More

    ‘ವ್ಹೀಲ್ ಚೇರ್ ರೋಮಿಯೋ’ನ ಕನಸಿನ ಹಾಡಿಗೆ ಎಂಟು ಲಕ್ಷ ಹಿಟ್ಸ್​ …

    ಬೆಂಗಳೂರು: ಕಾಲು ಕಳೆದುಕೊಂಡಿರುವ ಯುವಕ ಮತ್ತು ಕಣ್ಣಿಲ್ಲದಿರುವ ಯುವತಿ ಒಟ್ಟಾದಾಗ ಏನಾಗಬಹುದು? ಏನಾಗುತ್ತದೋ ಗೊತ್ತಿಲ್ಲ. ಆದರೆ, ‘ವ್ಹೀಲ್​ಚೇರ್​ ರೋಮಿಯೋ’ ಎಂಬ ಚಿತ್ರವಂತೂ ಕನ್ನಡ ಚಿತ್ರರಂಗದಲ್ಲಿ ಸದ್ದಿಲ್ಲದೆ ಆಗಿದೆ.

    ಇದನ್ನೂ ಓದಿ: ಕರೊನಾ ಮೆಟ್ಟಿ ನಿಲ್ಲೋಣ, ಕೊರೋನಾ ಸುಟ್ಟು ಸಾಗೋಣ …

    ‘ವ್ಹೀಲ್ ಚೇರ್ ರೋಮಿಯೋ’ ಚಿತ್ರದ ಲಿರಿಕಲ್ ಹಾಡನ್ನು ಇತ್ತೀಚೆಗೆ ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆ ಮಾಡಲಾಗಿದೆ. ಬಿಡುಗಡಯಾದ ಐದೇ ದಿನಕ್ಕೆ ಎಂಟು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಈ ಹಾಡು ವೀಕ್ಷಣೆಗೊಂಡು ಜನಪ್ರಿಯವಾಗಿದೆ. ಜಯಂತ ಕಾಯ್ಕಿಣಿ ಬರೆದಿರುವ ‘ಕನಸಿನಲ್ಲಿ ನಾ ನಡೆವೆ …’ ಎಂಬ ಹಾಡನ್ನು ಸಂಜಿತ್​ ಹೆಗ್ಡೆ ಹಾಡಿದ್ದು, ಬಿ.ಜೆ. ಭರತ್​ ಸಂಗೀತ ಸಂಯೋಜಿಸಿದ್ದಾರೆ.

    ‘ವ್ಹೀಲ್ ಚೇರ್ ರೋಮಿಯೋ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಇದರಲ್ಲಿ ತಂದೆ-ಮಗನ‌ ಬಾಂಧವ್ಯದ ಸನ್ನಿವೇಶಗಳು ಹೈಲೈಟ್ಸ್​ ಎಂದು ಹೇಳಲಾಗುತ್ತಿದೆ. ಜಿ.ನಟರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಗುರು ಕಶ್ಯಪ್ ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ಬೆಂಗಳೂರು, ಮುಂಬೈ ಮುಂತಾದ ಕಡೆ ಚಿತ್ರೀಕರಣಗೊಂಡು ಚಿತ್ರ ತೆರೆಗೆ ಬರಲು ಸಿದ್ದವಾಗಿದೆ.

    ಇದನ್ನೂ ಓದಿ: ಎರಡೇ ಪಾತ್ರಗಳ‌ ‘ಅನಿರೀಕ್ಷಿತ’ ಟ್ರೇಲರ್​ಗೆ ಸೆಲೆಬ್ರಿಟಿಗಳ ಮೆಚ್ಚುಗೆ

    ರಾಮ್​ ಚೇತನ್ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ಮಯೂರಿ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಮಿಕ್ಕಂತೆ ಸುಚೇಂದ್ರ ಪ್ರಸಾದ್, ರಂಗಾಯಣ ರಘು, ತಬಲ ನಾಣಿ, ಗಿರೀಶ್ ಶಿವಣ್ಣ ಮುಂತಾದ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಅಗಸ್ತ್ಯ ಕ್ರಿಯೇಷನ್ಸ್ ಮೂಲಕ ಟಿ.ವೆಂಕಟಾಚಲಯ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ.

    ‘ಕೆಜಿಎಫ್ 2’ ಚಿತ್ರದ ಆಡಿಯೋ ಹಕ್ಕು ಲಹರಿ ಮಡಿಲಿಗೆ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts