More

    ಧೀರ್ಘಾವಧಿ ಸಾಲ 10 ರಿಂದ 15 ಲಕ್ಷಕ್ಕೆ ಏರಿಕೆ; ರೈತರಿಗೆ 1600 ಕೋಟಿ ಸಾಲ ನೀಡಿದ ಕೆಎಸ್ಸಿಎಆರ್‌ಡಿಬಿ

    ಬೆಂಗಳೂರು:
    ಕರ್ನಾಟಕ ರಾಜ್ಯ ಸಹಕಾರ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಕೆಎಸ್ಸಿಎಆರ್‌ಡಿಬಿ)ನಲ್ಲಿ ದೀರ್ಘಾವಧಿ ಸಾಲದ ಮೊತ್ತವನ್ನು ಸರ್ಕಾರ 10 ರಿಂದ 15 ಲಕ್ಷಕ್ಕೆ ಏರಿಕೆ ಮಾಡಿದೆ.
    ಗರಿಷ್ಠ 10 ಲಕ್ಷ ತನಕ ಒಬ್ಬ ರೈತರಿಗೆ ಸಾಲ ನೀಡಲು ಮಾತ್ರ ಅವಕಾಶವಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ೋಷಣೆ ಮಾಡಿದಂತೆ 5 ಲಕ್ಷ ರೂ ಏರಿಕೆ ಮಾಡಲಾಗಿದ್ದು, ಈಗ ಗರಿಷ್ಠ 15 ಲಕ್ಷ ರೂ ತನಕ ಸಾಲ ಪಡೆಯಲು ಅವಕಾಶವಿದೆ.
    ಸಾಲದ ಮಿತಿ ಹೆಚ್ಚಳವಾದ ಮೇಲೆ ಬ್ಯಾಂಕ್‌ಗಳಿಗೆ ಸಾಲ ಪಡೆಯಲು ರೈತರಿಂದ ಬೇಡಿಕೆ ಪ್ರಮಾಣವೂ ಏರಿಕೆಯಾಗಿರುವುದು ವಿಶೇಷ.
    ಕರ್ನಾಟಕ ರಾಜ್ಯ ಸಹಕಾರ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಪ್ರತಿ ವರ್ಷ ಸರ್ಕಾರದ ಗ್ಯಾರಂಟಿ ಮೇಲೆ ನಬಾರ್ಡ್‌ನಿಂದ ಸಾಲ ಪಡೆದು ರಾಜ್ಯದಲ್ಲಿರುವ ತಾಲೂಕು ಮಟ್ಟದಲ್ಲಿರುವ 181 ಪಿಎಲ್‌ಡಿ ಬ್ಯಾಂಕ್‌ಗಳಿಗೆ ಕಡಿಮೆ ಬಡ್ಡಿದರದಲ್ಲಿ ನೀಡಲಿದೆ. ಬೆಳೆಸಾಲ ಹೊರತಾಗಿ, ಭೂ ಅಭಿವೃದ್ಧಿ, ಟ್ರಾಕ್ಟರ್ ಸೇರಿದಂತೆ ಕೃಷಿ ಯಂತ್ರೋಪಕರಣಗಳಿಗೆ ಸಾಲವನ್ನು ಪಿಎಲ್‌ಡಿ ಬ್ಯಾಂಕ್ ನೀಡಲಿದೆ.

    1600 ಕೋಟಿ ಸಾಲದ ಗುರಿ:
    ಪ್ರತಿ ವರ್ಷ ರೈತರಿಗೆ 1500 ಕೋಟಿ ರೂ ಮಾತ್ರ ಸಾಲ ನೀಡಲಾಗುತ್ತಿತ್ತು. ಈ ವರ್ಷ 100 ಕೋಟಿ ರೂ ಹೆಚ್ಚುವರಿಯಾಗಿ ಸರ್ಕಾರ ನಬಾರ್ಡ್‌ಗೆ ಗ್ಯಾರಂಟಿ ನೀಡುವಂತೆ ಬ್ಯಾಂಕ್ ಅಧ್ಯಕ್ಷ ಮತ್ತು ಶಾಸಕ ಷಡಾಕ್ಷರಿ ಮುಖ್ಯಮಂತ್ರಿಗಳ ಮನವೊಲಿಕೆ ಮಾಡಿದ್ದರಿಂದ 1600 ಕೋಟಿ ರೂ ಸಾಲವನ್ನು ನೀಡಲಾಗಿದೆ. ರಾಜ್ಯದಲ್ಲಿ 13 ಸಾವಿರ ಜನ ರೈತರಷ್ಟೆ ಸಾಲ ಸೌಲಭ್ಯ ಪಡೆಯುತ್ತಿದ್ದಾರೆ. ಮುಂದಿನ ವರ್ಷ ಹೆಚ್ಚಿನ ರೈತರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಸಾಲದ ಪ್ರಮಾಣ ಇನ್ನು ಹೆಚ್ಚಳ ಮಾಡಲು ಬ್ಯಾಂಕ್ ಪೂರ್ವ ತಯಾರಿ ನಡೆಸುತ್ತಿದೆ.

    250 ಕೋಟಿ ರೂ ಬಾಕಿ:
    ರೈತರು ಬ್ಯಾಂಕ್‌ನಲ್ಲಿ ಅಡಮಾನವಿಟ್ಟು ಸಾಲ ಪಡೆಯುವುದರಿಂದ ಸಾಲ ಕಟ್ಟದೆ ಸುಸ್ತಿಯಾದರೆ ಆಸ್ತಿಯನ್ನು ಹರಾಜು ಹಾಕುವಂತಿಲ್ಲ. ಈ ಹಿನ್ನೆಲೆಯಲ್ಲಿ ನಾನಾ ಕಾರಣಗಳಿಂದ ಬ್ಯಾಂಕ್‌ಗೆ ಸುಮಾರು 250 ಕೋಟಿ ರೂ ಸುಸ್ತಿ ಹಣ ಬರುವುದು ಬಾಕಿಯಾಗಿದೆ.

    *ರೈತರಿಗೆ ನೀಡುವ ಸಾಲದ ಮೊತ್ತವನ್ನು ಹೆಚ್ಚಳ ಮಾಡಿರುವುದರಿಂದ ಹೆಚ್ಚಿನ ರೈತರಿಂದ ಸಾಲಕ್ಕಾಗಿ ಬೇಡಿಕೆ ಬರುತ್ತಿದೆ. ಈ ಬಾರಿ 1600 ಕೋಟಿ ಸಾಲ ನೀಡಲಾಗಿದೆ. ಮುಂದಿನ ವರ್ಷ ಈ ಪ್ರಮಾಣವನ್ನು ಹೆಚ್ಚಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು.
    -ಬಿ.ಸಿ.ಸತೀಶ್, ಎಂಡಿ, ಕೆಎಸ್ಸಿಎಆರ್‌ಡಿಬಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts