More

    ಲಾಕ್​ಡೌನ್​​ನಿಂದ ಬೀದಿಗೆ ಬಿದ್ದಿರುವ ಕೂಲಿ ಕಾರ್ಮಿಕರ ನೆರವಿಗೆ ಸರ್ಕಾರ ಧಾವಿಸಬೇಕು: ಮಾಜಿ ಸಿಎಂ ಎಚ್​ಡಿಕೆ

    ಬೆಂಗಳೂರು: ಲಾಕ್​ಡೌನ್​ನಿಂದ ತತ್ತರಿಸಿರುವ ಕೂಲಿ ಕಾರ್ಮಿಕರ ನೆರವಿಗೆ ಸರ್ಕಾರ ಧಾವಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

    ಲಾಕ್​ಡೌನ್​ನಿಂದ ಕೂಲಿ ಕಾರ್ಮಿಕರು ತೊಂದರೆ ಅನುಭವಿಸುತ್ತಿದ್ದು ಕಾರ್ಮಿಕ ಇಲಾಖೆಯಲ್ಲಿ 8000 ಕೋಟಿ ರೂಪಾಯಿ ಹಣ ಇದೆ. ಅದನ್ನು ಅವರಿಗೆ ಖರ್ಚು ಮಾಡಬೇಕು ಎಂದು ಟ್ವೀಟ್​ ಮಾಡಿ ಆಗ್ರಹಿಸಿದ್ದಾರೆ.

    ಹುಟ್ಟೂರು ಸೇರಬೇಕು ಎಂಬ ಆಸೆಯಿಂದ ಹಿಸಿವಿನಲ್ಲೇ ರಾಯಚೂರಿನತ್ತ ಹೆಜ್ಜೆ ಹಾಕುತ್ತಿದ್ದ ಕಟ್ಟಡ ಕಾರ್ಮಿಕ ಮಹಿಳೆ ಗಂಗಮ್ಮ ಎಂಬುವವರು ಮಾರ್ಗ ಮಧ್ಯೆ ಆಹಾರ, ವಸತಿ ಹಾಗೂ ವೈದ್ಯಕೀಯ ಸೌಲಭ್ಯ ಸಿಗದೆ ಮೃತಪಟ್ಟಿರುವುದು ಕಾರ್ಮಿಕರ ಪ್ರಸ್ತುತ ಸ್ಥಿತಿಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

    ಗಂಗಮ್ಮ ಪ್ರಕರಣದಲ್ಲಿ ಕೂಲಿ ನೀಡದ ಗುತ್ತಿಗೆದಾರನ ತಪ್ಪು ಮಾತ್ರ ಅಲ್ಲ ಸರ್ಕಾರದ ತಪ್ಪು ಕೂಡ ಇದೆ. ಕಾರ್ಮಿಕ ಇಲಾಖೆಯಲ್ಲಿರುವ ಹಣವನ್ನು ಇಂತವರಿಗೆ ವಿನಿಯೋಗಿಸಬೇಕು. ಗಂಗಮ್ಮ ಬಳ್ಳಾರಿಯ ನಿರಾಶ್ರಿತರ ಕ್ಯಾಂಪ್​ನಲ್ಲಿ ಇದ್ದರೂ ಆಕೆಗೆ ಆಹಾರ ಹಾಗೂ ಚಿಕಿತ್ಸೆ ಏಕೆ ದೊರೆಯಲಿಲ್ಲ. ಲಾಕ್​ಡೌನ್​ ಶ್ರೀಮಂತರು ಹಾಗೂ ಮಧ್ಯಮ ವರ್ಗದ ಜನರನ್ನು ಮನೆಯಲ್ಲಿ ಬಂಧಿಸಿಟ್ಟಿರಬಹುದು. ಆದರೆ ಬಡವರು ಹಾಗೂ ಕೂಲಿ ಕಾರ್ಮಿಕರನ್ನು ಬೀದಿಗೆ ತಳ್ಳಿದೆ. ಕೂಲಿ ಕಾರ್ಮಿಕರ ನೆರವಿಗೆ ಸರ್ಕಾರ ಬರಬೇಕು ಎಂದು ಅವರು ಆಗ್ರಹಿಸಿದರು. (ದಿಗ್ವಿಜಯ ನ್ಯೂಸ್​)

    VIDEO|ದಟ್ಟ ಅರಣ್ಯದ ಮಧ್ಯೆ ಹಾದು ಹೋಗಿರುವ ರಸ್ತೆಯನ್ನು ಆನೆಗಳ ಹಿಂಡು ಹೇಗೆ ದಾಟುತ್ತದೆ ವಿಡಿಯೋ ನೋಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts