More

    ವಿಶ್ವಕಪ್‌ನಲ್ಲಿ ಧೋನಿಗೆ ಗೆಲುವಿನ ಆಸೆಯೇ ಇರಲಿಲ್ಲ, ಸ್ಟೋಕ್ಸ್ ಬೌನ್ಸರ್!

    ನವದೆಹಲಿ: ಮಹೇಂದ್ರ ಸಿಂಗ್ ಧೋನಿ ಎಂದರೆ ಒಬ್ಬ ಅತ್ಯುತ್ತಮ ವಿಕೆಟ್ ಕೀಪರ್, ನಾಯಕ ಮತ್ತು ಸ್ಫೋಟಕ ಬ್ಯಾಟ್ಸ್‌ಮನ್ ಆಗಿ ಮಾತ್ರ ಗುರುತಿಸಲ್ಪಡುವುದಿಲ್ಲ. ಒಬ್ಬ ಮ್ಯಾಚ್ ಫಿನಿಶರ್ ಆಗಿಯೂ ಹೆಸರು ಮಾಡಿದ್ದಾರೆ. ಆದರೆ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧದ ಲೀಗ್ ಪಂದ್ಯದಲ್ಲಿ ಭಾರತ ತಂಡದ ರನ್ ಚೇಸಿಂಗ್ ವೇಳೆ ಧೋನಿ ಆಟದಲ್ಲಿ ಗೆಲುವಿನ ಆಸಕ್ತಿಯೇ ಇರಲಿಲ್ಲವಂತೆ! ಆ ವಿಶ್ವಕಪ್ ಟೂರ್ನಿಯನ್ನು ಇಂಗ್ಲೆಂಡ್ ಜಯಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಈ ರೀತಿ ಆರೋಪಿಸಿದ್ದಾರೆ.

    ಇದನ್ನೂ ಓದಿ: ಪ್ರೇಕ್ಷಕರಿಲ್ಲದೆ ಆಡಲ್ವಂತೆ ಈ ಟೆನಿಸ್​ ಆಟಗಾರ್ತಿ!

    ಬೆನ್ ಸ್ಟೋಕ್ಸ್ ಬರೆದಿರುವ ಹೊಸ ಪುಸ್ತಕ ‘ಆನ್ ಫೈರ್​’ನಲ್ಲಿ 2019ರ ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ತಂಡ ಆಡಿದ ಪ್ರತಿ ಪಂದ್ಯದ ಬಗ್ಗೆ ವಿಶ್ಲೇಷಣೆ ಮಾಡಿದ್ದಾರೆ. ಇದರಲ್ಲಿ ಭಾರತ ವಿರುದ್ಧ 31 ರನ್‌ಗಳಿಂದ ಜಯಿಸಿದ ಪಂದ್ಯವೂ ಸೇರಿದೆ. ಆ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮರ ಆಟವೂ ತಬ್ಬಿಬ್ಬಾಗಿತ್ತು ಎಂದಿರುವ ಸ್ಟೋಕ್ಸ್, ಭಾರತ ತಂಡದ ರನ್ ಚೇಸಿಂಗ್ ಕಾರ್ಯತಂತ್ರವೇ ಅಚ್ಚರಿಯಾಗಿತ್ತು ಎಂದಿದ್ದಾರೆ. ಈ ಪಂದ್ಯದಲ್ಲಿ ಸ್ಟೋಕ್ಸ್ ಬಿರುಸಿನ 79 ರನ್ ಸಿಡಿಸಿದ್ದರು.

    ವಿಶ್ವಕಪ್‌ನಲ್ಲಿ ಧೋನಿಗೆ ಗೆಲುವಿನ ಆಸೆಯೇ ಇರಲಿಲ್ಲ, ಸ್ಟೋಕ್ಸ್ ಬೌನ್ಸರ್!

    ಇದನ್ನೂ ಓದಿ: ಕರೊನಾ ಮಣಿಸಲು ಖಾಕಿತೊಟ್ಟ ಫುಟ್‌ಬಾಲ್ ಆಟಗಾರ್ತಿ

    ಬರ್ಮಿಂಗ್‌ಹ್ಯಾಂನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 7 ವಿಕೆಟ್‌ಗೆ 337 ರನ್ ಪೇರಿಸಿದ್ದರೆ, ಭಾರತ ತಂಡ 5 ವಿಕೆಟ್‌ಗೆ 306 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ‘ಧೋನಿ ಕ್ರೀಸ್‌ಗೆ ಇಳಿದಾಗ 11 ಓವರ್‌ಗಳಲ್ಲಿ 112 ರನ್ ಅಗತ್ಯವಿತ್ತು. ಆಗ ಅವರ ಆಟವೇ ವಿಚಿತ್ರವಾಗಿತ್ತು. ಸಿಕ್ಸರ್‌ಗಳನ್ನು ಸಿಡಿಸುವುದಕ್ಕಿಂತ ಸಿಂಗಲ್ಸ್ ಕಸಿಯುವುದರತ್ತಲೇ ಅವರು ಆಸಕ್ತಿ ಹೊಂದಿದ್ದರು. ಕೊನೆಯ 12 ಎಸೆತಗಳು ಬಾಕಿ ಇರುವಾಗಲೂ ಭಾರತಕ್ಕೆ ಗೆಲುವಿನ ಅವಕಾಶಗಳಿದ್ದವು. ಆದರೆ ಆ ಪ್ರಯತ್ನ ನಡೆಯಲೇ ಇಲ್ಲ. ಧೋನಿ ಅಥವಾ ಅವರ ಜತೆಗಾರ ಕೇದಾರ್ ಜಾಧವ್ ಅವರಲ್ಲಿ ಗೆಲುವಿನ ಯಾವ ಆಸಕ್ತಿಯೂ ಕಾಣಿಸಿರಲಿಲ್ಲ. ಗೆಲುವಿನ ಅವಕಾಶ ಇದ್ದಾಗಲೂ ಅವರು ದೊಡ್ಡ ಹೊಡೆತಗಳಿಗೆ ಕೈಹಾಕಲಿಲ್ಲ’ ಎಂದು ಸ್ಟೋಕ್ಸ್ ವಿವರಿಸಿದ್ದಾರೆ. ಆ ಪಂದ್ಯದಲ್ಲಿ ಧೋನಿ 31 ಎಸೆತಗಳಲ್ಲಿ 42 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು. ಇದರಲ್ಲೂ ಹೆಚ್ಚಿನ ರನ್ ಕೊನೆಯ ಓವರ್‌ನಲ್ಲಿ, ಪಂದ್ಯ ಗೆಲುವಿನ ಅವಕಾಶ ಕೈತಪ್ಪಿದ ಬಳಿಕ ಬಂದಿತ್ತು.

    ಇದನ್ನೂ ಓದಿ: ಗೆದ್ದು ನನ್ನ ಆರೋಗ್ಯ ವೃದ್ಧಿಸಿ ಎಂದು ಬಲ್ಬೀರ್ ಹೇಳಿದ್ದು ಯಾರಿಗೆ…

    ರೋಹಿತ್-ಕೊಹ್ಲಿ ಆಟಕ್ಕೂ ಅಚ್ಚರಿ

    ವಿಶ್ವಕಪ್‌ನಲ್ಲಿ ಧೋನಿಗೆ ಗೆಲುವಿನ ಆಸೆಯೇ ಇರಲಿಲ್ಲ, ಸ್ಟೋಕ್ಸ್ ಬೌನ್ಸರ್!
    ಭಾರತೀಯ ಇನಿಂಗ್ಸ್‌ನ ಆರಂಭದಲ್ಲಿ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ 138 ರನ್ ಜತೆಯಾಟಕ್ಕಾಗಿ 27 ಓವರ್ ವ್ಯಯಿಸಿದ್ದಕ್ಕೂ ಸ್ಟೋಕ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ರೋಹಿತ್-ಕೊಹ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಅವಧಿಯಲ್ಲಿ ನಾವು ಉತ್ತಮ ಬೌಲಿಂಗ್ ಸಂಘಟಿಸಿದ್ದೆವು. ಆದರೆ ಅವರ ಬ್ಯಾಟಿಂಗ್ ವಿಧಾನವೂ ವಿಚಿತ್ರವೆನಿಸಿತ್ತು. ತಮ್ಮ ತಂಡ ಚೇಸಿಂಗ್ ವೇಳೆ ಸಾಕಷ್ಟು ಹಿಂದುಳಿಯುವಂತೆ ಅವರಿಬ್ಬರು ಮಾಡಿದ್ದರು. ಅವರು ನಮ್ಮ ತಂಡದ ಮೇಲೆ ಒತ್ತಡ ಹೇರಲು ಪ್ರಯತ್ನಿಸಲೇ ಇಲ್ಲ’ ಎಂದು ಸ್ಟೋಕ್ಸ್ ಬರೆದಿದ್ದಾರೆ. ಪಂದ್ಯದಲ್ಲಿ ರೋಹಿತ್ 109 ಎಸೆತಗಳಲ್ಲಿ 102 ರನ್ ಗಳಿಸಿದ್ದರೆ, ಕೊಹ್ಲಿ 76 ಎಸೆತಗಳಲ್ಲಿ 66 ರನ್ ಬಾರಿಸಿದ್ದರು.

    ಇದನ್ನೂ ಓದಿ: ಗಂಗೂಲಿ-ದ್ರಾವಿಡ್ ಅಮೋಘ ಜತೆಯಾಟಕ್ಕೆ 21 ವರ್ಷ!

    ಪಂದ್ಯದ ಬಳಿಕ ಮೈದಾನದ 59 ಮೀಟರ್‌ಗಳ ಸಣ್ಣ ಬೌಂಡರಿ ಬಗ್ಗೆ ಕೊಹ್ಲಿ ದೂರಿದ್ದರ ಬಗ್ಗೆಯೂ ಸ್ಟೋಕ್ಸ್ ಟೀಕಿಸಿದ್ದಾರೆ. ‘ಎರಡೂ ತಂಡಗಳು ಒಂದೇ ಮೈದಾನದಲ್ಲಿ ಆಡುವ ಅವಕಾಶ ಪಡೆದಿವೆ. ಒಂದೇ ಸಂಖ್ಯೆಯ ಎಸೆತಗಳನ್ನು ಎದುರಿಸಿವೆ. ಹೀಗಿರುವಾಗ, ಮೈದಾನದ ಅಳತೆ ಒಂದು ತಂಡಕ್ಕೆ ಮಾತ್ರ ಲಾಭದಾಯಕವಾಗಿರಲು ಹೇಗೆ ಸಾಧ್ಯ’ ಎಂದು ಸ್ಟೋಕ್ಸ್ ಪ್ರಶ್ನಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts