More

    ಬರ್ತ್‌ಡೇ ಗಿಫ್ಟ್ ಆಸೆಗೆ ಬಿದ್ದು 3.95 ಲಕ್ಷ ರೂ. ಕಳೆದುಕೊಂಡ ಮಹಿಳೆ

    ಉಡುಪಿ: ದುಬಾರಿ ಬರ್ತ್‌ಡೇ ಗಿಫ್ಟ್ ಆಸೆಯ ಬಲೆಗೆ ಬಿದ್ದ ಮಹಿಳೆ 3.95 ಲಕ್ಷ ರೂ.ಕಳೆದುಕೊಂಡಿದ್ದಾರೆ.

    ಕಾರ್ಕಳ ತಾಲೂಕಿನ ಅಜೆಕಾರು, ದೆಪ್ಪುತ್ತೆ ನಿವಾಸಿ ಪೂರ್ಣಿಮಾ ಮೋಸ ಹೋದವರು. 15 ದಿನಗಳ ಹಿಂದಷ್ಟೇ ಫೇಸ್‌ಬುಕ್‌ನಲ್ಲಿ ಪರಿಚಯವಾದ ಡಾ.ಲಿವೀಸ್ ಎಂಬಾಕೆ ಜತೆ ಪೂರ್ಣಿಮಾ ಮಾತುಕತೆ ಆರಂಭಿಸಿದ್ದರು. ಹುಟ್ಟುಹಬ್ಬಕ್ಕೆ ಬೆಲೆಬಾಳುವ ಉಡುಗೊರೆ ಕಳುಹಿಸುವುದಾಗಿ ಡಾ.ಲಿವೀಸ್ ಹೇಳಿದ್ದರು. ಅದರಂತೆ, ದೆಹಲಿ ಪಾರ್ಸೆಲ್ ಆಫೀಸ್‌ನಿಂದ ಎಂದು ಕರೆ ಮಾಡಿದವರೊಬ್ಬರು ಯು.ಕೆ. ಯಿಂದ ಬೆಲೆಬಾಳುವ ಪಾರ್ಸೆಲ್ ಬಂದಿದೆ. ಅದನ್ನು ಕಳುಹಿಸಲು 35 ಸಾವಿರ ರೂ.ಕಟ್ಟಬೇಕು. ಪಾರ್ಸೆಲ್ನಲ್ಲಿ ಪೌಂಡ್ ಇದೆ, ಅದನ್ನು ದಾಖಲು ಮಾಡಬೇಕಾದರೆ 95 ಸಾವಿರ ರೂ.ಪಾವತಿಸಬೇಕು ಎಂದು ಸೂಚಿಸಿದ್ದರು. ನಂತರ ರಿಸರ್ವ್ ಬ್ಯಾಂಕ್ ಹೆಸರಲ್ಲಿ ಕರೆ ಮಾಡಿ ಪೌಂಡ್ ಕ್ಲಿಯರೆನ್ಸ್‌ಗೆ ಹಣ ಕಟ್ಟಬೇಕು ಎಂದು ತಿಳಿಸಲಾಯಿತು. ಪೂರ್ಣಿಮಾ ಹಂತಹಂತವಾಗಿ ಹಣ ಪಾವತಿಸಿ, ವಂಚನೆಗೆ ಒಳಗಾಗಿದ್ದಾರೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts