More

    ಎಲ್‌ಎಸ್‌ಎಸ್ ಸಾಹಿತ್ಯ ಸೇವೆ ಅನುಪಮ: ಸಾಹಿತಿ ಬಾಬು ಕೃಷ್ಣಮೂರ್ತಿ ಹೇಳಿಕೆ

    ಬೆಂಗಳೂರು: ಸಾಹಿತ್ಯವನ್ನು ಸೇವಾ ಕೈಂಕರ್ಯವಾಗಿ, ಆರಾಧನೆ ರೀತಿ ಹೊಣೆಗಾರಿಕೆ ಅರಿತು ಮಾನವೀಯತೆಯನ್ನು ಸಾರಿದವರು ಪ್ರೊ. ಎಲ್.ಎಸ್. ಶೇಷಗಿರಿರಾವ್ ಎಂದು ಸಾಹಿತಿ ಡಾ. ಬಾಬು ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.

    ಕನ್ನಡ ಗೆಳೆಯರ ಬಳಗ ಹಾಗೂ ಸಪ್ನ ಬುಕ್ ಹೌಸ್ ಜಂಟಿಯಾಗಿ ಹಮ್ಮಿಕೊಂಡಿದ್ದ ಪ್ರೊ. ಎಲ್.ಎಸ್. ಶೇಷಗಿರಿರಾವ್ ಶತಮಾನೋತ್ಸವ ವರ್ಷದ ಮಾಸದ ಮಾತು ಉಪನ್ಯಾಸ ಮಾಲೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೌಲ್ಯಗಳಿಗೆ ಬದ್ದವಾಗಿ ಜೀವನ ನಡೆಸಿರುವುದಲ್ಲದೇ ಅಮಿಷಕ್ಕೆ ಒಳಗಾಗದೆ ನಿಷ್ಠೆಯಿಂದ ವೃತ್ತಿ ಬದುಕನ್ನು ಸವೆಸಿದವರು ಎಲ್‌ಎಸ್‌ಎಸ್. ಹಾಗೆಯೇ ತಮಗೆ ದೊರೆತ ಹುದ್ದೆಗಳಿಗೆ ನ್ಯಾಯ ಒದಗಿಸಿ ಅದರ ಗೌರವವನ್ನು ಹೆಚ್ಚಿಸಿದವರು. ಕನ್ನಡ ಸಾಹಿತ್ಯ ಲೋಕದಲ್ಲಿ ಅವರಷ್ಟು ಸಾಹಿತ್ಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದವರು ವಿರಳ ಎಂದರು.

    ಲೇಖಕ ಚ.ಹ.ರಘನಾಥ ಮಾತನಾಡಿ, ಸೃಜನಶೀಲ ಬರಹಗಳ ಮೂಲಕ ಲೇಖಕ ತನ್ನ ಸಮಾಜದೊಂದಿಗೆ ಮುಖಾಮುಖಿ ಆಗುವುದಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಅಂಕಣ ಬರಹಗಳ ಮೂಲಕ ಸಂವಾದಿಸಬಹುದಾಗಿದೆ. ಅಂಕಣಕಾರನಿಗೆ ಹೆಚ್ಚ ಸ್ವಾತಂತ್ರ್ಯವಿರುತ್ತದೆ. ಆದರೂ, ಅಂಕಣ ಬರಹ ಸಾವಾಲಿನದು. ಅಂಕಣಕಾರ ಸಮಾಜದ ಎಲ್ಲ ಆಯಾಮಗಳ ಕುರಿತು ಚರ್ಚಿಸಲು ಅವಕಾಶ ಇರುತ್ತದೆ. ಆದರೆ, ಇಷ್ಟು ವ್ಯಾಪಕ ಸಾಧ್ಯತೆಯಿರುವ ಅಂಕಣಕಾರನಿಗೆ ಅಂಕಣ ಬರಹ ಒಂದು ಸವಾಲು, ಇಂಥ ಸವಾಲುಗಳನ್ನು ಎದುರಿಸಿದ ಎಲ್ಎಸ್‌ಎಸ್ ಹಲವಾರು ಅರ್ಥ ಪೂರ್ಣ ಅಂಕಣ ಬರಹಗಳನ್ನು ರಚಿಸಿದ್ದಾರೆಂದು ವಿಶ್ಲೇಷಿಸಿದರು.

    ಕಾರ್ಯಕ್ರಮದಲ್ಲಿ ಪ್ರೊ. ಎಲ್.ಎಸ್. ಶೇಷಗಿರಿರಾವ್ ಪತ್ನಿ ಭಾರತಿ ಶೇಷಗಿರಿರಾವ್, ಕನ್ನಡ ಹೊರಾಟಗಾರ ವ.ಚ. ಚನ್ನೇಗೌಡ, ಕನ್ನಡ ಗೆಳೆಯರ ಬಳಗದ ರಾ.ನಂ. ಚಂದ್ರಶೇಖರ್, ಸಪ್ನ ಬುಕ್ ಹೌಸ್‌ನ ಮಾಲಿಕ ನಿತಿನ್ ಷಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts