More

    ಆಡಂಬರದಿಂದ ದೇವರ ಸಾಕ್ಷಾತ್ಕಾರ ಅಸಾಧ್ಯ

    ಸಾಗರ: ಯಾರನ್ನೋ ಮೆಚ್ಚಿಸಲು, ನಾವು ತುಂಬ ತಿಳಿದುಕೊಂಡಿದ್ದೇವೆ ಎನ್ನುವ ಅಹಂಕಾರಕ್ಕೆ ದೇವರ ಪೂಜೆ ಮಾಡುವುದಲ್ಲ. ಆಡಂಬರ ಮತ್ತು ತೋರುಗಾಣಿಕೆಯಿಂದ ಭಗವಂತನ ಸಾಕ್ಷಾತ್ಕಾರವಾಗದು ಎಂದು ಸಾಗರ ಮಾಧ್ವಸಂಘದ ಅಧ್ಯಕ್ಷ ಡಾ. ಗುರುರಾಜ ಕಲ್ಲಾಪುರ ಹೇಳಿದರು.

    ನಗರದ ಮಾಧ್ವಸಂಘದಲ್ಲಿ ಲೋಕಕಲ್ಯಾಣಾರ್ಥವಾಗಿ ಕಾರ್ತಿಕ ಮಾಸದ ಧಾತ್ರಿ ಹವನ ಮತ್ತು ರಾಘವೇಂದ್ರಸ್ವಾಮಿಗಳ ಅಷ್ಟೋತ್ತರ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿ, ದಾಸರು, ಯತಿಗಳು ತಮ್ಮ ಬದುಕಿನುದ್ದಕ್ಕೂ ಹರಿಸವೋತ್ತವ ತತ್ವ ಸಾರಿದ್ದಾರೆ ಎಂದರು.

    ದೇವರು ನಮಗೆ ಒಲಿಯಲು ಶುದ್ಧ ಭಕ್ತಿ ಮುಖ್ಯ. ಕಾರ್ತಿಕ ಮಾಸದಲ್ಲಿ ದೇವರ ಮುಂದೆ ದೀಪ ಹಚ್ಚಿ ಪ್ರಾರ್ಥಿಸುವುದರಿಂದ ನಮ್ಮ ಪಾಪಗಳೆಲ್ಲ ಕಳೆಯುತ್ತವೆ. ಲೋಕಕ್ಕೆ ತೊಂದರೆಯಾದಾಗಲೆಲ್ಲ ಕೃಷ್ಣ ಬೇರೆ ಬೇರೆ ರೂಪದಲ್ಲಿ ಜನ್ಮ ತಾಳಿದ್ದಾನೆ. ನಮ್ಮ ಎಲ್ಲ ಧಾರ್ವಿುಕ ಗ್ರಂಥಗಳೂ ಕೇವಲ ಪುರಾಣದ ಸಂಗತಿಗಳನ್ನು ತೆರೆದಿಡುವುದಿಲ್ಲ. ಜೀವನ ಸತ್ಯದ ಸತ್ವವನ್ನು ಪರಿಚಯಿಸುತ್ತವೆ ಎಂದು ಹೇಳಿದರು.

    ಯಾವುದೇ ಮಂಗಳ ಕಾರ್ಯಗಳನ್ನು ಮಾಡುವಾಗ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರವನ್ನು ಮಾಡುವುದರಿಂದ ಕಾರ್ಯಸಿದ್ಧಿಯಾಗುತ್ತದೆ. ರಾಘವೇಂದ್ರ ಸ್ವಾಮಿಗಳು ಮಧ್ವಾಚಾರ್ಯರ ಎಲ್ಲ ಗ್ರಂಥಗಳಿಗೆ ಟಿಪ್ಪಣಿ ಬರೆದು ಶಾಸ್ತ್ರವನ್ನು ಸುಲಭವಾಗಿ ಅರ್ಥೈಸಿಕೊಳ್ಳುವಂತೆ ಮಾಡಿಕೊಟ್ಟಿದ್ದಾರೆ. ಮನುಷ್ಯ ಭಕ್ತಿ, ಜ್ಞಾನ ಮತ್ತು ಧರ್ಮವನ್ನು ಸದಾ ಕಾಪಾಡಿಕೊಂಡು ಬರಬೇಕು ಎಂದರು.

    ಮಾಧ್ವ ಸಂಘದ ಉಪಾಧ್ಯಕ್ಷ ವೆಂಕಟೇಶ ಕಟ್ಟಿ, ಕಾರ್ಯದರ್ಶಿ ಅನಂತರಾವ್, ಶ್ರೀಶಾಚಾರ್, ಆನಂದ್ ಕಲ್ಯಾಣಿ, ಬದರೀಶ್, ವೈ. ಮೋಹನ್, ಹರಿಶ್ಚಂದ್ರ ಭಟ್, ಸಾಬಾಜಿ, ರಘುನಂದನ ಪುರೋಹಿತ್, ರಾಘವೇಂದ್ರ ಕಲ್ಲಾಪುರ, ಮುರಳೀಧರ ಹತ್ವಾರ್, ಸಹನಾ ಭಟ್, ಮಂಜುಳಾ, ಪ್ರಾಣೇಶಾಚಾರ್ ಆನಂದಪುರ, ಅರ್ಚನಾ, ಗೋಪಾಲ್ ಕೌಜಲಗಿ, ಶ್ರೀದೇವಿ, ಭಾಗ್ಯಲಕ್ಷ್ಮೀ ಇದ್ದರು. ಧಾತ್ರಿಹವನದ ಧಾರ್ವಿುಕ ಕಾರ್ಯಕ್ರಮಗಳನ್ನು ಬಾಲಚಂದ್ರ ಜೋಯ್್ಸ ನೆರವೇರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts