More

    ವಿಸ್ತರಣೆಯಾಯ್ತು ಮಾರಟೋರಿಯಂ: ಸಾಲಗಾರರನ್ನು ಪೀಡಿಸಬೇಡಿ ಎಂದ ಸುಪ್ರೀಂಕೋರ್ಟ್

    ನವದೆಹಲಿ: ಕರೊನಾ ಮಹಾಮಾರಿಯಿಂದ ಸಂತ್ರಸ್ತರಾಗಿರುವ ಜನರ ಸಾಲದ ಕಂತುಗಳ (ಇಎಂಐ) ಮರುಪಾವತಿಗೆ ನೀಡಲಾಗಿದ್ದ ವಿನಾಯಿತಿ ಅವಧಿ (ಮಾರಟೋರಿಯಂ) ವಿಸ್ತರಣೆ ಹಾಗೂ ಬಡ್ಡಿ ವಿಚಾರದಲ್ಲಿ ಸ್ಪಷ್ಟ ನಿಲುವು ತಳೆಯಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದೆ. ಜತೆಗೆ ಮಾರಟೋರಿಯಂ ಅವಧಿಯನ್ನು ಸೆ. 28ರವರೆಗೆ ವಿಸ್ತರಿಸಬೇಕೆಂದು ಸೂಚನೆ ನೀಡಿದೆ.

    ‘ಎರಡು ವಾರಗಳಲ್ಲಿ ಆಕಾಶ ಕಳಚಿ ಬೀಳುತ್ತದೆಯೇ? ಕೇಂದ್ರಕ್ಕೆ ನಾವು ಕಾಲಾವಕಾಶ ನೀಡುತ್ತೇವೆ. ಆದರೆ ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಿ’ ಎಂದು ತ್ರಿಸದಸ್ಯ ಪೀಠ ಖಡಕ್ಕಾಗಿ ಹೇಳಿದೆ. ಜನರ ಸಂಕಷ್ಟ ಪರಿಹರಿಸಲು ಕೇಂದ್ರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (ಆರ್‌ಬಿಐ) ಇದು ಕೊನೆಯ ಅವಕಾಶ ಎಂದಿದೆ.

    ಇದನ್ನೂ ಓದಿ: PHOTOS: ‘ರಾಣಿ ಚನ್ನಮ್ಮ’ನ ಮುಖವನ್ನೇ ಮುಚ್ಚಿಬಿಟ್ಟ ‘ಹೆಜ್ಜೇನು’; ಫೋಟೋಕ್ಕೆ ಮುಗಿಬೀಳುತ್ತಿರುವ ಜನರು

    ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆರ್. ಸುಭಾಷ್ ರೆಡ್ಡಿ ಮತ್ತು ಎಂ.ಆರ್. ಷಾ ಇದ್ದ ಪೀಠ, ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿತು. ಮಾರಟೋರಿಯಂ ಅವಧಿಯ ಇಎಂಐಗಳ ಮೇಲಿನ ಡ್ಡಿಯನ್ನು ಮನ್ನಾ ಮಾಡಬೇಕೆಂದು ಕೋರಿ ಸಲ್ಲಿಸಲಾಗಿರುವ ಹಲವು ಅರ್ಜಿಗಳ ವಿಚಾರಣೆ ವೇಳೆ ಸರ್ವೋನ್ನತ ನ್ಯಾಯಾಲಯ ತನ್ನ ನಿಲುವನ್ನು ಸ್ಪಷ್ಟಪಡಿಸಿತು. ಈ ವಿಚಾರದಲ್ಲಿ ಉನ್ನತ ಮಟ್ಟದ ಸಮಾಲೋಚನೆ ನಡೆಸಲಾಗುತ್ತಿದೆ ಎಂದು ಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ.

    ಇದನ್ನೂ ಓದಿ: ರಾಜ್ಯದಲ್ಲಿ 4 ಲಕ್ಷದ ಗಡಿ ದಾಟಿದ ಕರೊನಾ ಸೋಂಕಿತರ ಸಂಖ್ಯೆ; ಬೆಂಗಳೂರಿನಲ್ಲೇ ಲಕ್ಷ ಮೀರಿದೆ

    ಸಾಲಗಾರರ ಹಿತ ರಕ್ಷಿಸಬೇಕು. ಅವರ ಮೇಲೆ ಬ್ಯಾಂಕ್‌ಗಳು ಒತ್ತಡ ಹೇರಬಾರದು ಎಂದು ಕೋರ್ಟ್ ಹೇಳಿದೆ. ಮರುಪಾವತಿ ವಿಳಂಬವನ್ನು ಮುಂದಿನ ವಿಚಾರಣೆ ಹಾಗೂ ಆದೇಶದವರೆಗೆ ಎನ್‌ಪಿಎ (ಮರಳಿಬಾರದ ಸಾಲ) ಎಂದು ಪರಿಗಣಿಸಬಾರದು ಎಂದೂ ಸ್ಪಷ್ಟಪಡಿಸಿದೆ. ಮಾರಟೋರಿಯಂ ಅವಧಿಯ ಸಾಲದ ಮೇಲಿನ ಡ್ಡಿಯ ಮೇಲೆ ಡ್ಡಿಯನ್ನು ಮನ್ನಾ ಮಾಡಬೇಕೆಂುದು ಅರ್ಜಿದಾರರ ವಾದವಾಗಿದೆ. ಆದರೆ ಹೀಗೆ ಮಾಡುವುದರಿಂದ ಬ್ಯಾಂಕ್‌ಗಳು ದುರ್ಲಗೊಂಡು ಆರ್ಥಿಕ ಪರಿಸ್ಥಿತಿ ಮೇಲೆ ಪರಿಣಾಮ ಉಂಟಾಗಲಿದೆ ಎಂದು ಸರ್ಕಾರ ಮತ್ತು ಆರ್‌ಬಿಐ ಅಭಿಪ್ರಾಯಪಟ್ಟಿವೆ.

    ಇದನ್ನೂ ಓದಿ: video/ ಬಾಯಲ್ಲೇ ಹಸುವನ್ನು ಎಳೆದೊಯ್ಯುತ್ತಿದೆ ಹುಲಿ! ಅಪರೂಪದ ದೃಶ್ಯ ವೈರಲ್​

    ಮುಂದೂಡಲಾದ ಇಎಂಐಗಳ ಮೇಲಿನ ಡ್ಡಿ ಮನ್ನಾ ಮಾಡುವುದು ‘ಮೂಲಭೂತ ಆರ್ಥಿಕ ನಿಯಮಗಳಿಗೆ’ ವಿರುದ್ಧವಾಗುತ್ತದೆ. ಅಲ್ಲದೆ ಈಗಾಗಲೇ ಸಾಲ ಮರುಪಾವತಿ ಮಾಡಿದವರಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಕರೊನಾ ಮಹಾಮಾರಿಯಿಂದ ಉದ್ಭವಿಸಿರುವ ಪರಿಸ್ಥಿತಿ ಹಿನ್ನೆಲೆಯಲ್ಲಿ ಮಾರಟೋರಿಯಂ ಅವಧಿಯನ್ನು ಎರಡು ವರ್ಷ ವಿಸ್ತರಿಸಹುದಾಗಿದೆ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಹೇಳಿದೆ. ಕರೊನಾ ಲಾಕ್‌ಡೌನ್ ಹೇರಿಕೆಯಿಂದ ಉಂಟಾದ ಪರಿಸ್ಥಿತಿ ಹಿನ್ನೆಲೆಯಲ್ಲಿ ಆರ್‌ಬಿಐ ಮಾರ್ಚ್‌ನಲ್ಲಿ ಮೂರು ತಿಂಗಳು ಮಾರಟೋರಿಯಂ ಘೋಷಿಸಿತ್ತು. ನಂತರ ಆಗಸ್ಟ್ 31ರ ವರೆಗೆ ವಿಸ್ತರಿಸಿತ್ತು. (ಏಜೆನ್ಸೀಸ್)

    ಆನೆ ಲದ್ದಿ ಟೀ ಕುಡೀತಿದ್ದ ಅಕ್ಷಯ್ ಕುಮಾರ್ ಗೋಮೂತ್ರ ಸೇವನೆಯ ರಹಸ್ಯವನ್ನೂ ಬಿಚ್ಚಿಟ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts