More

    ಕಾನೂನಿನಲ್ಲಿ “ಲವ್​ ಜಿಹಾದ್​” ವ್ಯಾಖ್ಯಾನಿಸಿಲ್ಲ, ಕೇಂದ್ರೀಯ ಸಂಸ್ಥೆಗಳಿಂದಲೂ ಯಾವುದೇ ವರದಿಯಾಗಿಲ್ಲ: ಕೇಂದ್ರ ಗೃಹಸಚಿವಾಲಯ

    ನವದೆಹಲಿ: ಸದ್ಯ ಅಸ್ಥಿತ್ವದಲ್ಲಿರುವ ಕಾನೂನಿನ ಅಡಿಯಲ್ಲಿ “ಲವ್​ ಜಿಹಾದ್​” ಎಂಬ ಪದವನ್ನು ಎಲ್ಲೂ ವ್ಯಾಖ್ಯಾನಿಸಿಲ್ಲ ಹಾಗೂ ಕೇಂದ್ರೀಯ ಏಜೆನ್ಸಿಗಳಿಂದ ಈ ಸಂಬಂಧ ಈವರೆಗೂ ಯಾವುದೇ ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ಸಂಸತ್ತಿನಲ್ಲಿ ತಿಳಿಸಿದೆ.

    ಹಿಂದು ಮತ್ತು ಮುಸ್ಲಿಂ ನಡುವಿನ ಸಂಬಂಧವನ್ನು ಉಲ್ಲೇಖಿಸಿ, ಬಲವಂತವಾಗಿ ಮಹಿಳೆಯರನ್ನು ಮತಾಂತರ ಮಾಡಲಾಗುತ್ತದೆ ಎಂಬುದನ್ನು “ಲವ್​ ಜಿಹಾದ್​” ಎಂಬ ಪದದಿಂದ ಬಲಪಂಥೀಯರು ಸಾಕಷ್ಟು ಬಾರಿ ಇದನ್ನು ಪ್ರಯೋಗ ಮಾಡುತ್ತಿರುತ್ತಾರೆ.

    ಈ ಬಗ್ಗೆ ಮಾತನಾಡಿರುವ ಕೇಂದ್ರ ಗೃಹಸಚಿವಾಲಯದ ರಾಜ್ಯ ಸಚಿವ ಜಿ. ಕಿಶನ್​ ರೆಡ್ಡಿ, ಸಂವಿಧಾನದ ಆರ್ಟಿಕಲ್​ 25 ಅನ್ನು ಉಲ್ಲೇಖಿಸಿ, ಧಾರ್ಮಿಕ ವಿಚಾರಧಾರೆಗಳನ್ನು ಬಹಿರಂಗವಾಗಿ ಒಪ್ಪಿಕೊಳ್ಳುವುದು, ಆಚರಿಸುವುದು ಮತ್ತು ಪ್ರಸಾರ ಮಾಡುವ ಸ್ವಾತಂತ್ರ್ಯವನ್ನು ಇದರ ಅಡಿಯಲ್ಲಿ ಒದಗಿಸಲಾಗಿದೆ ಎಂದು ತಿಳಿಸಿದರು.

    ಕಾನೂನು ಮಟ್ಟಿಗೆ ಲವ್​ ಜಿಹಾದ್​ ಪದವನ್ನು ವ್ಯಾಖ್ಯಾನಿಸಿಲ್ಲ. ಅಂತಹ ಯಾವುದೇ ಪ್ರಕರಣಗಳು ಈವರೆಗೂ ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ವರದಿಯಾಗಿಲ್ಲ ಎಂದು ಪ್ರಶ್ನೆಯೊಂದಕ್ಕೆ ಕೃಷ್ಣನ್​ ರೆಡ್ಡಿ ಉತ್ತರಿಸಿದರು. ಆದಾಗ್ಯೂ ಪರಸ್ಪರ ನಂಬಿಕೆ ಮೇಲೆ ನಡೆದಿರುವ ಎರಡು ಮದುವೆ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳ ನಡೆಸುತ್ತಿರುವುದಾಗಿ ಮಾಹಿತಿ ನೀಡಿದರು.

    ಯಾವುದೇ ಕೇಂದ್ರೀಯ ಸಂಸ್ಥೆಯು ಕೇರಳದಲ್ಲಿ ಕಳೆದ ಎರಡು ವರ್ಷದಲ್ಲಿ ನಡೆದಿರುವ ಲವ್​ ಜಿಹಾದ್​ ಪ್ರಕರಣಗಳನ್ನು ವರದಿ ಮಾಡಿವೆಯೇ ಎಂದು ಕೇರಳದ ಕಾಂಗ್ರೆಸ್​ ನಾಯಕ ಬೆನ್ನೆ ಬೆಹನಾನ್​ ಕೇಳಿದ್ದ ಪ್ರಶ್ನೆಗೆ ಗೃಹ ಸಚಿವಾಲಯ ಇಂದು ಸಂಸತ್ತಿನಲ್ಲಿ ಉತ್ತರ ನೀಡಿತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts