮಿಕೆ ತಿರುಪ್ಪುರ್​ನ ರಾಜೇಶ್​ಕುಮಾರ್​ ಬಳಿಗೆ ತೆರಳಿ ನೌಕರಿ ಕೇಳಿದ್ದಳು. ಕೆಲಸ ಕೊಡಿಸುವುದಾಗಿ ಹೇಳಿದ್ದ ಆತ ಆಕೆಯನ್ನು ಬೇರೆಡೆಗೆ ಕರೆದೊಯ್ದು, ನಾಲ್ವರು ಸ್ನೇಹಿತರ ಜತೆ ಸೇರಿ ಅತ್ಯಾಚಾರ ನಡೆಸಿದ್ದ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಉಳಿದವರ ಪತ್ತೆಗೆ ಶೋಧ ಮುಂದುವರಿದಿದ್ದು, ತನಿಖೆ ನಡೆಯುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts