More

    ಯಶ್​​​ ಕಾಲಿಗೆ ಸೋಂಕು ತಗುಲಿದ್ಯಾ..? ರಾಕಿ ಭಾಯ್​​ ಹೊಸ ಸಿನಿಮಾದ ಶೂಟಿಂಗ್​​​​ ವಿಳಂಬಕ್ಕೆ ಇದೇ ಕಾರಣಾನಾ..!

    Yash infected with polio: ಯಶ್ ನಟನೆಯ ಹೊಸ ಸಿನಿಮಾದ ಕುರಿತಂತೆ ದಿನಕ್ಕೊಂದು ಸುದ್ದಿ ಹೊರ ಬರುತ್ತಿದ್ದರೂ, ಅಧಿಕೃತವಾಗಿ ಚಿತ್ರತಂಡ ಯಾವುದೇ ಮಾಹಿತಿ ಹೊರ ಹಾಕುತ್ತಿಲ್ಲ. ಅಧಿಕೃತ ಮಾಹಿತಿಯನ್ನು ಯಶ್ ಹಂಚಿಕೊಳ್ಳದೇ ಇದ್ದರೂ ಚಿತ್ರದ ನಿರ್ದೇಶಕರು, ನಿರ್ಮಾಣ ಸಂಸ್ಥೆ, ನಾಯಕಿಯ ಹೆಸರು ಎಲ್ಲವೂ ಆಚೆ ಬಂದಿದೆ. ಅವೆಲ್ಲವೂ ಎಷ್ಟು ನಿಜವೋ, ಸುಳ್ಳೋ ಗೊತ್ತಿಲ್ಲ. ಆದರೂ, ದಿನಕ್ಕೊಂದು ಮಾಹಿತಿಯಂತೂ ಸಿಗುತ್ತಿದೆ.


    ಡಿಸೆಂಬರ್ 23ರಿಂದ ಚಿತ್ರೀಕರಣಕ್ಕೆ ಹೋಗಲು ಚಿತ್ರತಂಡ ರೆಡಿಯಾಗಿದೆ ಎನ್ನುವ ಮಾಹಿತಿ ಹರಿದಾಡುತ್ತಿದೆ.ಆದ್ರೆ ಇದೀಗ Box Office – South India ಎಂಬ ಎಕ್ಸ್​​​(ಟ್ವಿಟ್ಟರ್​​​)ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಇದೇ ವಿಡಿಯೋದಿಂದ ಇದೀಗ ಯಶ್​ ಕಾಲಿಗೆ ಪೋಲಿಯೋ ಆಗಿದೆ. ಆದ್ದರಿಂದ Yash19 ಸಿನಿಮಾದ ಶೂಟಿಂಗ್​​ ಡೇಟ್​​ ಮುಂದೂಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.


    ವಿಡಿಯೋದಲ್ಲಿ ಏನಿದೆ?
    Box Office – South India ಎಂಬ ಎಕ್ಸ್​​​(ಟ್ವಿಟ್ಟರ್​​​)ನಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಯಶ್​​ ಲೆಗ್​​ ವರ್ಕೌಟ್​​ನ ವಿಡಿಯೋವೊಂದನ್ನ ಹಂಚಿಕೊಳ್ಳಲಾಗಿದ್ದು, ಯಶ್ ಅವರ ಕಾಲಿಗೆ ಪೋಲಿಯೋ ಸೋಂಕು ತಗುಲಿದೆ. ಸಾಕಷ್ಟು ಮಂದಿ Yash19 ಸಿನಿಮಾದ ಚಿತ್ರೀಕರಣ ಏಕೆ ವಿಳಂಬವಾಗುತ್ತಿದೆ ಎಂದು ಕೇಳುತ್ತಿದ್ದರು. ಅದಕ್ಕೆ ಕಾರಣ ಅವರ ಕಾಲಿಗೆ ಪೋಲಿಯೋ ಆಗಿರೋದು. ಸದ್ಯ ಯಶ್ ಚೇತರಿಸಿಕೊಳ್ಳುತ್ತಿದ್ದು, ನಾವಿಬ್ಬರೂ ಒಂದೇ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದೇವೆ. ಒಮ್ಮೆ ಯಶ್ ಸಂಪೂರ್ಣವಾಗಿ ಚೇತರಿಸಿಕೊಂಡರೆ, yash19 ಪ್ರಾಜೆಕ್ಟ್ ಶೀಘ್ರದಲ್ಲೇ ಪ್ರಾರಂಭವಾಗುತ್ತದೆ ಎಂದು ಬರೆಯಲಾಗಿದೆ.


    ವಿಡಿಯೋದಲ್ಲಿ ಇರೋದು ಯಶ್​​ ಅಲ್ಲ..!
    ಹೀಗೆ ಯಶ್​ ಕಾಲಿಗೆ ಪೋಲಿಯೋ ಆಗಿದೆ ಎಂದು ವಿಡಿಯೋದಲ್ಲಿ ಹೇಳಿದ್ರೆ. ಈ ವಿಡಿಯೋ ಸುಳ್ಳು ಅದರಲ್ಲಿ ಇರೋದು ಯಶ್​ ಅಲ್ವೇ ಅಲ್ಲ. ವಿಡಿಯೋದಲ್ಲಿರುವ ಯಶ್​​​ ಫೇಕ್​​, ಈ ವ್ಯಕ್ತಿಯನ್ನ ಅಮೆಜಾನ್​ ಅಥವಾ ಮೀಶೋ ಆ್ಯಪ್​ನಿಂದ ಆರ್ಡರ್​​ ಮಾಡಿರಬೇಕು ಎಂದು ಸಾಕಷ್ಟು ಮಂದಿ ಕಾಮೆಂಟ್​​ ಮಾಡಿದ್ದಾರೆ. ಇನ್ನೂ ಹಲವರು ಚಿಕ್ಕ ವಯಸ್ಸಿನಲ್ಲಿ ಮಾತ್ರ ಪೋಲಿಯೋ ಬರೋದು. ಪೋಲಿಯೋ ಲಸಿಕೆ ಹಾಕಿಸಿಕೊಳ್ಳದೆ ಹೋದಲ್ಲಿ ಮಾತ್ರ ದೊಡ್ಡವರಿಗೆ ಪೋಲಿಯೋ ಆಗುತ್ತೆ. ಈ ರೀತಿಯಾಗಿ ಸುಳ್ಳು ಸಂದೇಶ ರವಾನಿಸಬೇಡಿ ಎಂದಿದ್ದಾರೆ.ಒಟ್ಟಾರೆ ಈ ವಿಡಿಯೋದಲ್ಲಿ ಇರೋದು ಯಶ್​​​ ಹೌದಾ ಅಲ್ವಾ ಅನ್ನೋ ವಿಚಾರದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಸೋಶಿಯಲ್​​​ ಮೀಡಿಯಾದಲ್ಲಿ ಹೆಚ್ಚು ವ್ಯೂಸ್​​ ಪಡೆದುಕೊಳ್ಳಬೇಕೆಂದು ಈ ರೀತಿ ಮಾಡುವುದು ಎಷ್ಟು ಸರಿ ಎಂದು ನೆಟ್ಟಿಗರು ಆಕ್ರೋಶ ಹೊರ ಹಾಕಿದ್ದಾರೆ.

    ವೈದ್ಯರ ಹೇಳಿಕೆ

    ವೈದ್ಯರು ತಿಳಿಸಿರುವ ಮಾಹಿತಿಯ ಪ್ರಕಾರ 1ರಿಂದ 5 ವರ್ಷದ ಒಳಗೆ ಪೋಲಿಯೋ ಲಸಿಕೆ ಹಾಕಿಸಿಕೊಳ್ಳದೆ ಹೋದಲ್ಲಿ ಮಾತ್ರ ಪೋಲಿಯೋ ಸೋಂಕು ಕಂಡು ಬರುತ್ತದೆ. ಹಾಗಾಗಿ 30-45 ವಯಸ್ಸಿನ ನಂತರ ಪೋಲಿಯೋ ಸೋಂಕು ಹರಡುವುದಿಲ್ಲ. ಶೇ99ರಷ್ಟು ದೊಡ್ಡ ವಯಸ್ಸಿನವರಲ್ಲಿ ಪೋಲಿಯೋ ಸೋಂಕು ಕಾಣಿಸಿಕೊಳ್ಳುವುದೇ ಇಲ್ಲ. ಲಸಿಕೆ ಹಾಕಿಸಿಕೊಂಡರೆ ಪೋಲಿಯೋ ಸೋಂಕು ಕಂಡು ಬರೋದೇ ಇಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts