More

    40 ಸಾವಿರ ರೂ. ಲಂಚ ಪಡೆಯುವಾಗ ಲೋಕಾ ಬಲೆಗೆ ಬಿದ್ದ ಬೆಸ್ಕಾಂ ಇಂಜಿನಿಯರ್…

    ಬೆಂಗಳೂರು: ಡಿಜಿಟಲ್ ಮೀಟರ್ ಅಳವಡಿಸಲು 40 ಸಾವಿರ ರೂ. ಲಂಚ ಪಡೆಯುತ್ತಿದ್ದ ಬೆಸ್ಕಾಂ ಸಹಾಯಕ ಇಂಜಿನಿಯರ್ ಲೋಕಾಯುಕ್ತ ಪೊಲೀಸರಿಗೆ ಟ್ರ್ಯಾಪ್ ಆಗಿದ್ದಾರೆ. ಬಸವೇಶ್ವರನಗರದ 3ನೇ ಉಪ ವಿಭಾಗ ಕಚೇರಿ ಸಹಾಯ ಇಂಜಿನಿಯರ್ ಆನಂದ್ ಬಂಧಿತ.

    ಹೊಸದಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿ ಡಿಜಿಟಲ್ ಮೀಟರ್ ಅಳವಡಿಸಿ ಆರ್ ಆರ್ ನಂಬರ್ ಕೊಡುವಂತೆ ಕೋರಿ ಬಿ.ಬಿ. ಮಂಜೇಶ್ ಎಂಬಾತ ಬಸವೇಶ್ವರನಗರದ ಬೆಸ್ಕಾಂ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪಡೆದ ಆನಂದ್, 50 ಸಾವಿರ ರೂ. ಲಂಚಕ್ಕೆ ಬೇಡಿಕೆ ಒಡ್ಡಿದ್ದರು. ಇದಕ್ಕೆ ಒಪ್ಪದ ಮಂಜೇಶ್, ಈ ಕುರಿತು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಲೋಕಾಯುಕ್ತ ಪೊಲೀಸರು, ಆರೋಪಿ ಆನಂದ್ ದೂರುದಾರರ ಕಡೆಯಿಂದ 40 ಸಾವಿರ ರೂ. ನಗದು ಪಡೆಯುವಾಗ ಟ್ರ್ಯಾಪ್ ಮಾಡಿದ್ದಾರೆ. ಮಹಜರ್ ನಡೆಸಿ ಆರೋಪಿಯನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts