More

    ಶುಭ ಕಾರ್ಯಕ್ಕೆ ಬೇಕು ಸ್ಥಳೀಯ ಸಂಸ್ಥೆ ಪರವಾನಗಿ: ಆರ್.ಯತೀಶ್

    ಸಾಗರ: ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿ ಇದ್ದರೂ ಮದುವೆ ಇನ್ನಿತರ ಶುಭ ಕಾರ್ಯ ಮಾಡಲು ಅಭ್ಯಂತರ ಇರುವುದಿಲ್ಲ. ಕಾರ್ಯಕ್ರಮ ನಡೆಸಲು ಸ್ಥಳೀಯ ಸಂಸ್ಥೆಗಳಿಂದ ಪರವಾನಗಿ ಪಡೆಯಬೇಕು ಎಂದು ಉಪವಿಭಾಗಾಧಿಕಾರಿ ಆರ್.ಯತೀಶ್ ಹೇಳಿದರು.
    ಎಸಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮದುವೆ ಇನ್ನಿತರ ಶುಭ ಕಾರ್ಯಗಳಿಗೆ ಚುನಾವಣೆಗೆ ಸ್ಪರ್ಧೆ ಮಾಡಿರುವ ಅಭ್ಯರ್ಥಿಗಳು ಬಂದು ಪ್ರಚಾರ ನಡೆಸಿದರೆ ಅದು ನೀತಿಸಂಹಿತೆ ಉಲ್ಲಂಘನೆ ಆಗುತ್ತದೆ. ಸಂಬಂಧಿಸಿದವರು ಇದರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದರು.
    ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಮೇ 7ರಂದು ಚುನಾವಣೆ ನಡೆಯಲಿದೆ. ಈಗಾಗಲೆ ನೀತಿಸಂಹಿತೆ ಜಾರಿಯಲ್ಲಿದೆ. ನೀತಿಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಲು ನಮ್ಮ ತಂಡ ಅಗತ್ಯ ಕ್ರಮ ತೆಗೆದುಕೊಂಡಿದೆ. ಸಾಗರ ತಾಲೂಕಿಗೆ ಸಂಬಂಧಿಸಿ ನಾಗೋಡಿ, ಚೂರಿಕಟ್ಟೆ ಹಾಗೂ ನಗರ ವ್ಯಾಪ್ತಿಯನ್ನು ಒಳಗೊಂಡಂತೆ ಚೆಕ್‌ಪೋಸ್ಟ್ ತೆರೆಯಲಾಗಿದೆ. ಅಧಿಕಾರಿಗಳು ಅಹೋರಾತ್ರಿ ಕಾವಲು ಕಾಯತ್ತಿದ್ದಾರೆ. ಅಕ್ರಮ ನಡೆಯದಂತೆ, ಹಣ ಇನ್ನಿತರ ವಸ್ತು ಸಾಗಣೆ ಆಗುವುದನ್ನು ತಡೆಗಟ್ಟಲು ಚೆಕ್‌ಪೋಸ್ಟ್‌ನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
    ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿರುವ ಒಬ್ಬ ಅಭ್ಯರ್ಥಿ 95 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡುವಂತಿಲ್ಲ. ಅಭ್ಯರ್ಥಿಗಳು, ಪ್ರತಿನಿಧಿಸುವ ಪಕ್ಷಗಳು ನಡೆಸುವ ಕಾರ್ಯಕ್ರಮ, ಚುನಾವಣಾ ಪ್ರಚಾರ ಸಭೆ ಬಗ್ಗೆ ನಮ್ಮ ತಂಡ ಪ್ರತಿದಿನ ಮಾಹಿತಿ ಕಲೆ ಹಾಕುತ್ತಿರುತ್ತದೆ. ಚುನಾವಣಾ ಅಕ್ರಮ ನಡೆಯುತ್ತಿರುವುದು ಸಾರ್ವಜನಿಕರ ಕಣ್ಣಿಗೆ ಬಿದ್ದರೆ ತಕ್ಷಣ ನಮ್ಮ ತಂಡಕ್ಕೆ ಕರೆ ಮಾಡಿ. ದೂರು ಕೊಟ್ಟವರ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು. ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು.

    ತಹಸೀಲ್ದಾರ್ ಕಲೀಂವುಲ್ಲಾ ಖಾನ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

    ವಿಡಿಯೋ ಚಿತ್ರೀಕರಣ ಮಾಡಲು ಪ್ರತಿ ಹೋಬಳಿಗೊಂದರಂತೆ ನಾಲ್ಕು ತಂಡ ರಚಿಸಲಾಗಿದೆ. ಚುನಾವಣೆ ಅಕ್ರಮ ನಡೆಯದಂತೆ ತಡೆಯಲು ತಂಡಗಳನ್ನು ರಚಿಸಲಾಗಿದೆ. ಎಲೆಕ್ಷನ್ ಮುಗಿಯುವವರೆಗೂ ತಂಡಗಳು ತಮ್ಮ ವ್ಯಾಪ್ತಿಯಲ್ಲಿ ಕೆಲಸ ಮಾಡಲಿವೆ.
    ಆರ್.ಯತೀಶ್

    ಉಪವಿಭಾಗಾಧಿಕಾರಿ, ಸಾಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts