More

    ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಪ್ರಯಾಣವು ರೋಮಾಂಚಕ ಮತ್ತು ಸ್ಪೂರ್ತಿದಾಯಕವಾಗಿದೆ:​ ಓಂ ಬಿರ್ಲಾ

    ಬೆಂಗಳೂರು: ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ ಲೋಕಸಭೆ ಸ್ಪೀಕರ್​​ ಓಂ ಬಿರ್ಲಾ ಅವರು ಕರ್ನಾಟಕ ರಾಜ್ಯದಲ್ಲಿ, ಪ್ರಜಾಪ್ರಭುತ್ವ ಪ್ರಯಾಣವು ರೋಮಾಂಚಕ ಮತ್ತು ಸ್ಪೂರ್ತಿದಾಯಕವಾಗಿದೆ ಎಂದು ಕೊಂಡಾಡಿದರು.

    ವಿಧಾನಸಭೆಯಲ್ಲಿ ಇದೇ ಮೊದಲ ಬಾರಿಗೆ ಲೋಕಸಭೆ ಸ್ಪೀಕರ್ ಭಾಷಣ ಮಾಡಿದ್ದು, ಸಂಸದೀಯ ಮೌಲ್ಯಗಳ ರಕ್ಷಣೆ ಬಗ್ಗೆ ಮಾತನಾಡಿದ ಸ್ಪೀಕರ್​ ಓಂ ಬಿರ್ಲಾ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸಶಕ್ತವಾಗಿದೆ. ಜನತೆಯ ಪರವಾಗಿ ನಾವು ಕೆಲಸ ಮಾಡಬೇಕಿದೆ. ಜನರ ಪರವಾದ ಕಾನೂನುಗಳನ್ನು ತರಬೇಕಿದೆ. ಪ್ರಜಾಪ್ರಭುತ್ವ ರಕ್ಷಣಾ ವ್ಯವಸ್ಥೆ ಅತ್ಯವಶ್ಯಕವಾಗಿದ್ದು, ನಮ್ಮ ಶಾಸನಗಳು ಜನರಿಗೆ ಪೂರಕವಾಗಿರಬೇಕು. ಜನರ‌ಕಲ್ಯಾಣಕ್ಕಾಗಿ ಕಾನೂನು ರಚಿಸಿ, ಅವರ ಸಮಸ್ಯೆಗಳಿಗೆ ಸರ್ಕಾರಗಳು ಸ್ಪಂದಿಸಬೇಕು ಎಂದರು.

    ನಮ್ಮ ವಿಧಾನಮಂಡಲ ಪ್ರಜಾಪ್ರಭುತ್ವದ ಆತ್ಮವಿದ್ದಂತೆ. ಇಲ್ಲಿ ಸಕಾರಾತ್ಮಕ ಚರ್ಚೆಗಳು ನಡೆಯಬೇಕು. ಜನರ ಸಮಸ್ಯೆಗಳ ಅಭಿವ್ಯಕ್ತಿಯಾಗಬೇಕು. ಸದಸ್ಯರು ಪ್ರಜಾಪ್ರಭುತ್ವದ ಸಿದ್ಧಾಂತಗಳಿಗೆ ನಿಷ್ಠರಾಗಿರಬೇಕು. ಜನರ ಮುಂದೆ ಪಾರದರ್ಶಕವಾಗಿರಬೇಕು. ನ್ಯಾಯ, ಕಾರ್ಯಕ್ಷೇತ್ರದಲ್ಲಿ ‌ಬದ್ಧತೆ ಉಳ್ಳವರಾಗಿರಬೇಕು ಎಂದು ಜನಪ್ರತಿನಿಧಿಗಳಿಗೆ ಸಲಹೆ ನೀಡಿದರು.

    ವಿಧೇಯಕಗಳ ಬಗ್ಗೆ ಸಮಗ್ರ ಚರ್ಚೆಗಳಾಗಬೇಕು. ಎಲ್ಲರ‌ ಅಭಿಪ್ರಾಯಕ್ಕೆ ಒತ್ತು ನೀಡಬೇಕು ಮತ್ತು ಎಲ್ಲರ ಸಲಹೆ, ಸಹಕಾರದ ಮೇಲೆ ವಿಧೇಯಕ ತರಬೇಕು. ವಿಧಾನಮಂಡಲದ ಶಾಸನಗಳು‌ ಬಡವರ ಪರವಾಗಿರಬೇಕು. ಪ್ರಜಾಪ್ರಭುತ್ವದ ಸಮಾವೇಶಗಳು ನಡೆಯಬೇಕು. ಚರ್ಚಾ ಕಾರ್ಯಕ್ರಮಗಳು ದೇಶದಲ್ಲಿ ನಡೆಯಬೇಕು. ಸದಸ್ಯರ ಸಂಸದೀಯ ನಡುವಳಿಕೆ ಉತ್ತಮವಾಗಿರಬೇಕು. ಹೀಗಿದ್ದಾಗ ಮಾತ್ರ ಉತ್ತಮ ಜನತಾ ಕಲ್ಯಾಣ ಸಾಧ್ಯವೆಂದರು.

    ಸಾರ್ವಜನಿಕ ಕಲ್ಯಾಣಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ರಚನಾತ್ಮಕ ಚರ್ಚೆ ಮತ್ತು ಚರ್ಚೆಗಳು ಶಾಸಕಾಂಗಗಳ ಚೌಕಟ್ಟಿನೊಳಗೆ ನಡೆಯುವುದನ್ನು ನಾವು ಖಾತ್ರಿಪಡಿಸಿಕೊಂಡಾಗ ಮಾತ್ರ ನಾವು ಶಾಸಕಾಂಗಗಳನ್ನು ಹೆಚ್ಚು ಜವಾಬ್ದಾರಿಯುತವಾಗಿ ಮಾಡಬಹುದು. ನಮ್ಮ ಶಾಸಕಾಂಗ ಸಂಸ್ಥೆಗಳು ಇತ್ತೀಚಿನ ದಿನಗಳಲ್ಲಿ ಜನರ ಕುಂದುಕೊರತೆಗಳಿಗೆ ಧ್ವನಿ ನೀಡಲು ವಿವಿಧ ದೃಷ್ಟಿ ಕೋನಗಳಲ್ಲಿ ಕೆಲಸ ಮಾಡುತ್ತಿವೆ. ಕಾರ್ಯಾಂಗದ ಜವಾಬ್ದಾರಿಯನ್ನು ಸರಿಪಡಿಸಲು ಕೂಡ ಬಹುವಿಧದ ಆಯಾಮದಲ್ಲಿ ಕೆಲಸ ಮಾಡುತ್ತಿವೆ. ಇಂತಹ ಗುರುತರವಾದ ಜವಾಬ್ದಾರಿಗಳನ್ನು ಪೂರೈಸಲು, ಶಾಸಕಾಂಗದ ಸದಸ್ಯರು ಪ್ರಜಾಪ್ರಭುತ್ವದ ತತ್ವಗಳು ಮತ್ತು ಮೌಲ್ಯಗಳನ್ನು ಶ್ರದ್ಧೆಯಿಂದ ಪಾಲಿಸಬೇಕು. ಈ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಜನರಿಗೆ ಹೆಚ್ಚು ಪಾರದರ್ಶಕ ಮತ್ತು ಉತ್ತರದಾಯಕವಾಗಿ ಮಾಡುವಂತೆ ನೋಡಿಕೊಳ್ಳಬೇಕು. ಸಂವಿಧಾನವನ್ನು ರೂಪಿಸುವಾಗ, ನಮ್ಮ ಶಾಸಕರು ನಮ್ಮ ಜನರ ಸಾಮಾಜಿಕ-ಆರ್ಥಿಕ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಶಾಸಕಾಂಗವು ಹೆಚ್ಚು ಅರಿವು, ಶ್ರದ್ಧೆ, ಪ್ರಾಮಾಣಿಕತೆ ಮತ್ತು ಜವಾಬ್ದಾರಿಯುತವಾಗಿರಬೇಕು ಎಂದ ಓ ಬಿರ್ಲಾ ಅವರು ಕರ್ನಾಟಕ ರಾಜ್ಯದಲ್ಲಿ, ಪ್ರಜಾಪ್ರಭುತ್ವ ಪ್ರಯಾಣವು, ರೋಮಾಂಚಕ ಮತ್ತು ಸ್ಪೂರ್ತಿದಾಯಕವಾಗಿದೆ ಎಂದು ಪ್ರಶಂಸಿಸಿದರು.

    ಇಳಿ ವಯಸ್ಸಿನಲ್ಲಿ ಕಾರು ಓಡಿಸುವುದನ್ನು ಕಲಿತ 90ರ ವೃದ್ಧೆಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಮಹಾಪೂರ!

    ದೇವೇಗೌಡರ ಕುಟುಂಬದಲ್ಲಿ ಮನೆ ಮಾಡಿದ ಸಂಭ್ರಮ: ನಿಖಿಲ್​-ರೇವತಿ ದಂಪತಿಗೆ ಗಂಡು ಮಗು ಜನನ

    PHOTOS| ಹಗಲು-ರಾತ್ರಿ ಪ್ರಯಾಣ, 18 ಪಾರಂಪರಿಕ ತಾಣ, 33 ಸಾವಿರ ಕಿ.ಮೀ: ಮಹಿಳೆಯ ಧೈರ್ಯಕ್ಕೆ ಮೆಚ್ಚುಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts