More

    ಉತ್ತರ ಭಾರತದಿಂದ ಮಾದಕ ಚಾಕೊಲೇಟ್ ಸರಬರಾಜು

    ಮಂಗಳೂರು: ನಗರದ ರಥಬೀದಿಯ ಪೂಜಾಸಾಮಗ್ರಿ ಅಂಗಡಿಯೊಂದರಲ್ಲಿ ಬುಧವಾರ ಸುಮಾರು 100 ಕೆಜಿ. ಮಾದಕ ಚಾಕಲೇಟ್ ಪತ್ತೆಯಾಗಿದ್ದು, ಈ ಹಿನ್ನಲೆಯಲ್ಲಿ ಬಂದರು ಪೊಲೀಸರು ಶೋಧ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಈ ಚಾಕ್‌ಲೇಟ್‌ಗಳನ್ನು ಉತ್ತರ ಭಾರತದಿಂದ ತರಿಸಿಕೊಳ್ಳುತ್ತಿರುವ ಮಾಹಿತಿ ಲಭ್ಯವಾಗಿದೆ.


    ನಗರದ ಹಲವೆಡೆ ಮಾದಕ ಅಂಶವನ್ನೊಳಗೊಂಡ ಚಾಕಲೇಟ್ ಮಾರಾಟ ಮಾಡುತ್ತಿರುವ ದೂರುಗಳು ಬಂದ ಹಿನ್ನಲೆಯಲ್ಲಿ ಬಂದರು ಇನ್‌ಸ್ಪೆಕ್ಟರ್ ರಾಘವೇಂದ್ರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು. ನಗರದ ರಥಬೀದಿಯಲ್ಲಿ ಮನೋಹರ್ ಶೇಟ್ ಮತ್ತು ನಗರದ ಫಳ್ನೀರ್‌ನ ಗೂಡಂಗಡಿಯಲ್ಲಿ ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ ಎಂಬಾತ ಮಾದಕ ವಸ್ತು ಮಿಶ್ರಿತ ‘ಬಾಂಗ್’ ಎಂಬ ಚಾಕೊಲೆಟ್‌ಗಳನ್ನು ಮಾರಾಟ ಮಾಡುತ್ತಿರುವುದು ಪತ್ತೆಯಾಗಿತ್ತು.


    ಈ ಚಾಕ್‌ಲೇಟ್‌ನಲ್ಲಿ ಒಳಗೊಂಡಿರುವ ಅಂಶವನ್ನು ಪತ್ತೆಹಚ್ಚುವ ದೃಷ್ಟಿಯಿಂದ ಚಾಕ್‌ಲೇಟ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.


    ಶೋಧ ಮುಂದುವರಿಕೆ: ನಗರದ ಬಂದರು, ರಥಬೀದಿ ಸೇರಿದಂತೆ ಸುತ್ತಮುತ್ತಲ ಪ್ರದೇಶದ 60ಕ್ಕೂ ಅಧಿಕ ಅಂಗಡಿಯಲ್ಲಿ ಗುರುವಾರ ಪೊಲೀಸರು ಶೋಧವನ್ನು ಮುಂದುವರಿಸಿದ್ದಾರೆ. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಈ ಮಾದಕ ಚಾಕಲೇಟ್ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts