More

    ಸ್ಥಳೀಯರಿಗೇ ಪಡಿತರ ಹಂಚಿಕೆ ಪರವಾನಗಿ ನೀಡಲು ಗ್ರಾಮಸ್ಥರ ಪ್ರತಿಭಟನೆ

    ಹನುಮಸಾಗರ: ಅನ್ನಭಾಗ್ಯ ಯೋಜನೆಯಡಿ ಹಂಚಿಕೆ ಮಾಡಲು ಪಡಿತರ ತುಂಬಿಕೊಂಡು ಬಂದಿದ್ದ ಲಾರಿಯನ್ನು ಮಡಿಕೇರಿ ಗ್ರಾಮದಲ್ಲಿ ಗ್ರಾಮಸ್ಥರು ಶನಿವಾರ ತಡೆದು ಪ್ರತಿಭಟನೆ ನಡೆಸಿದರು.

    ಗ್ರಾಮದಲ್ಲಿ ಪಡಿತರ ಹಂಚಿಕೆ ಮಾಡಲು ಅಧಿಕಾರಿಗಳು ದೂರದ ಗುಮಗೇರಾ ಸಹಕಾರಿ ಸಂಘಕ್ಕೆ ಒಪ್ಪಿಸಿದ್ದಾರೆ. ಇದಕ್ಕೆ ಗ್ರಾಮಸ್ಥರ ವಿರೋಧವಿದೆ. ಈ ಹಿಂದೆ ಮಡಿಕೇರಿ ಗ್ರಾಪಂ ವ್ಯಾಪ್ತಿಯ ಬೆನಕನಾಳ ಗ್ರಾಮದವರು ಗ್ರಾಮದಲ್ಲಿ ರೇಷನ್ ಹಂಚುತ್ತಿದ್ದರು. ಗ್ರಾಮದವರಿಗೇ ಪಡಿತರ ವಿತರಿಸಲು ಪರವಾನಗಿ ನೀಡುವಂತೆ ಮೂರು ಸಲ ಅರ್ಜಿ ಸಲ್ಲಿಸಿದರೂ ಅಧಿಕಾರಿಗಳು ತಿರಸ್ಕರಿಸಿ ಗುಮಗೇರಾದ ಸಂಘಕ್ಕೆ ನೀಡಿದ್ದಾರೆ. ಗ್ರಾಮಸ್ಥರ ಹಿತ ಕಾಯಬೇಕಾದ ಅಧಿಕಾರಿಗಳು ತಮ್ಮ ಸ್ವಾರ್ಥಕ್ಕಾಗಿ ಬೇಕಾದವರಿಗೆ ರೇಷನ್ ಹಂಚಿಕೆ ಜವಾಬ್ದಾರಿ ನೀಡಿದ್ದಾರೆ. ಅಲ್ಲದೆ ಅವರು ಬೇರೆಯವರಿಂದ ವಿತರಿಸುತ್ತಿದ್ದಾರೆ. ಈ ಬಗ್ಗೆ ಫೋನ್ ಮಾಡಿ ವಿಚಾರಿಸಿದರೆ ಪರವಾನಗಿ ಪಡೆದಾತ ಅವಾಚ್ಯ ಪದಗಳಿಂದ ನಿಂದಿಸುತ್ತಾರೆಂದು ಆರೋಪಿಸಿದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಗ್ರಾಮಸ್ಥರಾದ ಪರಶುರಾಮ ಮೇಟಿ, ವಾಸಪ್ಪ ಗುಡಗದ್ದಿ, ಬಸವರಾಜ ಗುಡಗದ್ದಿ, ಆಂಜನೇಯ ಈಳಗೇರ, ಹನಮಂತಪ್ಪ ಈಳಗೇರ, ಹನಮಪ್ಪ ಹನಮಗೇರಿ, ರಾಮಚಂದ್ರಪ್ಪ ಹರಿಜನ, ಶರಣಪ್ಪ ಈಳಗೇರ, ದ್ಯಾಮವ್ವ ಗುರಿಕಾರ, ಮುತ್ತಮ್ಮ ಹರಿಜನ, ರುಕ್ಕಮ್ಮ ಬೆನಕನಾಳ, ಫಕೀರಪ್ಪ ಹನುಮಗೇರ, ದ್ಯಾಮವ್ವ ಈಳಗೇರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts