More

    ಕರೊನಾ ಹಿನ್ನೆಲೆಯಲ್ಲಿ ವೃತ್ತಪತ್ರಿಕೆಗಳ ಮುದ್ರಣ ನಿಲ್ಲಿಸಲು ಸೂಚಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್​

    ಚೆನ್ನೈ: ಕರೊನಾ ಮಹಾಮಾರಿ ದೇಶದೆಲ್ಲೆಡೆ ವ್ಯಾಪಿಸಿರುವ ಕಾರಣ ವೃತ್ತಪತ್ರಿಕೆಗಳ ಮುದ್ರಣ ನಿಲ್ಲಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ತಳ್ಳಿಹಾಕಿದೆ. ಪತ್ರಿಕೆಗಳ ಮೂಲಕ ಕೋವಿಡ್-19 ಹರಡುವ ಸಾಧ್ಯತೆ ಕನಿಷ್ಠ ಪ್ರಮಾಣದಲ್ಲಿದೆ. ಅರ್ಜಿಯಲ್ಲಿ ಯಾವುದೇ ತಥ್ಯವಿಲ್ಲ ಎಂಬ ಸಂಶೋಧಕರ ವರದಿಯನ್ನು ಆಧರಿಸಿ ವಿಭಾಗೀಯಪೀಠ ಅರ್ಜಿಯನ್ನು ವಜಾಗೊಳಿಸಿತು.

    ‘ಕೇವಲ ಅನುಮಾನ ಮತ್ತು ಕನಿಷ್ಠ ಸಾಧ್ಯತೆಯನ್ನು ಆಧರಿಸಿ ಪತ್ರಿಕೆಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ. ಪತ್ರಿಕೆಗಳನ್ನು ನಿರ್ಬಂಧಿಸಿದರೆ ಸಂವಿಧಾನದ 19(1)(ಎ) ವಿಧಿ ಉಲ್ಲಂಘನೆಯಾಗುತ್ತದೆ ಎಂದು ಪೀಠ ಹೇಳಿದೆ.

    ಕೇಂದ್ರ ಆದೇಶ: ಕರೊನಾ ವೈರಸ್ ನಿಯಂತ್ರಿಸಲು ಕ್ರಮಕೈಗೊಳ್ಳಲಾಗುವ ಅವಧಿಯಲ್ಲಿ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮ ಯಾವುದೇ ಅಡಚಣೆಯಿಲ್ಲದೆ ಕಾರ್ಯನಿರ್ವಹಿಸಬಹುದು. ಕೇಬಲ್ ಸಹಿತವಾಗಿ ಮಾಧ್ಯಮಗಳು ಅವಶ್ಯಕ ಸೇವೆಯಡಿ ಕಾರ್ಯ ನಿರ್ವಹಿಸಬಹುದಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

    ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸರಿಯಾದ ಮಾಹಿತಿ ತಲುಪುವಂತಾಗಲು ಹಾಗೂ ಸಾರ್ವಜನಿಕ ಸುವ್ಯವಸ್ಥೆ ರಕ್ಷಿಸುವ ನಿಟ್ಟಿನಲ್ಲಿ ಮಾಧ್ಯಮಗಳ ಸುಗಮ ಕಾರ್ಯನಿರ್ವಹಣೆ ಅಗತ್ಯ ಎಂದು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಆದೇಶ ತಿಳಿಸಿದೆ.

    ರಿಷಿಕೇಶದಲ್ಲಿ ಲಾಕ್​ಡೌನ್​ ಹೊರತಾಗಿಯೂ ವಿದೇಶಿಯರ ಸ್ವಚ್ಛಂದ ವಿಹಾರ, ಪೊಲೀಸರಿಂದ ಶಿಕ್ಷೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts