More

    ಹೊರ ಜಿಲ್ಲೆಯವರು ಗ್ರಾಮ ಪ್ರವೇಶಿಸಿದರೆ ಬೀಳುತ್ತೆ ದಂಡ

    ಕೊಳ್ಳೇಗಾಲ: ಕರೊನಾ ಸೋಂಕು ಹರಡುವುದನ್ನು ತಡೆಯಲು ಹೊರ ಜಿಲ್ಲೆಗಳಿಂದ ಬರುವ ಜನರಿಗೆ ಕೆಲ ಗ್ರಾಮಗಳಲ್ಲಿ ಸ್ವಯಂ ನಿರ್ಬಂಧ ವಿಧಿಸಲಾಗಿದೆಯಲ್ಲದೆ, ಸೂಚನೆ ಮೀರಿ ಗ್ರಾಮ ಪ್ರವೇಶಿಸುವವರಿಗೆ 10 ಸಾವಿರ ರೂ. ದಂಡ ವಿಧಿಸಲು ನಿರ್ಣಯ ಕೈಗೊಳ್ಳಲಾಗಿದೆ.


    ಪಟ್ಟಣದ ದೇವಾಂಗಪೇಟೆಯ ಶ್ರೀ ಸುಬ್ರಹ್ಮಣ್ಯೇಶ್ವರಗುಡಿ ಬೀದಿ ಹಾಗೂ ಸಮೀಪದ ಹೊಸ ಬೀದಿಯಲ್ಲಿ ಕರೊನಾ ಸೋಂಕು ಪತ್ತೆಯಾಗಿರುವ ಹಿನ್ನೆಲೆ ತಾಲೂಕು ಆಡಳಿತ ಗುರುವಾರ ಸೀಲ್‌ಡೌನ್ ಮಾಡಿದೆ.


    ದೇವಾಂಗಪೇಟೆಯ ಶ್ರೀಚೌಡೇಶ್ವರಿಗುಡಿ ದೇವಸ್ಥಾನದಲ್ಲಿ ಯಜಮಾನರಾದ ಡಿ.ವಿ.ಚಂದ್ರಶೇಖರ್, ಪಿ.ಎಂ.ಕೃಷ್ಣಯ್ಯ, ಧನಪಾಲ್, ಗಣೇಶ್, ಮುಖಂಡರಾದ ಪರಮೇಶ್ವರಯ್ಯ(ಚಿಂತು), ಸಿ.ಡಿ.ಬಾಬು, ಸಿ.ಶಿವಕುಮಾರ್, ರವೀಂದ್ರ ಅವರು ತುರ್ತು ಸಭೆ ಸೇರಿ ಹಲವು ಮುಂಜಾಗ್ರತಾ ನಿರ್ಣಯ ಕೈಗೊಂಡಿದ್ದು, ದೇವಾಂಗಪೇಟೆಯ 14 ಬೀದಿಗಳಲ್ಲಿ ಶುಕ್ರವಾರದಿಂದ ಹೋಟೆಲ್‌ಗಳನ್ನು ಸಂಪೂರ್ಣ ಬಂದ್ ಮಾಡುವಂತೆ ಹಾಗೂ ಇತರ ಅಂಗಡಿಗಳನ್ನು ಬೆಳಗ್ಗೆ 6ರಿಂದ 11 ಗಂಟೆವರೆಗೆ ಮಾತ್ರ ತೆರೆಯುವುದು ಹಾಗೂ ನಂತರ ಬಂದ್ ಮಾಡಲು ತೀರ್ಮಾನಿಸಿದ್ದಾರೆ.


    ಭೀಮನಗರಕ್ಕೆ ನೋ ಎಂಟ್ರಿ:
    ಪಟ್ಟಣದ ಭೀಮನಗರದ ಶ್ರೀಬಸವನಗುಡಿ ದೇವಸ್ಥಾನದಲ್ಲಿ ಯುಜಮಾನರಾದ ರಾಜಶೇಖರ್, ವಿಜಯ್, ಸಿದ್ದಾರ್ಥ, ಕುಮಾರ್, ಪಿ.ಕೃಷ್ಣರಾಜ್, ಸುರೇಶ್, ಸೋಮಶೇಖರ್ ಅವರು ಸಭೆ ಸೇರಿ ಕರೊನಾ ಬಡಾವಣೆಗೆ ವ್ಯಾಪಿಸದಂತೆ ಕ್ರಮವಹಿಸಲು ಬಡಾವಣೆ ಜನರಿಗೆ ಗುರುವಾರ ಸಂದೇಶ ನೀಡಿದ್ದಾರೆ.


    ಬೆಂಗಳೂರು, ಮೈಸೂರು ಜಿಲ್ಲೆ ಸೇರಿದಂತೆ ಇತರ ಜಿಲ್ಲೆಯಿಂದ ಬರುವರಿಗೆ ಪ್ರವೇಶ ನಿಷೇಧಿಸಲಾಗಿದೆ. ಆಗೊಂದು ವೇಳೆ ಬಡಾವಣೆ ಪ್ರವೇಶಿಸುವರ ಬಳಿ ಕಡ್ಡಾಯಾಗಿ ಕರೊನಾ ಸೋಂಕು ನೆಗೆಟಿವ್ ಪತ್ರ ಇರಬೇಕು ಎಂದು ಷರತ್ತು ವಿಧಿಸಿದ್ದಾರೆ.


    10 ಸಾವಿರ ದಂಡದ ಎಚ್ಚರಿಕೆ: ಪಟ್ಟಣದ ಹೊಸ ಅಣಗಳ್ಳಿ ಬಡಾವಣೆಯಲ್ಲಿ ಗುರುವಾರ ಹಿರಿಯ ಮುಖಂಡರು ಸಭೆ ಸೇರಿ ಕರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ನಿವಾಸಿಗಳೆಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಆಶಾ ಕಾರ್ಯಕರ್ತೆಯರ ಸೂಚನೆ ಪಾಲಿಸಬೇಕು, ಹೊರ ಜಿಲ್ಲೆಯವರು ಬಡಾವಣೆಗೆ ಬರುವುದಾದರೆ ಕಡ್ಡಾಯವಾಗಿ ಕರೊನಾ ಟೆಸ್ಟ್ ನೆಗೆಟಿವ್ ರಿಪೋರ್ಟ್ ತರಬೇಕು. ಅದನ್ನು ಹೊರತುಪಡಿಸಿ ನೇರವಾಗಿ ಬಡಾವಣೆ ಪ್ರವೇಶ ಮಾಡಿದವರಿಗೆ 10 ಸಾವಿರ ರೂ.ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿ ಮೈಕ್ ಮೂಲಕ ಪ್ರಚಾರ ಮಾಡಿದ್ದಾರೆ.


    ಹರಳೆ ಗ್ರಾಮದ ಕುಲಸ್ಥರು ಸಭೆ ಸೇರಿ ಕೋವಿಡ್ 19 ಟೆಸ್ಟ್ ನೆಗೆಟಿವ್ ರಿಪೋರ್ಟ್ ಇಲ್ಲದೆ ಗ್ರಾಮ ಪ್ರವೇಶಿಸುವ ಹೊರ ಜಿಲ್ಲೆಯವರಿಗೆ 10 ಸಾವಿರ ರೂ.ದಂಡ ವಿಧಿಸಲು ನಿರ್ಣಯ ಕೈಗೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts