More

    ಸುಧೀರ್ ಅತ್ತಾವರ್ ನಿರ್ದೇಶನದ ‘ಮಡಿ’ ಚಿತ್ರಕ್ಕೆ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿ

    ಬೆಂಗಳೂರು: ರಾಜಸ್ಥಾನದ ಜೈಪುರ ಮತ್ತು ಜೋಧ್​ಪುರದಲ್ಲಿ ನಡೆದ ಏಳನೇ ರಾಜಸ್ಥಾನ ಅಂತಾರಾಷ್ಟ್ರೀಯ ಚಿತ್ರೋತ್ಸವದ (ರಿಫ್ಪ್ ) ಅಂತಾರಾಷ್ಟ್ರೀಯ ಸ್ಪರ್ಧಾ ವಿಭಾಗದಲ್ಲಿ ಸುಧೀರ್ ಅತ್ತಾವರ್ ನಿರ್ದೇಶನದ ‘ಮಡಿ’ ಚಿತ್ರ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

    ಈ ಚಿತ್ರೋತ್ಸವದಲ್ಲಿ ವಿಶ್ವದ ಹಲವು ದೇಶಗಳಿಂದ ಬಂದ ಐವತ್ತಕ್ಕಿಂತಲೂ ಹೆಚ್ಚು ಸಿನಿಮಾಗಳು ಪ್ರದರ್ಶನಕ್ಕೆ ಆಯ್ಕೆಯಾಗಿದ್ದು, ಈ ಪೈಕಿ ‘ಮಡಿ’ ಚಿತ್ರವು ಅತ್ಯುತ್ತಮ ಸಾಮಾಜಿಕ ಕಳಕಳಿ ಸಾರುವ ಚಿತ್ರ ಮತ್ತು ಸುಧೀರ್ ಅತ್ತಾವರ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಸಿಕ್ಕಿದೆ. ಈ ಚಿತ್ರೋತ್ಸವದಲ್ಲಿ ಅಮೆರಿಕದ ‘ಫಲಾಫಲ್’ ಮತ್ತು ಫ್ರೆಂಚ್ ಭಾಷೆಯ ‘ಸೂಲೇ ಮಿಯೋ’ ಚಿತ್ರಗಳು ಸಾಕಷ್ಟು ಸ್ಪರ್ಧೆ ಒಡ್ಡಿದರೂ, ಅಂತಿಮವಾಗಿ ಕನ್ನಡದ ‘ಮಡಿ’ ಚಿತ್ರವು ತೀರ್ಪುಗಾರರ ಪ್ರಶಂಸೆಗೆ ಪಾತ್ರವಾಗಿ, ಎರಡು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

    ಕರಾವಳಿಯ ಜನಪದ ಕಲೆ ಆಟಿ ಕಳಂಜದ ಹಿನ್ನೆಲೆಯ ಕಥೆ ಇರುವ ಈ ಚಿತ್ರದಲ್ಲಿ ನಟಿ ಮತ್ತು ಗಾಯಕಿ ಎಂ.ಡಿ. ಪಲ್ಲವಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಸಕ್ಸಸ್ ಫಿಲಮ್ಸ್​ ಬ್ಯಾನರ್​ನಡಿ ವಿದ್ಯಾಧರ್ ಶೆಟ್ಟಿ ಮತ್ತು ಸೂರಜ್ ನ್ಯೂನ್ಸ್ ಅವರು ನಿರ್ಮಾಪಕರಾಗಿದ್ದಾರೆ.

    ಸುಧೀರ್ ಅತ್ತಾವರ್ ನಿರ್ದೇಶನದ 'ಮಡಿ' ಚಿತ್ರಕ್ಕೆ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿ
    ಪ್ರಶಸ್ತಿಗಳೊಂದಿಗೆ ನಿರ್ದೇಶಕ ಸುಧೀರ್ ಅತ್ತಾವರ್.
    ಸುಧೀರ್ ಅತ್ತಾವರ್ ನಿರ್ದೇಶನದ 'ಮಡಿ' ಚಿತ್ರಕ್ಕೆ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿ
    ಮಡಿ ಕಿರುಚಿತ್ರಕ್ಕೆ ಲಭಿಸಿರುವ ಎರಡು ಅಂತಾರಾಷ್ಟ್ರೀಯ ಪ್ರಶಸ್ತಿಗಳು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts