More

    ಲೋಕಾ ಅಧಿಕಾರಿಗಳ ಬೇಟೆ- ರಾಯಚೂರು, ಬಳ್ಳಾರಿ, ವಿಜಯನಗರದಲ್ಲಿ ದಾಳಿ

    ಗಂಗಾವತಿ: ಲೋಕಾಯುಕ್ತ ಅಧಿಕಾರಿಗಳು ರಾಯಚೂರು, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ಅಕ್ರಮ ಆಸ್ತಿ ಹಿನ್ನೆಲೆಯಲ್ಲಿ ಅಧಿಕಾರಿಗಳ ಕಚೇರಿ, ಮನೆ ಮತ್ತು ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿದರು.

    ರಾಯಚೂರು ನಗರದ ಕ್ಯಾಷುಟೆಕ್ ಮತ್ತು ನಿರ್ಮಿತಿ ಕೇಂದ್ರದ ಯೋಜನಾಧಿಕಾರಿ ಶರಣಬಸಪ್ಪ ಪಟ್ಟೇದ್ ಅವರ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಅಕ್ರಮ ಆಸ್ತಿ ಕುರಿತು ಲೋಕಾಯುಕ್ತ ಎಸ್ಪಿ ಡಾ.ರಾಮ್ ಅರಸಿದ್ದಿ ನೇತೃತ್ವದ ತಂಡವು ಪರಿಶೀಲನೆ ನಡೆಸಿತು.

    ಇದನ್ನೂ ಓದಿ: ರಾಜ್ಯದ ಹಲವೆಡೆ ಏಕಕಾಲದಲ್ಲಿ ಲೋಕಾಯುಕ್ತ ದಾಳಿ!

    ನಗರದ ಗಂಗಾಪರಮೇಶ್ವರಿ ಬಡಾವಣೆಯಲ್ಲಿರುವ ಶರಣಬಸಪ್ಪ ಪಟ್ಟೇದ್ ಮನೆ, ತಾಲೂಕಿನ ಶಕ್ತಿನಗರದಲ್ಲಿನ ಕ್ಯಾಷುಟೆಕ್ ಕಚೇರಿ ಮತ್ತು ದೇವಸುಗೂರಿನ ಅಳಿಯನ ಮನೆ ಮೇಲೆ ಏಕಕಾಲಕ್ಕೆ ಅಧಿಕಾರಿಗಳು ದಾಳಿ ನಡೆಸಿದರು.

    ಶರಣಬಸಪ್ಪ ಪಟ್ಟೇದ್ ಮನೆಯಲ್ಲಿ ಏಳು ತೊಲೆ ಚಿನ್ನಾಭರಣ ಮತ್ತು 15 ಸಾವಿರ ರೂ. ನಗದು ದೊರೆತಿದೆ ಎಂದು ಮೂಲಗಳು ತಿಳಿಸಿವೆ.

    ದೇವಸುಗೂರಿನಲ್ಲಿನ ಶರಣಬಸಪ್ಪ ಪಟ್ಟೇದ್ ಅಳಿಯ ಮನೆಯಲ್ಲಿನ ದಾಖಲೆಗಳ ಪರಿಶೀಲನೆ ಕಾರ್ಯ ನಡೆದಿದೆ. ಸ್ವಗ್ರಾಮ ಚಿಕ್ಕ ಹೆಸರೂರಿನಲ್ಲಿ ಜಮೀನುಗಳ ಮಾಹಿತಿಯನ್ನು ಪಡೆಯಲಾಗಿದೆ.

    ಕಳೆದ ಒಂದು ದಶಕಕ್ಕೂ ಮೇಲ್ಪಟ್ಟು ಕ್ಯಾಷುಟೆಕ್ ಯೋಜನಾಧಿಕಾರಿ ಆಗಿರುವ ಶರಣಬಸಪ್ಪ ಪಟ್ಟೇದ್, ಇತ್ತೀಚೆಗೆ ನಿರ್ಮಿತಿ ಕೇಂದ್ರದ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ.

    ಹಾರೋಬೂದಿ ಬಳಕೆ ತಂತ್ರಜ್ಞಾನ ಅಭಿವೃದ್ಧಿ ಮತ್ತು ಕಡಿಮೆ ಖರ್ಚಿನಲ್ಲಿ ಕಟ್ಟಡ ನಿರ್ಮಾಣ ಸಂಶೋಧನೆಗಾಗಿ ಆರಂಭಿಸಲಾದ ಕ್ಯಾಷುಟೆಕ್‌ಗೆ ರಸ್ತೆ, ಕಟ್ಟಡ ನಿರ್ಮಾಣ ಹಾಗೂ ಸಾಮಗ್ರಿಗಳ ಸರಬರಾಜು ಕೆಲಸವನ್ನು ನೀಡುತ್ತಿರುವ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು.

    ಜಿಲ್ಲಾಧಿಕಾರಿಯೇ ಕ್ಯಾಷುಟೆಕ್ ಮತ್ತು ನಿರ್ಮಿತಿ ಕೇಂದ್ರದ ಅಧ್ಯಕ್ಷರಾಗಿದ್ದರಿಂದ ಕಾಮಗಾರಿಗಳನ್ನು ವಹಿಸುತ್ತಿರುವ ಬಗ್ಗೆ ಯಾರೂ ಪ್ರಶ್ನೆ ಮಾಡುತ್ತಿದ್ದಿಲ್ಲ.

    ಜತೆಗೆ ಹಲವು ಶಾಸಕರು ಕ್ಯಾಷುಟೆಕ್ ಮತ್ತು ನಿರ್ಮಿತಿ ಕೇಂದ್ರಗಳಿಗೆ ಕಾಮಗಾರಿ ವಹಿಸಿ ಅನಧಿಕೃತವಾಗಿ ತಮಗೆ ಬೇಕಾದ ಗುತ್ತಿಗೆದಾರರಿಂದ ಕಾಮಗಾರಿ ಮಾಡಿಸುತ್ತಿರುವ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts