More

    ‘ಸರ್ಕಾರಕ್ಕೆ ಜನರ ಜೀವದ ಬಗ್ಗೆ ಕಾಳಜಿಯಿಲ್ಲ’ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಲಯ

    ನವದೆಹಲಿ: ದೇಶದಾದ್ಯಂತ ಕರೊನಾ ಸೋಂಕಿತರ ಸಂಖ್ಯೆಯಲ್ಲಿ ದಿನೇದಿನೆ ಭಾರೀ ಪ್ರಮಾಣದ ಏರಿಕೆ ಕಾಣುತ್ತಿದೆ. ನವದೆಹಲಿ ಸೇರಿ ಅನೇಕ ರಾಜ್ಯಗಳಲ್ಲಿ ಆಕ್ಸಿಜನ್​ ಕೊರತೆ ಕಂಡುಬಂದಿದ್ದು, ಈ ವಿಚಾರವಾಗಿ ದೆಹಲಿ ಹೈ ಕೋರ್ಟ್​ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

    ದೆಹಲಿಯ ಆಸ್ಪತ್ರೆಗಳಲ್ಲಿ ಆಕ್ಸಿಜನ್​ ಕೊರತೆ ಉಂಟಾಗಿರುವ ಕುರಿತಾಗಿ ಮ್ಯಾಕ್ಸ್​ ಗ್ರೂಪ್​ ಹೈ ಕೋರ್ಟ್​ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆ ಮಾಡಿದ ನ್ಯಾಯಾಲಯ ಕೇಂದ್ರವನ್ನು ಪ್ರಶ್ನಿಸಿದೆ. ದೇಶದ ಎಲ್ಲ ಆಸ್ಪತ್ರೆಗಳಿಗೆ ಆಕ್ಸಿಜನ್​ ಪೂರೈಕೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಹೀಗಿರುವಾಗ ಸರ್ಕಾರ ಇಷ್ಟೊಂದು ಅಸಡ್ಡೆ ಏಕಾಗಿ ತೋರಿಸುತ್ತಿದೆ? ಜನರ ಜೀವದ ಬಗ್ಗೆ ಸರ್ಕಾರಕ್ಕೆ ಕಾಳಜಿ ಇಲ್ಲ ಎನ್ನುವುದನ್ನು ಇದು ತೋರಿಸುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

    ಇಂಟಸ್ಟ್ರಿಗಳ ಆಕ್ಸಿಜನ್​ ಬಳಕೆ ಮಾಡಿಕೊಳ್ಳುವ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ನ್ಯಾಯಾಲಯ ಈಗಾಗಲೇ ಸರ್ಕಾರಕ್ಕೆ ಸೂಚಿಸಿದೆ. ಆ ಬಗ್ಗೆ ಏನು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಇಂದು ಪ್ರಶ್ನಿಸಲಾಗಿದೆ. ಪೇಪರ್​ ವರ್ಕ್​ ನಡೆಸುತ್ತಿರುವುದಾಗಿ ಸರ್ಕಾರ ತಿಳಿಸಿದ್ದು, ಅದಕ್ಕೆ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ಎಲ್ಲ ಇಂಡಸ್ಟ್ರಿಗಳು ಸಹಾಯ ಹಸ್ತ ಚಾಚಲು ಸಿದ್ಧಯಿವೆ. ನಿಮ್ಮದೇ ಸರ್ಕಾರವಿರುವ ರಾಜ್ಯಗಳಲ್ಲಿ ಪೆಟ್ರೋಲಿಯಂ ಸಂಸ್ಥೆಗಳಿವೆ. ಹಾಗಿದ್ದರೂ ಆಕ್ಸಿಜನ್​ ಪಡೆಯಲು ಇಷ್ಟು ಸಮಯ ಬೇಕೇ? ಎಂದು ನ್ಯಾಯಾಲಯ ಕೇಳಿದೆ.

    ಪ್ರತಿಯೊಬ್ಬ ಮನುಷ್ಯನಿಗೆ ಆಕ್ಸಿಜನ್​ ನೀಡುವುದು ಸರ್ಕಾರದ ಕೆಲಸ. ಹಾಗೆ ಮಾಡದಿದ್ದರೆ ಮನುಷ್ಯನ ಜೀವಿಸುವ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಎಲ್ಲ ಇಂಡಸ್ಟ್ರಿಗಳಿಂದ ಸಂಪೂರ್ಣವಾಗಿ ಆಕ್ಸಿಜನ್​ ಪಡೆದಾದರೂ ಜನರ ಜೀವ ರಕ್ಷಿಸಬೇಕು ಎಂದು ಸರ್ಕಾರಕ್ಕೆ ಸೂಚಿಸಲಾಗಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts