More

    ಲೋಪದೋಷ ಕಂಡರೆ ನಿರ್ದಾಕ್ಷಿಣ್ಯ ಕ್ರಮ

    ಸಂಕೇಶ್ವರ: ರಾಜ್ಯದಲ್ಲಿ ಪಡಿತರ ಚೀಟಿ ಹಾಗೂ ಪಡಿತರ ವಿತರಣೆಯಲ್ಲಿ ಲೋಪದೋಷ ಅಥವಾ ಭ್ರಷ್ಟಾಚಾರ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

    ಪಟ್ಟಣದ ದಿ. ಹುಕ್ಕೇರಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ಗೋದಾಮಿಗೆ ಶುಕ್ರವಾರ ಭೇಟಿ ನೀಡಿ ಅನ್ನಭಾಗ್ಯ ಗೋದಾಮು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

    ಈ ಹಿಂದೆ ಅರ್ಜಿ ಸಲ್ಲಿಸಿದ್ದ ಲಾನುಭವಿಗಳಿಗೆ ಪಡಿತರ ಚೀಟಿ ವಿತರಣೆ ಕಾರ್ಯ ನಡೆದಿದೆ. ಈ ಸಂಬಂಧ ಯಾವುದೇ ಅಧಿಕಾರಿಗಳು ಹಣ ಪಡೆದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಹುಕ್ಕೇರಿ ತಾಲೂಕಿನ ಬಾಡ ಗ್ರಾಮದಲ್ಲಿ ಈ ಕುರಿತು ದೂರು ಬಂದಿದ್ದು ತನಿಖೆ ನಡೆಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.

    ಈಗಾಗಲೇ ಐದು ಕೆಜಿ ಅಕ್ಕಿ ಜತೆ ಪ್ರತಿ ಲಾನುಭವಿಗೆ 170 ರೂ. ಸಂದಾಯ ಮಾಡುತ್ತಿದ್ದು, ಸರ್ಕಾರಿ ಯೋಜನೆ ಮನೆ ಬಾಗಿಲಿಗೆ ತಲುಪಿಸುವಲ್ಲಿ ಇಲಾಖೆ ಕಾರ್ಯೋನ್ಮುಖವಾಗಿದೆ. ನ್ಯಾಯಬೆಲೆ ಅಂಗಡಿ, ಆಹಾರ ಸಾಗಣೆ, ಸಂಸ್ಕರಣೆಯಲ್ಲಿನ ಸಮಸ್ಯೆ ಶೀಘ್ರ ಬಗೆಹರಿಸಲಾಗುವುದು ಎಂದರು.

    ಜು.10ನೇ ತಾರೀಖಿನಿಂದ ನೇರ ನಗದು ವರ್ಗಾವಣೆ (ಡಿಬಿಟಿ) ಪ್ರಾರಂಭಿಸಿದ್ದೇವೆ. ಅನ್ನಭಾಗ್ಯ ಯೋಜನೆಯಡಿ ಅಕ್ಕಿಯ ಅಭಾವ ಇರುವುದರಿಂದ ಹಣ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 10 ಕೆಜಿ ಅಕ್ಕಿ ನೀಡಲಾಗುವುದು.ಸಂಕೇಶ್ವರದಲ್ಲಿ ಗೋದಾಮುಗಳು ಕ್ರಮಬದ್ಧವಾಗಿದೆ ಎಂದು ಹೇಳಿದರು. ದಿನ 15 ದಿನಗಳೊಳಗಾಗಿ ಪರಿಶೀಲಿಸಿ ಅಂತ್ಯೋದಯ, ಬಿಪಿಎಲ್, ಎಪಿಎಲ್ ಕಾರ್ಡ್ ವಿತರಿಸಲು ಸೂಚನೆ ನೀಡಲಾಗಿದೆ ಎಂದರು.

    ಸಚಿವರ ಆಪ್ತ ಕಾರ್ಯದರ್ಶಿ ಡಾ.ನಟರಾಜ, ಜಂಟಿ ನಿರ್ದೇಶಕ ಶ್ರೀಶೈಲ ಕಂಕಣವಾಡಿ, ವಿಭಾಗ ನಿಯಂತ್ರಕ ಮಾಳಿ, ಕಾನೂನು ಮಾಪನ ಇಲಾಖೆ ಸಹಾಯಕ ನಿಯಂತ್ರಕ ರುದ್ರೇಶ ಬಿಸಗುಪ್ಪಿ, ಉಪ ನಿರ್ದೇಶಕಿ ಸುಶೀಲಮ್ಮ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಶಾಂತ ಪಾಟೀಲ, ಗುತ್ತಿಗೆದಾರ ಶಿವಾನಂದ ಮುಡಸಿ, ಆಹಾರ ನಿಗಮದ ಅಧಿಕಾರಿ ಸೋಮೇಶ ಮಗದುಮ್ಮ, ಟಿಎಪಿಸಿಎಂಎಸ್ ವ್ಯವಸ್ಥಾಪಕ ಬಿ.ಎಂ. ಢಂಗಿ, ಶಿರಸ್ತೆದಾರ ಉಸ್ತಾದ್, ಗೋದಾಮು ವ್ಯವಸ್ಥಾಪಕ ಲಕ್ಷ್ಮೀ ಮೇದಾರ, ಆಹಾರ ಇಲಾಖೆ ಸಿಬ್ಬಂದಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts