More

    ಮಾವನ ಮೂಲಕ ಲಂಚ ಪಡೆಯಲು ಹೊರಟಿದ್ದ ಹೆಡ್​ ಕಾನ್ಸ್ಟೇಬಲ್​ ಲೋಕಾ ಬಲೆಗೆ..!

    ದಾವಣಗೆರೆ: ಇಲ್ಲೊಬ್ಬ ಪೊಲೀಸ್​ ಹೆಡ್​ ಕಾನ್ಸ್ಟೇಬಲ್​ ಬೇಡಿಕೆ ಇಟ್ಟಿದ್ದ. ಇದು ಹೇಗೋ ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣ ಕಾರ್ಯಾಚರಣೆಗೆ ಇಳಿದಿರುವ ಲೋಕಾ, ಆರೋಪಿಗಳನ್ನ ಬಂಧಿಸಿದೆ.

    ದಾವಣಗೆರೆ ಜಿಲ್ಲೆ ಹೊನ್ನಾಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಭರತ್ ಎನ್ನುವಾತ ಲಂಚ ಕೇಳಿದ್ದ ಭೂಪ. ಚೆಕ್ ಬೌನ್ಸ್​ ಪ್ರಕರಣದಲ್ಲಿ ಈತ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಹೊನ್ನಾಳಿ ಬಸ್ ನಿಲ್ದಾಣದಲ್ಲಿ ತನ್ನ ಮಾವ ಸುರೇಶ ಮೂಲಕ 15 ಸಾವಿರ ರೂಪಾಯಿ ಲಂಚ ಪಡೆಯಲು ಪ್ರಯತ್ನಿಸಿದ್ದ. ಆದರೆ ಮಧ್ಯ ಪ್ರವೇಶಿಸಿದ ಲೋಕಾಯುಕ್ತರು ಮಾವನನ್ನು ವಶಕ್ಕೆ ಪಡೆದಿದ್ದಾರೆ.

    ಈ ಭರತ್​, ಚೆಕ್ ಬೌನ್ಸ್ ಪ್ರಕರಣದಲ್ಲಿ ತಮಿಳುನಾಡು ಮೂಲದ ಆರೋಪಿತರಿಗೆ ವಾರೆಂಟ್ ಜಾರಿ ಮಾಡಲು 20 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. 20 ರೂಪಾಯಿಯಲ್ಲಿ 15 ಸಾವಿರ ರೂಪಾಯಿಯನ್ನು ತನ್ನ ಮಾವನಿಗೆ ಹೊನ್ನಾಳಿ ಬಸ್ ನಿಲ್ದಾಣದಲ್ಲಿ ಕೊಡಲು ಗುಡ್ಡದ ಮಾದಾಪುರ ಗ್ರಾಮದ ಅವಿನಾಶ ಎಂಬುವವರಿಗೆ ಭರತ್​ ಹೇಳಿದ್ದ.

    ಈ ಭರತ್​, ನೇರವಾಗಿ ಲಂಚದ ಹಣ ಮುಟ್ಟೋದು ಬೇಡ ಎಂದು ತನ್ನ ಮಾವ ಸುರೇಶ ಮೂಲಕ ಪಡೆಯುತ್ತಿದ್ದ. ಇದರ ಜಾಡು ಹಿಡಿದ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ನೇತ್ರತ್ವದಲ್ಲಿ ಇನ್ಸ್​ಪೆಕ್ಟರ್​ಗಳಾದ ರಾಷ್ಟ್ರಪತಿ ಹಾಗೂ ಆಂಜನೇಯ ದಾಳಿ ಮಾಡಿದ್ದಾರೆ. ಇದೀಗ ಹೆಡ್ ಕಾನ್ಸ್ಟೇಬಲ್ ಭರತ್ ಹಾಗೂ ಅವರ ಮಾವ ಸುರೇಶ್ ನನ್ನು ವಶಕ್ಕೆ ಲೋಕಾಯುಕ್ತರು ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts