More

    ಚಾಲಕನನ್ನು ಅಪಹರಿಸಿ ಪಾನ್​ ಮಸಾಲ ಲಾರಿ​ ಹೊತ್ತೊಯ್ದರು !

    ಬೆಂಗಳೂರು : ಮೈಸೂರು ರಸ್ತೆ ನಾಯಂಡನಹಳ್ಳಿ ಜಂಕ್ಷನ್​ನಲ್ಲಿ ಚಾಲಕನನ್ನು ಅಪಹರಣ ಮಾಡಿ, ಪಾನ್​ ಮಸಾಲ ಕ್ಯಾಂಟರ್​ ಲಾರಿ ಕಳವು ಮಾಡಿದ್ದ ದರೋಡೆಕೋರರು, ಕಾಟನ್​ಪೇಟೆ ಸಮೀಪ ಬಿಟ್ಟು ಹೋಗಿದ್ದಾರೆ. ಚಂದ್ರ ಲೇಔಟ್​ ಪೊಲೀಸರು ಕ್ಯಾಂಟರ್​ಅನ್ನು ಪತ್ತೆ ಮಾಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

    ಮೇ 20 ರ ಬೆಳಗ್ಗೆ ವಿಲ್ಸನ್​ ಗಾರ್ಡನ್​ನಲ್ಲಿರುವ ಗೋದಾಮಿನಲ್ಲಿ 48 ಲಕ್ಷ ರೂ. ಮೌಲ್ಯದ ಆರ್​ಎಂಡಿ ಪಾನ್​ ಮಸಾಲವನ್ನು ತುಂಬಿಕೊಂಡು ಚಾಲಕ ಸತೀಶ್​ ಸಿಂದಗಿಗೆ ಹೊರಟ್ಟಿದ್ದರು. ಲಗ್ಗೆರೆಯಲ್ಲಿ ಮತ್ತೊಬ್ಬ ಚಾಲಕನನ್ನು ಹತ್ತಿಸಿಕೊಳ್ಳುವ ಸಲುವಾಗಿ ಬೆಳಗ್ಗೆ 8.30ರಲ್ಲಿ ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್​ನಲ್ಲಿ ಬಲ ತಿರುವು ಪಡೆಯುತ್ತಿದ್ದರು. ಆಗ ಅಲ್ಲಿಗೆ ಆಟೋದಲ್ಲಿ ಬಂದ ದುಷ್ಕರ್ಮಿಗಳು ಕ್ಯಾಂಟರ್​ ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಆಟೋಗೆ ಡಿಕ್ಕಿ ಹೊಡೆದುಕೊಂಡು ಬಂದಿದ್ದೀಯ ಎಂದು ಚಾಲಕನನ್ನು ಕೆಳಗೆಳೆದು ಆಟೋದಲ್ಲಿ ಕೂರಿಸಿಕೊಂಡು ಅಪರಹಣ ಮಾಡಿದ್ದಾರೆ.

    ಇದನ್ನೂ ಓದಿ: ಎಚ್ಚರಿಕೆ ! ಸತ್ತವರ ಬಟ್ಟೆಯನ್ನೂ ಕದಿಯುವವರಿದ್ದಾರೆ !

    ಸ್ವಲ್ಪ ದೂರ ಹೋಗುತ್ತಿದಂತೆ ಚಾಲಕ ಸತೀಶ್​ ತಪ್ಪಿಸಿಕೊಂಡು ಸಾರ್ವಜನಿಕರ ಸಹಾಯದಿಂದ ಲಗ್ಗೆರೆಯಲ್ಲಿದ್ದ ಮತ್ತೊಬ್ಬ ಚಾಲಕನಿಗೆ ಕರೆ ಮಾಡಿ, ಆತನ ಜೊತೆ ನಾಯಂಡಹಳ್ಳಿ ಜಂಕ್ಷನ್​ಗೆ ಬಂದಿದ್ದಾರೆ. ಆದರೆ, ಅಲ್ಲಿ ಕ್ಯಾಂಟರ್​ ಇರಲಿಲ್ಲ. ಕೊನೆಗೆ ಮಾಲೀಕರನ್ನು ಸಂಪರ್ಕ ಮಾಡಿ ಚಂದ್ರಾಲೇಔಟ್​ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

    ತನಿಖೆ ಆರಂಭಿಸಿದ ಇನ್​ಸ್ಪೆಕ್ಟರ್​ ಬ್ರಿಜೇಶ್​ ಮ್ಯಾಥ್ಯೂ ನೇತೃತ್ವದ ತಂಡ ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದಾಗ ಕಾಟನ್​ಪೇಟೆ ಸಮೀಪ ಕ್ಯಾಂಟರ್​ ಪತ್ತೆಯಾಗಿದೆ. ಕ್ಯಾಂಟರ್​​ ಮತ್ತು ಅದರಲ್ಲಿದ್ದ ಸರಕು ಸೇರಿ ಒಟ್ಟು 51 ಲಕ್ಷ ರೂ, ಮೌಲ್ಯದ ವಸ್ತುಗಳು ನಷ್ಟವಾಗುವುದನ್ನು ಪೊಲೀಸರು ತಪ್ಪಿಸಿದ್ದಾರೆ. ಆದರೆ ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ. ಕೆಲವು ಮಾಹಿತಿಗಳು ಲಭ್ಯವಾಗಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    VIDEO | ತುಂಬಿ ತುಳುಕಿದ ಶಾರದಾ ನದಿ; ನೀರಿನಲ್ಲಿ ಸಿಲುಕಿದ್ದ 9 ಜನರ ರಕ್ಷಣೆ

    ಕರೊನಾ ನಿಯಮ ಗಾಳಿಗೆ ತೂರಿ ಅಂದರ್​ ಬಾಹರ್ ! 27 ಜನರ ಬಂಧನ

    VIDEO | ಆ್ಯಂಜಲೀನಾ ಜೋಲಿ ‘ಜೇನುಹುಳಗಳ ದಿನ’ ಆಚರಿಸಿದ್ದು ಹೀಗೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts