More

    ಯಂತ್ರೋಪಕರಣ ಬಳಕೆಯಿಂದ ಜಾನುವಾರು ಸಾಕಣೆ ಕಡಿಮೆ

    ಶನಿವಾರಸಂತೆ: ಜಾತ್ರೆಗಳು ಸಂಸ್ಕೃತಿಯ ಪ್ರತೀಕ ಎಂದು ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.

    ಸಮೀಪದ ಗುಡುಗಳಲೆ ಜಯದೇವ ಜಾನುವಾರ ಜಾತ್ರೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಜಾತ್ರೆಗಳು ಸಾಂಸ್ಕೃತಿಕ ಮತ್ತು ಜಾನಪದ ಸೊಗಡಿನ ಉತ್ಸವ. ಅಲ್ಲದೆ ಜಾತ್ರೋತ್ಸವ ಕೃಷಿಕರಿಗೆ ಮನರಂಜನೆ ನೀಡುವ ವೇದಿಕೆ ಎಂದರು.

    ಗುಡುಗಳಲೆ ಜಾನುವರುಗಳ ಜಾತ್ರೆಗೆ ಇತಿಹಾಸ ಇದ್ದು, ಬದಲಾದ ಕಾಲಘಟ್ಟದಲ್ಲಿ ರೈತರು ವ್ಯವಸಹಾಯಕ್ಕೆ ಯಂತ್ರೋಪಕರಣ ಬಳಕೆ ಮಾಡುತ್ತಿರುವುದರಿಂದ ಜಾನುವಾರು ಸಾಕಣೆ ಕಡಿಮೆಯಾಗಿದೆ. ಜಾತ್ರೆಯಲ್ಲಿ ಜಾನುವಾರುಗಳಿಲ್ಲದಿದ್ದರೂ ಜನರಿಗೆ ಮನರಂಜನೆ ನೀಡುವ ಸಲುವಗಿ ಸಾಂಸ್ಕೃತಿಕ, ಕ್ರೀಡಾ ಸ್ಪರ್ಧೆ ಆಯೋಜಿತ್ತಿರುವುದು ಶ್ಲಾಘನಿಯ ಎಂದ ಅವರು, ಆಧುನಿಕ ಯುಗದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದ್ದರೂ ಸಂಸ್ಕೃತಿ ನಶಿಸಿ ಹೋಗದಂತೆ ನೋಡಿಕೊಳ್ಳಬೇಕು ಎಂದಯ ರೈತರಿಗೆ ಸಲಹೆ ನೀಡಿದರು.

    ಕೊಡ್ಲಿಪೇಟೆ ಕಲ್ಲುಮಠದ ಶ್ರೀ ಮಹಾಂತ ಸ್ವಾಮೀಜಿ ಮಾತನಾಡಿ, ಆಧುನೀಕತೆ ಹಳ್ಳಿಯನ್ನು ಆವರಿಸಿದ್ದು ಗ್ರಾಮೀಣ ಸೊಗಡು ಬದಲಾಗುತ್ತಿದೆ. ಹೀಗಾಗಿ ಜಾನುವಾರುಗಳ ಸಾಜಣೆ ಕಡಿಮೆಯಾಗುತ್ತಿದೆ. ಅಲ್ಲದೆ ಗುಡುಗಳಲೆ ಜಾತ್ರಾ ಮೈದಾನವನ್ನು ಅಭಿವೃದ್ಧಿ ಪಡಿಸಬೇಕಾಗಿದ್ದು, ಇದರೊಂದಿಗೆ ಮೈದಾನದಲ್ಲಿ ಗಿಡಗಳನ್ನು ಬೆಳೆಸಬೇಕಿದೆ ಎಂದು ಸಲಹೆ ನೀಡಿದರು.

    ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಬಿ.ಧರ್ಮಪ್ಪ ಮಾತನಾಡಿ, ರೈತರಿಗೆ ಕೃಷಿ ಮೂಲ ಕಸುಬು. ಬೆಳೆ ನಷ್ಟವಾದ ಸಂದರ್ಭದಲ್ಲಿ ಹತಾಶರಾಗದೆ ವ್ಯವಸಾಯವನ್ನು ಮುಂದುವರಿಸಿಕೊಂಡು ಹೋಗಬೇಕು. ಜತೆಗೆ ಗ್ರಾಮೀಣ ಸೊಗಡಿನ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಬಿಡಬಾರದು ಎಂದರು.

    ಜಾತ್ರಾ ಸಮಿತಿ ಅಧ್ಯಕ್ಷ ಎಚ್.ಎಂ.ವಿನಯ್ ಅಧ್ಯಕ್ಷತೆ ವಹಿದ್ದರು. ಕಲ್ಲಳ್ಳಿ ಮಠದ ಶ್ರೀ ರುದ್ರಮುನಿ ಸ್ವಾಮೀಜಿ, ಶಿಡುಗಳಲೆ ಮಠದ ಶ್ರೀ ಇಮ್ಮಡಿ ಶಿವಲಿಂಗ ಸ್ವಾಮೀಜಿ, ತಾ.ಪಂ. ಮಾಜಿ ಸದಸ್ಯ ಕುಶಾಲಪ್ಪ, ಹಂಡ್ಲಿ ಗ್ರಾಪಂ ಅಧ್ಯಕ್ಷೆ ಸುಧಾ, ಪಿಡಿಒ ಹರೀಶ್, ದುಂಡಳ್ಳಿ ಗ್ರಾಪಂ ಸದಸ್ಯೆ ಪೂರ್ಣಿಮಾ ಕಿರಣ್, ಶನಿವಾರಸಂತೆ ಸುಪ್ರಜ ಗುರುಕುಲ ಶಾಲೆ ಪ್ರಾಂಶುಪಾಲೆ ಡಿ.ಸುಜಲಾದೇವಿ, ಹಂಡ್ಲಿ ಗ್ರಾಪಂ ಮಾಜಿ ಸದಸ್ಯ ಸೋಮಶೇಖರ್, ಸದಸ್ಯೆ ರೂಪಾ, ಹಂಡ್ಲಿ ಕೃಷಿ ಪತ್ತಿನ ಸಂಘದ ನಿರ್ದೆಶಕ ಲಕ್ಷ್ಮಯ್ಯ ಶೆಟ್ಟಿ, ಜಾತ್ರಾ ಸಮಿತಿ ಉಪಾಧ್ಯಕ್ಷ ವೀರೇಂದ್ರಕುಮಾರ್, ಕಾರ್ಯದರ್ಶಿ ಎನ್.ಎಂ. ಬಸವರಾಜು, ಉಪ ಕಾರ್ಯದರ್ಶಿ ಚೈತ್ರಾ, ಸದಸ್ಯರಾದ ಮಾದೇವಿ, ಸುವರ್ಣ ಇತರರಿದ್ದರು.

    ಜಾತ್ರೆಯಲ್ಲಿ ಜಾನುವಾರುಗಳಿಲ್ಲದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಗ್ರಾಮದ ರೈತರು ಕೊನೆಯ ದಿನ ಬೆಳಗ್ಗೆಯಿಂದ ಸಂಜೆವರೆಗೆ ಸ್ವಯಂ ಪ್ರೇರಿತರಾಗಿ ಎಂಟು ಜೋಡಿ ಎತ್ತುಗಳನ್ನು ತಂದು ಸಾಂಕೇತಿಕವಾಗಿ ಕಟ್ಟಿ ಹಾಕಿದ್ದರು. ಇದರಲ್ಲಿ ಒಂದು ಜೋಡಿ ಹಳ್ಳಿಕಾರ್ ತಳಿಯ ಎತ್ತುಗಳು ಗಮನ ಸೆಳೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts