More

    ಬೆಂಗಳೂರಲ್ಲಿ ರಸ್ತೆಗಿಳಿದವರಿಗೆ ಬಸ್ಕಿ ಶಿಕ್ಷೆ; ಲಾಠಿ ಏಟಿಂದ ಬುದ್ಧಿ ಕಲಿಸಿದ ಪೊಲೀಸರು

    ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಜನತಾ ಕ್ಯೂರ್ಫ್ಯೂಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಇನ್ನೊಂದತ್ತ ಕೆಲವರು ಅನಗತ್ಯವಾಗಿ ರಸ್ತೆಗಿಳಿದಿದ್ದು, ಅವರಿಗೆ ಪೊಲೀಸರು ಬಸ್ಕಿ ಶಿಕ್ಷೆ ಕೊಟ್ಟು ತಕ್ಕ ಪಾಠ ಕಲಿಸಿದ್ದಾರೆ.

    ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್​ ಹಾಕಿ ತಪಾಸಣೆ ನಡೆಸುತ್ತಿದ್ದ ವೇಳೆ ಅನಗತ್ಯವಾಗಿ ಓಡಾಡಿ ಪೊಲೀಸರೊಂದಿಗೆ ಖ್ಯಾತೆ ತೆಗೆದ ಕೆಲ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರೆ, ಇನ್ನು ಕೆಲವರಿಗೆ ಬಸ್ಕಿ ಹೊಡೆಸಿ ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ. ಟ್ರಿನಿಟಿ ವೃತ್ತದಲ್ಲಿ ಬ್ಯಾರಿಕೇಡ್​ ಹಾಕಿ ತಪಾಸಣೆ ನಡೆಸುತ್ತಿದ್ದಾಗ ಸಿಕ್ಕಿ ಬಿದ್ದ ಕೆಲ ವಾಹನ ಸವಾರರಿಗೆ ಪೊಲೀಸರು ನಡು ರಸ್ತೆಯಲ್ಲೇ ಕೆಲ ಹೊತ್ತು ಬಸ್ಕಿ ತೆಗೆಸಿ ಎಚ್ಚರಿಕೆ ನೀಡಿದರು.

    ಪೊಲೀಸರಿಗೆ ಅವಾಜ್​:
    ಇನ್ನು ಐಡಿ ಕಾರ್ಡ್​ ಇಲ್ಲದೆ ಸಂಚರಿಸುತ್ತಿದ್ದ ಬೈಕ್​ ಸವಾರನನ್ನು ತಡೆದು ಪ್ರಶ್ನಿಸಿದಕ್ಕೆ ಪೊಲೀಸರಿಗೆ ಆವಾಜ್​ ಹಾಕಿದ ಪ್ರಕರಣವೂ ನಗರದ ಕೆಲವೆಡೆ ನಡೆದಿದೆ. ಜನತಾ ಕರ್ಫ್ಯೂ ವೇಳೆ ಯಾಕೆ ಓಡ್ತಾದ್ದಿಯಾ? ಎಂದು ಸವಾರನನ್ನು ಪೊಲೀಸರು ಪ್ರಶ್ನಿಸಿದ್ದಕ್ಕೆ, “ನೀವೆಲ್ಲರೂ ಯಾಕೆ ಇಲ್ಲೀದ್ದಿರಾ? ನಿಮಗೆ ಲಾಕ್​ ಡೌನ್​ ಇಲ್ವಾ?” ಎಂದು ಮರುಪ್ರಶ್ನಿಸಿ, “ನಿಮ್ಮ ತರಹ ನಮಗೂ ಕೆಲಸವಿದೆ. ಸುಮ್ಮನೆ ಒಡಾಡುತ್ತಿಲ್ಲ” ಎಂದು ಪೊಲೀಸರಿಗೆ ಆವಾಜ್​ ಹಾಕಿದ್ದಾನೆ. ಆತನಿಗೆ ಪೊಲೀಸರು ತಮ್ಮದೇ ಶೈಲಿಯಲ್ಲಿ ಉತ್ತರ ಕೊಟ್ಟು ವಾಹನ ಜಪ್ತಿ ಮಾಡಿದ್ದಾರೆ.

    ನಿಮಿಷಕ್ಕೆ 27 ಲಕ್ಷ ಜನರ ನೋಂದಣಿ; ಕರೊನಾ ಲಸಿಕೆ ನೋಂದಣಿಗೆ ಮುಗಿಬಿದ್ದ ಜನ

    ರಾಜ್ಯದಲ್ಲಿ ಕರೊನಾ ಮಹಾಸ್ಫೋಟ! ಒಂದೇ ದಿನ 39 ಸಾವಿರಕ್ಕೂ ಅಧಿಕ ಪ್ರಕರಣ ಪತ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts