ಕಲಾವಿದರಿಗೆ ಸಹಕಾರ ನೀಡಿ

blank

ಲೋಕಾಪುರ: ಜಾನಪದ ರಂಗಭೂಮಿಗೆ ವಿಶಿಷ್ಟ ಕೊಡುಗೆ ನೀಡಿದ ಬಯಲಾಟ ಕಲಾವಿದರ ಸೇವೆ ಸ್ಮರಣೀಯ. ಎಲೆಮರೆ ಕಾಯಿಯಂತರು ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಾಳಾಸಾಹೇಬ ಲೋಕಾಪುರ ಹೇಳಿದರು.

2019ನೇ ಸಾಲಿನ ಕರ್ನಾಟಕ ಬಯಲಾಟ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತೆ, ಕಲಾವಿದೆ ಶಾಂತವ್ವ ಜಾಲಿಕಟ್ಟಿ ಅವರನ್ನು ಪಟ್ಟಣದಲ್ಲಿ ಸನ್ಮಾನಿಸಿ ಮಾತನಾಡಿದ ಅವರು, ಜಾನಪದ ಕಲೆಗಳು ಯಾರ ಸೊತ್ತು ಅಲ್ಲ. ಅಂತಹ ಕಲೆಗಳ ಪ್ರಸಾರಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಕಲಾವಿದರಿಗೆ ಪ್ರತಿಯೊಬ್ಬರೂ ಸಹಕಾರ ನೀಡಬೇಕು ಎಂದು ಹೇಳಿದರು.

ಕರ್ನಾಟಕ ಬಯಲಾಟ ಅಕಾಡೆಮಿ ಸದಸ್ಯ ಶಿವಾನಂದ ಶೆಲ್ಲಿಕೇರಿ, ಪಿ.ಬಿ. ದುತ್ತರಗಿ, ಪ್ರತಿಷ್ಠಾನ ಸದಸ್ಯ ಚಂದ್ರಶೇಖರ ದೇಸಾಯಿ, ಪಾರಿಜಾತ ಕಲಾವಿದೆ ದುರ್ಗವ್ವ ಮುಧೋಳ ಇತರರು ಇದ್ದರು.

Share This Article

ನೀವು ರಾತ್ರಿಯಲ್ಲಿ ಪದೇ ಪದೇ ನೀರು ಕುಡಿಯುತ್ತಿದ್ದೀರಾ? ಇದು ಆರೋಗ್ಯ ಸಮಸ್ಯೆಯ ಲಕ್ಷಣಗಳಾಗಿವೆ.. ನಿರ್ಲಕ್ಷಿಸಬೇಡಿ Drinking Water

Drinking Water : ಮಾನವನ ಆರೋಗ್ಯಕ್ಕೆ ನೀರು ಅತ್ಯಗತ್ಯ. ಆದರೆ, ನಾವು ಅದನ್ನು ಯಾವಾಗ ಕುಡಿಯುತ್ತೇವೆ…

ಹಸಿ ಮೀನು, ಬೇಯಿಸಿದ ಮೀನನ್ನು ಎಷ್ಟು ದಿನ ಫ್ರಿಡ್ಜ್‌ನಲ್ಲಿ ಇಡಬಹುದು ಗೊತ್ತಾ..? Fish

Fish: ಮೀನು ಪ್ರಿಯರು ಪ್ರತಿದಿನ ಮೀನು ತಿನ್ನಲು ಬಯಸುತ್ತಾರೆ. ಆದರೆ ನೀವು ಅಂಗಡಿಗೆ ಹೋಗಿ ಪ್ರತಿದಿನ…