More

    ರೈತರಿಗಾಗಿ ಗುಣಮಟ್ಟದ ಮಾರುಕಟ್ಟೆ

    ಮುಧೋಳ: ಗುಣಮಟ್ಟದ ಕೃಷಿ ಉಪಯೋಗಿ ಹಾಗೂ ದಿನಬಳಕೆ ವಸ್ತುಗಳನ್ನು ಯೋಗ್ಯ ದರದಲ್ಲಿ ಸಹಕಾರಿ ತತ್ವದಡಿ ರೈತರಿಗೆ ದೊರೆಯುವಂತೆ ಮಾಡುವುದು ಪ್ರಜ್ವಲ್ ವಿವಿಧೋದ್ದೇಶ ಸಹಕಾರಿ ಮಳಿಗೆ ಶಾಖೆ ಉದ್ದೇಶವಾಗಿದೆ ಎಂದು ಎಂ.ಆರ್. ನಿರಾಣಿ ಉದ್ಯಮ ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಸಂಗಮೇಶ ನಿರಾಣಿ ಹೇಳಿದರು.

    ಮಹಾಲಿಂಗಪುರ ನಗರದಲ್ಲಿ ಪ್ರಜ್ವಲ್ ಸಹಕಾರಿ ಮಳಿಗೆ ಶಾಖೆಯನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ರೈತ ಕುಟುಂಬಗಳು ಸಮೃದ್ಧವಾಗಿರಬೇಕು ಎಂಬುದು ಮುರುಗೇಶ ನಿರಾಣಿ ಅವರ ಆಶಯವಾಗಿದೆ. ಪ್ರಜ್ವಲ್ ಸಹಕಾರಿ ಮೂಲಕ ಅಗ್ರಿಮಾರ್ಟ್‌ನಡಿ ರಸಗೊಬ್ಬರ, ಕೀಟನಾಶಕ, ಬೀಜಗಳು, ಪಂಪ್‌ಸೆಟ್, ಪೈಪ್‌ಗಳು ಸೇರಿ ಎಲ್ಲ ಕೃಷಿ ಉಪಕರಣಗಳು ಹಾಗೂ ಎಂ.ಆರ್.ಎನ್ (ನಿರಾಣಿ) ಸೂಪರ್‌ಮಾರ್ಕೆಟ್ ಮೂಲಕ ದಿನಸಿ, ಜವಳಿ, ಆಭರಣ ಹಾಗೂ ದಿನಬಳಕೆ ವಸ್ತುಗಳನ್ನು ರೈತರಿಗೆ ಒಂದೇ ಸೂರಿನಡಿ ದೊರೆಯುವ ವ್ಯವಸ್ಥೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಜಮಖಂಡಿ, ಗದ್ದನಕೇರಿ ಕ್ರಾಸ್ ಸೇರಿ ತಾಲೂಕು ಕೇಂದ್ರಗಳಲ್ಲಿ ಶಾಖೆ ಪ್ರಾರಂಭಿಸುವ ಯೋಜನೆ ಹೊಂದಲಾಗಿದೆ ಎಂದು ಹೇಳಿದರು.

    ಷೇರು ಸಂಗ್ರಹಣೆ
    ಅಗ್ರಿಮಾರ್ಟ್‌ನ್ನು ಸಹಕಾರ ತತ್ವದಡಿ ರೈತ ಸಮೂಹದೊಂದಿಗೆ ಜಂಟಿಯಾಗಿ ನಿರ್ವಹಿಸುವ ಯೋಜನೆ ಹೊಂದಲಾಗಿದೆ. ರೈತ ಸಮುದಾಯದಿಂದ ಷೇರು ಸಂಗ್ರಹಿಸಿ ರೈತರಿಗೆ ಯೋಗ್ಯ ದರದಲ್ಲಿ ಗುಣಮಟ್ಟದ ವಸ್ತುಗಳನ್ನು ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಜತೆಗೆ ಷೇರುದಾರರಿಗೆ ವಾರ್ಷಿಕ ನಿಶ್ಚಿತ ಲಾಭಾಂಶ ವಿತರಿಸುವ ಸದುದ್ದೇಶ ಹೊಂದಲಾಗಿದೆ ಎಂದು ಸಂಗಮೇಶ ನಿರಾಣಿ ಹೇಳಿದರು.

    ಸಿದ್ಧಾರೂಢ ಮಠದ ಸಹಜಾನಂದ ಸ್ವಾಮೀಜಿ, ಸದಾಶಿವ ಗುರೂಜಿ, ಮಲ್ಲಪ್ಪ ಪೂಜೇರಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಮಹಾಲಿಂಗಪ್ಪ ಅಂಗಡಿ, ದುಂಡಪ್ಪ ಜಾಧವ, ಪರಮಾನಂದ ಆಲಗೂರ, ಸಂಗಪ್ಪ ಹಳ್ಳಿ, ಅಲ್ಲಪ್ಪ ಯಡಹಳ್ಳಿ, ಚನ್ನಪ್ಪ ಪಟ್ಟಣಶೆಟ್ಟಿ, ಸುನೀಲ ಕಡಪಟ್ಟಿ, ಸೋಮು ಸಂಶಿ, ಸಂಜು ಅಂಬಿ, ಬಸವರಾಜ ದಲಾಲ, ರಾಜು ಬಗನಾಳ, ಹನುಮಂತ ಕೊಣ್ಣೂರ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts