ಹಿಂದುಳಿದ ವರ್ಗಗಳ ಅಭಿವೃದ್ಧಿಯೇ ನಮ್ಮ ಗುರಿ

blank
blank

ಲೋಕಾಪುರ: ಪರಿಶಿಷ್ಟ ಜಾತಿ/ಪಂಗಡ, ಆದಿವಾಸಿ ಹಾಗೂ ಹಿಂದುಳಿದ ವರ್ಗಗಳ ಜನರನ್ನು ಶೈಕ್ಷಣಿಕವಾಗಿ ಮುಂದೆ ತರವುದೇ ನಮ್ಮ ಸರ್ಕಾರದ ಮೊದಲ ಗುರಿ ಮತ್ತು ಆದ್ಯತೆಯಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಸಮೀಪದ ಠಾಣಿಕೇರಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 75 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಡಾ. ಬಾಬು ಜಗಜೀವನ ರಾಂ ಸಮುದಾಯ ಭವನಕ್ಕೆ ಬುಧವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ 2008ರಿಂದ ಇಲ್ಲಿವರಿಗೆ 1400 ಕೋಟಿ ರೂ. ವೆಚ್ಚದಲ್ಲಿ ಒಟ್ಟು 6900 ಸಮುದಾಯ ಭವನಗಳನ್ನು ಮಂಜೂರ ಮಾಡಲಾಗಿದ್ದು, ಅವುಗಳಲ್ಲಿ 2700 ಪೂರ್ಣಗೊಂಡಿವೆ. ಉಳಿದ ಸಮುದಾಯ ಭವನಗಳನ್ನು ಪೂರ್ಣಗೊಳಿಸಲು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ರಾಜ್ಯದಲ್ಲಿ 2834 ವಸತಿಶಾಲೆಗಳು ಹಾಗೂ 2309 ಹಾಸ್ಟೆಲ್‌ಗಳಿವೆ. ಈ ವರ್ಷ ಸಮಾಜ ಕಲ್ಯಾಣ ಇಲಾಖೆಯಿಂದ 200 ಹಾಸ್ಟೆಲ್ ಮತ್ತು 100 ವಸತಿ ಶಾಲೆಗಳನ್ನು ಹೊಸದಾಗಿ ಪ್ರಾರಂಭಿಸಲು ತೀರ್ಮಾನಿಸಲಾಗಿದೆ ಎಂದವರು ತಿಳಿಸಿದರು.

ಜಮೀನು ಇಲ್ಲದ ಪಜಾ/ಪಪಂದವರಿಗೆ 15 ಲಕ್ಷ ರೂ. ವೆಚ್ಚದಲ್ಲಿ ಒಂದರಿಂದ ಎರಡು ಎಕರೆ ಜಮೀನು ನೀಡಲಾಗುತ್ತಿದ್ದು, ಚಾಲನೆ ಪರವಾನಗಿವುಳ್ಳ ನಿರುದ್ಯೋಗ ಯುವಕರಿಗೆ ಮಿನಿಗುಡ್ಸ್ ಹಾಗೂ ಕ್ರೂಸರ್ ವಾಹನಗಳನ್ನು ನೀಡಲಾಗುತ್ತಿದೆ ಎಂದರು.

ಈ ಬಾರಿ ಕುರಿ ಮತ್ತು ಮೇಕೆ ಸಾಕಾಣಿಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಗಂಗಾ ಕಲ್ಯಾಣ ಯೋಜನೆಯಡಿ 28 ಸಾವಿರ ಕೊಳವೆಬಾವಿಗಳನ್ನು ಕೊರೆಯಿಸಲಾಗಿದೆ ಎಂದು ತಿಳಿಸಿದರು.

ಸುಮಂಗಲಿಯರು ಕುಂಭಮೇಳದೊಂದಿಗೆ ಡಿಸಿಎಂ ಕಾರಜೋಳರನ್ನು ಬರಮಾಡಿಕೊಂಡರು. ನಂತರ ಕಾರಜೋಳ ಹಾಗೂ ಬಿಜೆಪಿ ಮುಖಂಡ ಲೋಕಣ್ಣ ಕತ್ತಿ ಅವರನ್ನು ಗ್ರಾಮಸ್ಥರು ಸನ್ಮಾನಿಸಿದರು. ಕೆ.ಆರ್. ಮಾಚಪನ್ನವರ, ಗುರುರಾಜ ಕಟ್ಟಿ, ಲೋಕಣ್ಣ ಕತ್ತಿ, ಯಮನಪ್ಪ ಹೊರಟ್ಟಿ, ಬಿ.ಎಲ್. ಬಬಲಾದಿ, ಮಾರುತಿ ರಂಗನ್ನವರ, ಕುಮಾರ ಹುಲಕುಂದ, ಶಿವನಗೌಡ ಪಾಟೀಲ, ಮಲ್ಲಪ್ಪ ಅಂಗಡಿ, ವಿನೋದ ಘೋರ್ಪಡೆ, ಕಾಶಲಿಂಗ ಮಾಳಿ, ಆಸೀಫ್ ಜೀರಗಾಳ, ವಿಠಲ ಹುಗ್ಗಿ, ಅರುಣ ಮುಧೋಳ, ಸುರೇಶ ಹುಗ್ಗಿ, ಮಹೇಶ ಹುಗ್ಗಿ, ರಂಗಪ್ಪ ಚಿಪ್ಪಲಕಟ್ಟಿ, ರವಿ ರೊಡ್ಡಪ್ಪನವರ, ಯಶವಂತ ಕಾಳಮ್ಮನವರ, ಪರಸಪ್ಪ ಪರಸನ್ನವರ ಲೋಕಾಪುರ ಹಾಗೂ ಠಾಣಿಕೇರಿ ಗ್ರಾಮಸ್ಥರು ಉಪಸ್ಥಿತರಿದ್ದರು.





Share This Article

ಮಳೆಗಾಲದಲ್ಲಿ ಈ ಆಹಾರಗಳಿಂದ ದೂರವಿರಿ..ಇಲ್ಲದಿದ್ದರೆ ಅಪಾಯ ಖಂಡಿತ! Monsoon

Monsoon: ಮಳೆಗಾಲದಲ್ಲಿ ಹವಾಮಾನದ ಬದಲಾವಣೆಯೂ ಆಹಾರದಲ್ಲಿನ ಬ್ಯಾಕ್ಟೀರಿಯಾ, ಶಿಲೀಂಧ್ರಗಳು ಮತ್ತು ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಸೂಕ್ತವಾದ ವಾತಾವರಣವನ್ನು…

ವಾಲ್ನಟ್ಸ್ ತಿನ್ನಲು ಸರಿಯಾದ ಸಮಯ, ದಿನಕ್ಕೆ ಎಷ್ಟು Walnuts ತಿನ್ನಬಹುದು ಗೊತ್ತಾ?

Walnuts: ವಾಲ್ನಟ್ಸ್ ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಪ್ರತಿದಿನ ಸೇವಿಸಬಹುದಾದ ಸೂಪರ್ ನಟ್ ಆಗಿದೆ. ಅವು…