More

    ಬದುಕಿಗೆ ಆಸರೆಯಾಗುವ ಯೋಜನೆ ರೂಪಿಸಲಿ

    ಮುದಗಲ್: ಅಪಘಾತ ಪ್ರಕರಣಗಳಲ್ಲಿ ವಾಹನ ಚಾಲಕರಿಗೆ 10 ಲಕ್ಷ ರೂ.ದಂಡ ಮತ್ತು 7ವರ್ಷ ಜೈಲು ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ತರಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ವಿರೋಧಿಸಿ ಗ್ರಾಮ ಲೆಕ್ಕಾಧಿಕಾರಿ ವಿದ್ಯಾಗೆ ಕರ್ನಾಟಕ ಚಾಲಕರ ಒಕ್ಕೂಟದಿಂದ ಮನವಿ ಸಲ್ಲಿಸಲಾಯಿತು.

    ಇದನ್ನು ಓದಿ:ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆ: ನಿವೇಶನ ರಚನೆಗೆ ಅಗತ್ಯ ಕ್ರಮಕ್ಕೆ ಡಿಸಿ ಸೂಚನೆ

    ವಾಹನಗಳ ತಾಂತ್ರಿಕ ದೋಷದಿಂದ ಅಪಘಾತ ನಡೆದರೆ ದಿನದ ದುಡಿಮೆ ನಂಬಿಕೊಂಡು ಜೀವನ ನಡೆಸುತ್ತಿರುವ ವಾಹನ ಚಾಲಕರು ದಂಡ ಕಟ್ಟಲು ಸಾಧ್ಯವಿಲ್ಲ. ಇಂತಹ ಕಾನೂನು ಜಾರಿ ಮಾಡಲು ಮುಂದಾಗಿರುವ ಕೇಂದ್ರ ಗೃಹ ಮಂತ್ರಿಗಳ ಧೋರಣೆ ಖಂಡನೀಯ.

    ಈ ಕಾನೂನು ಜಾರಿ ಬದಲು ವಾಹನ ಚಾಲಕರ ಬದುಕಿಗೆ ಆಸರೆ ಆಗುವಂತಹ ಯೋಜನೆ ರೂಪಿಸಬೇಕು ಎಂದು ಒತ್ತಾಯಿಸಲಾಯಿತು. ಪ್ರಮುಖರಾದ ಮಹ್ಮದ ರಫಿ ಕರಾಟೆ, ಅಬ್ದುಲ್ ರಜಾಕ್, ಶಿವರಾಜು, ಆಸೀಫ್, ರಾಜು, ಮಹಿಬೂಬ್, ವೀರಯ್ಯ, ಆರೋಗ್ಯಪ್ಪ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts