More

    ಸುದ್ದಿಗಾಗಿ ಬದುಕುವುದಕ್ಕಿಂತ ಶುದ್ಧವಾಗಿ ಬದುಕಬೇಕು: ಶ್ರೀ ಡಾ. ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ

    ರಿಪ್ಪನ್‌ಪೇಟೆ: ಸಮಾಜದಲ್ಲಿ ಸುದ್ದಿಗಾಗಿ ಬದುಕುವುದಕ್ಕಿಂತ ಶುದ್ಧವಾಗಿ ಬದುಕುವುದೇ ಲೇಸು ಎಂದು ಮಳಲಿ ಮಠದ ಶ್ರೀ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಪಟ್ಟಣದ ಶ್ರೀಶಾರದಾ ರಾಮಕೃಷ್ಣ ವಿದ್ಯಾಲಯದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಮತ್ತು ಪ್ರತಿಭಾ ಪ್ರದರ್ಶನ ಸಮಾರಂಭದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
    ನಿಂದಿಸುವವರಿಗೆಲ್ಲ ಉತ್ತರಿಸುತ್ತಿದ್ದರೆ ನೀವು ಅದೇ ಕೆಲಸ ಮಾಡುತ್ತಿರಬೇಕು. ನಿಂದಕರನ್ನು ಮೆಟ್ಟಿ ಮುನ್ನಡೆಯಬೇಕು. ಜಗತ್ತಿನ ಯಾವ ವಿಶ್ವವಿದ್ಯಾಲಯ ಕಲಿಸದ ಪಾಠವನ್ನು ಬಡತನ, ಸೋಲು, ಹಸಿವು ನಮಗೆ ಕಲಿಸುತ್ತದೆ. ಬಡತನ ಸಿರಿತನ ಎರಡೂ ಶಾಶ್ವತವಲ್ಲ. ಪ್ರತಿಯೊಬ್ಬರಲ್ಲಿನ ಮಾನವೀಯ ಗುಣಗಳೇ ಶಾಶ್ವತ. ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು ಶುದ್ಧವಾದ ವಿದ್ಯೆಗಳಿಸಿ ಗುರು ಹಿರಿಯರಿಗೆ ಗೌರವಪೂರ್ವಕ ಜೀವನ ಸಾಗಿಸುವುದೇ ನಿಜವಾದ ಜೀವನ ಎಂದರು.
    ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಿದರೆ ಅವರ ಬಾಳು ಉಜ್ವಲಗೊಳ್ಳುತ್ತದೆ. ಹಾಗಾಗಿ ಪಾಲಕರು ಮಕ್ಕಳಿಗೆ ಶಿಕ್ಷಣದಿಂದ ದೂರ ಇರಿಸದೆ ಗುಣಮಟ್ಟದ ವಿದ್ಯಾಭ್ಯಾಸ ಕೊಡಿಸಬೇಕು. ಶಿಕ್ಷಕರ ಪಾತ್ರ ಸಮಾಜದಲ್ಲಿ ಉತ್ತಮ ಕಾರ್ಯವಾಗಿದ್ದು ಅದನ್ನು ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು.
    ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಾಗೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಪಾಲಕರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಮುಖ್ಯಸ್ಥ ದೇವರಾಜ, ಮುಖ್ಯ ಶಿಕ್ಷಕ ರವಿ, ತ.ಮ.ನರಸಿಂಹ, ಟಿ.ಆರ್.ಕೃಷ್ಣಪ್ಪ, ಬಸವರಾಜ ಗೌಡ, ಸುರೇಶ, ಸರಿತಾ ದೇವರಾಜ, ಗುರುರಾಜ, ಸಂದೇಶ, ವಿನಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts