More

    ಸ್ವ ಉದ್ಯೋಗದಿಂದ ಸ್ವಾವಲಂಬಿ ಬದುಕು

    ಸೊರಬ: ಹೊಲಿಗೆ ತರಬೇತಿ ಮೂರು ತಿಂಗಳಿಗಷ್ಟೇ ಸೀಮಿತವಾಗಿರದೆ, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ದೊಡ್ಡ ಮಟ್ಟದಲ್ಲಿ ಸ್ವ ಉದ್ಯೋಗ ಆರಂಭಿಸಿದರೆ ನಮ್ಮ ಕಾರ್ಯಕ್ರಮ ಸಾರ್ಥಕ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿದೇರ್ಶಕ ಎ.ಬಾಬು ನಾಯ್ಕ ತಿಳಿಸಿದರು.
    ಸೋಮವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ತಾಲೂಕಿನ ತತ್ತೂರು ವಲಯದ ಭಾರಂಗಿ ಕಾರ್ಯಕ್ಷೇತ್ರದ ಹುಚ್ಚೇಶ್ವರ ಜ್ಞಾನವಿಕಾಸ ಕೇಂದ್ರದಲ್ಲಿ ಜ್ಞಾನ ವಿಕಾಸ ಕಾರ್ಯಕ್ರಮದಡಿಲ್ಲಿ ಮೂರು ತಿಂಗಳ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪದಲ್ಲಿ ತರಬೇತುದಾರರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
    ಪ್ರತಿ ತಿಂಗಳು ಜ್ಞಾನ ವಿಕಾಸ ಕಾರ್ಯಕ್ರಮಗಳು ನಡೆಯುತ್ತವೆ. ಆರೋಗ್ಯ, ಶಿಕ್ಷಣ, ಕಾನೂನು ಅರಿವು, ಮಕ್ಕಳ ಪಾಲನೆ-ಪೋಷಣೆ, ಸಂಸ್ಕೃತಿ ಮತ್ತು ಸಂಸ್ಕಾರ, ಕುಟುಂಬ ನಿರ್ವಹಣೆ, ಸ್ವ-ಉದ್ಯೋಗ ಇತ್ಯಾದಿ ವಿಚಾರಗಳ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಮಾಹಿತಿ ಕೊಡಿಸಲಾಗುತ್ತಿದೆ. ಇನ್ನೂ ಹೆಚ್ಚಿನ ತರಬೇತಿಯನ್ನು ನಮ್ಮ ಕೇಂದ್ರದಲ್ಲಿ ಪಡೆಯಬಹುದು. -Àಲಾನುಭವಿಗಳು ಕೇವಲ ತರಬೇತಿಗೆ ಸೀಮಿತವಾಗದೆ ಇದರ ಸದುಪಯೋಗ ಪಡೆದು, ಬದುಕು ಕಟ್ಟಿಕೊಳ್ಳಬೇಕು ಎಂದರು.
    ತರಬೇತಿ ಪಡೆದ 26 ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಮುಖಂಡ ಚನ್ನಬಸಪ್ಪ, ತಾಲೂಕು ಯೋಜನಾಽಕಾರಿ ಸುಬ್ರಾಯ ನಾಯ್ಕ್, ಹೊಲಿಗೆ ಶಿಕ್ಷಕಿ ರಾಜೇಶ್ವರಿ, ವಲಯದ ಮೇಲ್ವಿಚಾರಕ ಸುರೇಶ, ಜ್ಞಾನವಿಕಾಸ ಸಮನ್ವಯಾಽಕಾರಿ ಶೋಭಾ, ಸೇವಾಪ್ರತಿನಿಽ ಶಿಲ್ಪಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts