More

    ಲಡಾಖ್​​ ಗಡಿಯಲ್ಲಿ ಸ್ವದೇಶಿ ನಿರ್ಮಿತ ಶಸ್ತ್ರಸಜ್ಜಿತ ಯುದ್ಧ ವಾಹನ ನಿಯೋಜನೆ

    ನವದೆಹಲಿ: ಭಾರತೀಯ ಸೇನೆಗೆ ಸೇರ್ಪಡೆಯಾಗಿದ್ದ ಸ್ವದೇಶಿ ನಿರ್ಮಿತ ಯುದ್ಧ ವಾಹನವನ್ನು ಲಡಾಖ್​ನ ಗಡಿಯಲ್ಲಿ ಶುಕ್ರವಾರ ನಿಯೋಜಿಸಲಾಗಿದೆ.

    ಉತ್ತರ ಭಾಗದ ಸೇನಾ ಕಮಾಂಡರ್ ಲೆಫ್ಟಿನೆಂಟ್​ ಜನರಲ್​ ಉಪೇಂದ್ರ ದ್ವಿವೇದಿ ಅವರು ಈ ವಾಹನ ಚಾಲನೆ ಮೂಲಕ ಗಡಿಯಲ್ಲಿ ನಿಯೋಜನೆಗೆ ಹಸ್ತಾಂತರಿಸಿದರು.

    ಗುಡ್ಡಗಾಡು ಪ್ರದೇಶದಲ್ಲಿ ಈ ವಾಹನ ಸುಲಭವಾಗಿ ಚಲಿಸಬಲ್ಲದು, ಅಲ್ಲದೇ ಶಸ್ತ್ರ ಸಜ್ಜಿತ ಈ ವಾಹನ ಶತ್ರುಗಳ ಜತೆ ಹೋರಾಟಕ್ಕೂ ಹೆಚ್ಚು ಸಹಕಾರಿಯಾಗಲಿದೆ ಎಂದು ತಿಳಿಸಿದರು.

    ಒಬ್ಬರು ಈ ವಾಹನವನ್ನು ಸುಲಭವಾಗಿ ಚಲಾಯಿಸಿದರೆ, ಮತ್ತೊಬ್ಬರು 1800 ಮೀಟರ್​ ದೂರದವರೆಗೂ ಶತ್ರುವಿನ ಮೇಲೆ ಕಣ್ಣಿಡಬಹುದಾಗಿದೆ. ವಾಹನದಲ್ಲೇ ಶಸ್ತ್ರ ದಾಳಿ ನಡೆಸಬಹುದಾದ ಸುಸಜ್ಜಿತ ವಾಹನ ಇದಾಗಿದೆ ಎಂದು ವಿವರಿಸಿದರು.

    ಇನ್​ಫ್ರಾಂಟ್ರಿ ಪ್ರೊಟೆಕ್ಟೆಡ್​​ ಮೊಬಿಲಿಟಿ ವೆಹಿಕಲ್ಸ್​ (ಐಪಿಎಂವಿಎಸ್​) ಎಂದು ಕರೆಯಲ್ಪಡುವ ಈ ವಾಹನವನ್ನು ಡಿಆರ್​ಡಿಒ ಹಾಗೂ ಟಾಟಾ ಸಂಸ್ಥೆ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts