More

    video/ ಗಣೇಶ ವಿಸರ್ಜನೆ ಬಳಿಕ ನಡೆಯಿತು ಪವಾಡ!

    ಹುಬ್ಬಳ್ಳಿ: ಗಣೇಶ ಚತುರ್ಥಿ ಮುಗಿದರೂ ಎಲ್ಲೆಡೆ ಹಬ್ಬದ ಸಡಗರ ಇನ್ನೂ ಹಾಗೇ ಇದೆ. ಕರೊನಾ ಆತಂಕದ ನಡುವೆಯೂ ವಿಘ್ನೇಶ್ವರನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಇದೀಗ ಮನೆಯೊಂದರಲ್ಲಿ ಇಟ್ಟಿದ್ದ ಗಣೇಶನನ್ನು ವಿಸರ್ಜನೆ ಮಾಡಿ ವಾಪಸ್​ ಬಂದ ಬಳಿಕ ಆ ಮನೆಯಲ್ಲಿ ಪವಾಡವೊಂದು ನಡೆದಿದೆ ಎಂಬ ಸುದ್ದಿ ಹರಡಿದ್ದು, ಭಕ್ತರು ಇದು ವಿನಾಯಕನ ಪವಾಡ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ.

    ಕುಸುಗಲ್ಲ್ ಗ್ರಾಮದ ಶಂಕರಗೌಡ ಪಾಟೀಲ ಅವರ ಮನೆಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಮೂರ್ತಿ ವಿಸರ್ಜನೆ ನಂತರ ಪವಾಡ ನಡೆದಿದೆ ಎನ್ನಲಾಗುತ್ತಿದ್ದು. ಅದಕ್ಕೆ ಸಾಕ್ಷೀಕರಿಸುವ ವಿಡಿಯೋ ಕೂಡ ಹರಿದಾಡುತ್ತಿದೆ. ಆ ಮನೆಯಲ್ಲಿ ಮಹಿಳೆಯರಿಗೆ ಉಡಿ ತುಂಬುತ್ತಿರುವ ಸಮಯದಲ್ಲಿ ಉಡಿ ತುಂಬಲು ಇಟ್ಟಿದ್ದ ವೀಳ್ಯದೆಲೆ ತನ್ನಷ್ಟಕ್ಕೆ ತಾನೇ ಅಲುಗಾಡಿದೆ. ಅಲ್ಲದೆ ಸ್ವಲ್ಪ ಮೇಲಕ್ಕೂ ಬಂದು ಮತ್ತೆ ಆ ಜಾಗದಲ್ಲೇ ಇದೆ!

    ಇದನ್ನೂ ಓದಿರಿ PHOTO GALLERY| ರಾಜ್ಯದ ಸಮಸ್ತ ಜಿಲ್ಲೆಗಳ ಹೆಸರಿನಲ್ಲಿ ಗಣೇಶ ಚಿತ್ರ ಬರೆದ ಕಲಾವಿದ: ಮಿಸ್​ ಮಾಡ್ದೆ ನೋಡಿ!

    ಮನೆಯಿಂದ ಗಣೇಶನನ್ನು ಹೊರ ಒಯ್ಯುತ್ತಿದ್ದಂತೆ ನಡೆದ ಪವಾಡಕ್ಕೆ ಹುಬ್ಬಳ್ಳಿ ಜನತೆ ಬೆರಗಾಗಿದ್ದಾರೆ. ಇದು ಗಣೇಶನ ಮಹಿಮೆ ಎಂದೆಲ್ಲ ಬಣ್ಣಿಸುತ್ತಿದ್ದಾರೆ. ಉಡಿ ತುಂಬಲು ಇಟ್ಟಿದ್ದ ವೀಳ್ಯದೆಲೆ ಅಲುಗಾಡಿ, ತನ್ನಷ್ಟಕ್ಕೆ ತಾನೇ ಮೇಲೆ ಎದ್ದ ಚಿತ್ರಣವನ್ನು ಅಲ್ಲೇ ಇದ್ದ ಕೆಲವರು ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಆ ದೃಶ್ಯ ವೈರಲ್​ ಆಗಿದೆ. ಗಾಳಿಗೆ ವೀಳ್ಯದೆಲೆ ಅಲುಗಾಡಿರಬೇಕು ಎಂಬ ಮಾತು ಕೇಳಿಬಂದರೂ ಆ ಎಲೆ ಮೇಲೆ ಕೊಬ್ಬರಿ ಮತ್ತು ಹೂವನ್ನೂ ಇಡಲಾಗಿತ್ತು. ಆದರೂ ಆ ಎಲೆ ಅಲುಗಾಡಿದೆ. ಇದರ ಪಕ್ಕದಲ್ಲೇ ಇದ್ದ ಬೇರೆ ವೀಳ್ಯದೆಲೆ ಒಂಚೂರು ಕದಲಿಲ್ಲ. ಇದು ಗಣೇಶನ ಪವಾಡವೇ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.

    ಗಣೇಶ ವಿಸರ್ಜನೆ ಬಳಿಕ ನಡೆಯಿತು ಪವಾಡ!

    ಗಣೇಶ ವಿಸರ್ಜನೆ ಬಳಿಕ ನಡೆಯಿತು ಪವಾಡ!ಇಲ್ನೋಡಿ ವೀಳ್ಯದೆಲೆ ಮತ್ತು ಅದರ ಮೇಲಿರುವ ಕೊಬ್ಬರಿ, ಹೂವು ತನ್ನಷ್ಟಕ್ಕೆ ತಾನೇ ಹೇಗೆ ಅಲುಗಾಡುತ್ತಿದೆ ಎಂದು. ಹುಬ್ಬಳ್ಳಿಯ ಕುಸುಗಲ್ಲ್ ಗ್ರಾಮದ ಶಂಕರಗೌಡ ಪಾಟೀಲ ಅವರ ಮನೆಯಲ್ಲಿ ಗೌರಿ-ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿತ್ತು. ಮೂರ್ತಿ ವಿಸರ್ಜನೆ ನಂತರ ಆ ಮನೆಯಲ್ಲಿ ಮಹಿಳೆಯರಿಗೆ ಉಡಿ ತುಂಬುತ್ತಿರುವ ಸಮಯದಲ್ಲಿ ವೀಳ್ಯಾದೆಲೆ ತನ್ನಷ್ಟಕ್ಕೆ ತಾನೇ ಅಲುಗಾಡಿದೆ, ಸ್ವಲ್ಪ ಮೇಲಕ್ಕೂ ಬಂದು ಮತ್ತೆ ಆ ಜಾಗದಲ್ಲೇ ಇದೆ! ಇದು ಗಣೇಶನ ಪವಾಡ ಎನ್ನಲಾಗಿದ್ದು ವಿಡಿಯೋ ವೈರಲ್​ ಆಗಿದೆ. #LordGanesha #Miracle #Hubli

    Posted by Vijayavani on Sunday, August 23, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts