More

    ಪರಪ್ಪನ ಅಗ್ರಹಾರ ಜೈಲಿನಲ್ಲಿ ಮಾಡಾಳ್ ವಿರೂಪಾಕ್ಷಪ್ಪ; ಕೈದಿ ಸಂಖ್ಯೆ 3411

    ಬೆಂಗಳೂರು: ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ದಿನಗಳ ಪೊಲೀಸ್ ಕಸ್ಟಡಿ ಮುಗಿದ ಹಿನ್ನೆಲೆ ಲೋಕಾಯುಕ್ತ ಪೊಲೀಸರು ನಿನ್ನೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಮಾಡಾಳ್​ ವಿರೂಪಾಕ್ಷಪ್ಪಗೆ 14 ದಿನ ನ್ಯಾಯಾಂಗ ಬಂಧನ ನೀಡಿ ಆದೇಶ ನೀಡಿತ್ತು.

    ಇದನ್ನೂ ಓದಿ: ವರುಣಾ ಮತ್ತು ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ; ಆದರೆ…!

    ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಾಡಾಳ್ ವಿರೂಪಾಕ್ಷಪ್ಪಗೆ ಕೈದಿ ಸಂಖ್ಯೆ ಲಭಿಸಿದೆ. ನಿನ್ನೆ ರಾತ್ರಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಶಾಸಕ ಮಾಡಾಳ್ ವಿರಪಾಕ್ಷಪ್ಪ ಕೈದಿ ಸಂಖ್ಯೆ 3411. ನಿನ್ನ ರಾತ್ರಿ ತಡವಾಗಿ ಜೈಲಿಗೆ ಬಂದಿದ್ದ ಹಿನ್ನೆಲೆ ಕೈದಿ ನಂ. ನೀಡಲು ಸಾಧ್ಯವಾಗಿರಿಲ್ಲ. ಹೀಗಾಗಿ ಇಂದು ಮಧ್ಯಾಹ್ನ ಜೈಲು ಅಧಿಕಾರಿಗಳು ಕೈದಿ ಸಂಖ್ಯೆ ನೀಡಿದ್ದಾರೆ.

    ಮಾಡಾಳ್ ವಿರುಪಾಕ್ಷಪ್ಪ ಬೆಳಗ್ಗೆಯಿಂದಲೂ ಆತಂಕದಲ್ಲಿದ್ದು, ತಮ್ಮ ಕೊಠಡಿಯಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಬಿಪಿ ಹಾಗೂ ಉಸಿರಾಟದ ತೊಂದರೆಗೆ ಒಂದೇ ಸಮಯಕ್ಕೆ ಐದಾರು ಮಾತ್ರೆ ಸೇವಿಸಿದ್ದಾರೆ. ಜೈಲಿನ ನಿಯಮದಂತೆ ಅನ್ನ, ಚಾಪಾತಿ ಹಾಗೂ ಪಲ್ಯ ಸಹಿತ ಅಧಿಕಾರಿಗಳು ಊಟ ನೀಡಿದ್ದಾರೆ. ಸದ್ಯ ಮಾಡಾಳ್ ವಿರೂಪಾಕ್ಷ ಇರುವ ಕೊಠಡಿಯಲ್ಲಿ ಯಾವುದೇ ಟಿವಿ ಇಲ್ಲವಾಗಿದ್ದು, ಬೇಡಿಕೆ ಇಟ್ಟರಷ್ಟೇ ಟಿವಿ ಇರುವ ಕೊಠಡಿಗೆ ಶಿಫ್ಟ್ ಆಗಲಿದ್ದಾರೆ. ಇದನ್ನೂ ಓದಿ: ಕೊರಗ ಭಾಷೆಯಲ್ಲಿ ಆಮಂತ್ರಣ ಪತ್ರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts