More

    ಜೆಡಿಎಸ್‌ಗೆ ಅಧಿಕಾರ ಸಿಕ್ಕರೆ ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ; ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ 

    ಮಧುಗಿರಿ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಮುಖ್ಯಮಂತ್ರಿಯಾಗಿ ಎಚ್.ಡಿ.ಕುಮಾರಸ್ವಾಮಿ ಅಧಿಕಾರ ವಹಿಸಿಕೊಂಡ 24 ಗಂಟೆಗಳಿಗೆ ಸ್ತ್ರೀ ಶಕ್ತಿ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡಲಾಗುವುದು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

    ಈ ಹಿಂದೆ ಮೈತ್ರಿ ಸರ್ಕಾರದ 14 ತಿಂಗಳ ಅವಧಿಯಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದ ರೈತರ 26 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡುವ ಮೂಲಕ ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ. ಈಗ ಸ್ತ್ರೀ ಶಕ್ತಿ ಸಂಘಗಳ ಮನವಿಯಂತೆ ಅವರ ಸಾಲವನ್ನೂ ಮನ್ನಾ ಮಾಡಲಾಗುವುದು ಎಂದರು. ಈ ಹಿಂದೆ ಮಧುಗಿರಿಯಲ್ಲಿ ಬಿಜೆಪಿ ಆಪರೇಷನ್ ಕಮಲ ನಡೆಸಿದ ಸಂದರ್ಭದಲ್ಲೇ ಕ್ಷೇತ್ರವನ್ನು ವೀರಭದ್ರಯ್ಯ ಅವರಿಗೆ ಬಿಟ್ಟು ಕೊಡಬೇಕು ಎಂದು ದೇವೇಗೌಡರು ನಿರ್ಧರಿದ್ದರು. ಆದರೆ ಅವರಿಗೆ ವಿ.ಆರ್.ಎಸ್.ದೊರೆಯದ ಹಿನ್ನೆಲೆಯಲ್ಲಿ ನಮ್ಮ ತಾಯಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಿ ಜಯಗಳಿಸಿದ್ದು, ಕ್ಷೇತ್ರದೊಂದಿಗೆ ನಾವು ಹಲವಾರು ವರ್ಷಗಳ ನಂಟು ಹೊಂದಿದ್ದೇವೆ. ಇದನ್ನು ಯಾರೂ ಕಿತ್ತುಕೊಳ್ಳು ಆಗುವುದಿಲ್ಲ ಎಂದರು.

    ತಾಲೂಕು ಜೆಡಿಎಸ್ ಅಧ್ಯಕ್ಷ ಬಸವರಾಜು, ಕರುನಾಡ ವಿಜಯ ಸೇನೆ ತಾಲೂಕು ಅಧ್ಯಕ್ಷ ತಿಮ್ಮರಾಜು, ಮಹಿಳಾ ಘಟಕದ ಅಧ್ಯಕ್ಷೆ ಲತಾ ಗೋವಿಂದರಾಜು, ಗೌರವಾಧ್ಯಕ್ಷೆ ಲತಾ ನಾರಾಯಣ್, ನಗರ ಅಧ್ಯಕ್ಷ ರಾಜು, ಕಾರ್ಯಾಧ್ಯಕ್ಷ ವೆಂಕಟೇಶ್ ಇದ್ದರು.

    ನಾಲ್ಕೂವರೆ ವರ್ಷದಲ್ಲಿ ನನಗೆ ಒಳ್ಳೆಯ ವಾತಾವರಣ ಸಿಗಲಿಲ್ಲ. ಆದರೂ ಜನತೆಯ ಪರ ಕೆಲಸ ಮಾಡಿದ ಸಮಾಧಾನವಿದೆ. ಕುಮಾರಸ್ವಾಮಿಯವರು ಕೇವಲ 14 ತಿಂಗಳು ಅಧಿಕಾರದಲ್ಲಿದ್ದರು. ಈ ಸಂದರ್ಭದಲ್ಲಿ ಕ್ಷೇತ್ರವು ಭೀಕರ ಬರಗಾಲ ಅನುಭವಿಸಿತ್ತು. 2 ವರ್ಷ ಕರೊನಾದಿಂದ ಆರ್ಥಿಕ ವ್ಯವಸ್ಥೆ ಬುಡಮೇಲಾಯಿತು. ಬಿಜೆಪಿ ಸರ್ಕಾರವಿದ್ದು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಧೋರಣೆ ಅನುಸರಿಸುತ್ತಿದೆ.
    |ಎಂ.ವಿ.ವೀರಭದ್ರಯ್ಯ ಶಾಸಕ

    ಕೆಎನ್‌ಆರ್ ವಿರುದ್ಧ ಅಸಮಾಧಾನ: 90ರ ಇಳಿ ವಯಸ್ಸಿನಲ್ಲೂ ದೇವೇಗೌಡರು ಕನ್ನಡ ನೆಲ, ಜಲ ಭಾಷೆ ಉಳಿವಿಗೆ ಹಾಗೂ ರೈತ, ದಲಿತ, ಬಡವರ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಆದರೆ 2019ರ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಸೋಲು ನಮಗೆ ಬಹಳಷ್ಟು ನೋವು ತಂದಿದೆ. ಪ್ರಧಾನಿ ನರೇಂದ್ರ ಮೋದಿಯವರೂ ದೇವೇಗೌಡರಿಗೆ ಗೌರವ ಕೊಡುತ್ತಾರೆ. ಆದರೆ ಈ ಭಾಗದ ಹಿರಿಯ ಕಾಂಗ್ರೆಸ್ ಮುಖಂಡರೊಬ್ಬರು ದೇವೇಗೌಡರ ಬಗ್ಗೆ ಕೀಳಾಗಿ ಮಾತನಾಡಿ, ಅವರ ಸಾವು ಬಯಸಿದ್ದು ದುಃಖದ ವಿಚಾರ ಎಂದು ಕೆ.ಎನ್.ರಾಜಣ್ಣ ಅವರ ಹೆಸರು ಹೇಳದೇ ನಿಖಿಲ್ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts