More

    VIDEO|ಶೀಘ್ರವೇ ಮಾರುಕಟ್ಟೆ ಪ್ರವೇಶಿಸಲಿದೆ ಮತ್ತೊಂದು ಇಲೆಕ್ಟ್ರಿಕ್ ಮೋಟಾರ್​ ಸೈಕಲ್​

    ನವದೆಹಲಿ: ಭಾರತೀಯ ಮಾರುಕಟ್ಟೆಗೆ ಶೀಘ್ರವೇ ಮತ್ತೊಂದು ಇಲೆಕ್ಟ್ರಿಕ್ ಮೋಟಾರ್ ಸೈಕಲ್ ಪ್ರವೇಶಿಸುವುದಕ್ಕೆ ಸಿದ್ಧವಾಗಿದೆ. ಒನ್ ಎಲೆಕ್ಟ್ರಿಕ್​ ಮೋಟಾರ್​ಸೈಕಲ್ಸ್​ ಅಭಿವೃದ್ಧಿ ಪಡಿಸಿರುವ ಕ್ರಿಡ್ನ್​ ಈಗಾಗಲೇ ರಸ್ತೆ ಟ್ರಯಲ್​ಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಮುಂದಿನ ತಿಂಗಳಿಂದಲೇ ಗ್ರಾಹಕರ ಕೈ ಸೇರಲಿವೆ.

    ಸದ್ಯ ಪ್ರೀ ಬುಕ್ಕಿಂಗ್ ಪ್ರಾರಂಭವಾಗಿದ್ದು, ಯಾವುದೇ ಶುಲ್ಕ ಅಥವಾ ಠೇವಣಿ ಇರಿಸದೇ ಬುಕಿಂಗ್ ಮಾಡಬಹುದು ಎಂದು ಕಂಪನಿ ತಿಳಿಸಿದೆ.
    ದೆಹಲಿ ಎನ್​ಸಿಆರ್​, ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್​ಗಳಲ್ಲಿ ಬುಕ್ಕಿಂಗ್ ಪ್ರಾರಂಭವಾಗಿದೆ. ಈ ಬೈಕ್ ಗಂಟೆಗೆ ಗರಿಷ್ಠ 95 ಕಿ.ಮೀ. ವೇಗದಲ್ಲಿ ಸಂಚರಿಸುತ್ತದೆ. ದಿನಕ್ಕೆ ನೂರು ಕಿ.ಮೀ. ಒಳಗಡೆ ಪ್ರಯಾಣಿಸುವವರಿಗೆ ಈ ಬೈಕ್ ಹೇಳಿಮಾಡಿಸಿದ್ದು ಎಂಬುದು ಕಂಪನಿಯ ಘೋಷಣೆ.

    ಇದನ್ನೂ ಓದಿ: ಟ್ರಾಫಿಕ್ ವಾರ್ಡ್‌ನ್ ವ್ಯವಸ್ಥೆ ಅನುಷ್ಠಾನ ಅಗತ್ಯ

    ಈ ಬೈಕಿನ ಎಕ್ಸ್​ ಶೋರೂಂ ಬೆಲೆಯನ್ನು ಕಂಪನಿ ಇನ್ನೂ ಅಂದಾಜಿಸಿಲ್ಲ. ಆದರೆ ಲಕ್ಷದ ಮೇಲೆ ಹೋಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್)

    VIDEO| ಗೋಲ್ಡನ್ ಏರೋಸ್ ಸೇರ್ಪಡೆಯನ್ನು ಭಾರತೀಯ ವಾಯುಪಡೆ ಸಂಭ್ರಮಿಸಿದ್ದು ಹೀಗೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts