More

    ದೇಶದಲ್ಲಿ ವ್ಯಾಜ್ಯಗಳ ಸಂಖ್ಯೆ ಕಡಿಮೆಯಾಗಬೇಕು

    ಚಿತ್ರದುರ್ಗ: ದೇಶದ ಪ್ರಜಾಪ್ರಭುತ್ವದ ಯಶಸ್ಸು,ನೈತಿಕ ಬೆಳವಣಿಗೆಗೆ ನೈಸರ್ಗಿಕ ಮತ್ತು ಮಾನವ ರಚಿತ ಕಾನೂನುಗಳನ್ನು ಹತ್ತಿರ ತರ ಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

    ನಗರದಲ್ಲಿ ಬುಧವಾರ ಸರಸ್ವತಿ ಕಾನೂನು ಕಾಲೇಜು ನೂತನ ಕಟ್ಟಡ‘ಕಾನೂನು ಸೌಧ’ಉದ್ಘಾಟಿಸಿ ಮಾತನಾಡಿ,ಸತ್ಯವನ್ನು ಹೇಳು,ಧರ್ಮದಿಂದ ನಡೆ ಎಂಬಿತ್ಯಾದಿ ಪುಣ್ಯಪ್ರಾಪ್ತಿ ಬಗ್ಗೆ ಹೇಳುವ ನೈಸರ್ಗಿಕ ಕಾನೂನು,ರಿವಾರ್ಡ್ ಓರಿಯೆಂಟೆಡ್‌ನಿಂದ ಕೂಡಿದ್ದರೆ,ಸುಳ್ಳು ಹೇಳಬೇಡ, ಅಧರ್ಮ ದಿಂದ ನಡೆಯ ಬೇಡ,ತಪ್ಪಿದರೆ ಶಿಕ್ಷೆಯಾಗುತ್ತದೆ ಎಂದು ಮಾನವ ನಿರ್ಮಿತ ಕಾನೂನುಗಳು ಹೇಳುತ್ತವೆ.

    ಸುಪ್ರೀಂಕೋರ್ಟ್,ಹೈಕೋರ್ಟ್,ಜಿಲ್ಲಾ ಹಾಗೂ ತಾಲೂಕು ಕೋರ್ಟ್‌ಗಳಲ್ಲಿ ಹಾಗೂ ವಕೀಲರ ಸಂಘಗಳಲ್ಲಿ ನಾಡಿನ ಜ್ವಲಂತ ಸಮಸ್ಯೆಗಳಿಗೆ ಹೇಗೆ ಪರಿಹಾರ ಒದಗಿಸ ಬಹುದು ಎಂಬುದರ ಕುರಿತು ಚಿಂತನೆ ನಡೆಯಲಿ. ಶಾಸಕಾಂಗ ಹಾಗೂ ನ್ಯಾಯಾಂಗ ಒಂದನ್ನೊಂದು ಅವಲಂಬಿ ಸಿವೆ. ಶಾಸಕಾಂಗದಿಂದ ಕಾನೂನು ರೂಪಿಸುವಾಗ ಹತ್ತು ಹಲವು ವಿಚಾರಗಳನ್ನು ಗಮನಿಸ ಬೇಕಾಗುತ್ತದೆ. ರೂಪಿಸುವ ಕಾನೂನುಗಳಿಗೆ ಸಂವಿಧಾನದ ಬದ್ಧತೆ,ಸಮಾನತೆಯ ಸ್ವರೂಪವಿರ ಬೇಕು,ಗೊಂದಲಗಳಿಲ್ಲದೆ, ಸ್ಪಷ್ಟತೆಯಿಂದ ಕಾನೂನುಗಳನ್ನು ರೂಪಿಸ ಬೇಕು.

    ದೇಶದಲ್ಲಿ ವ್ಯಾಜ್ಯಗಳ ಸಂಖ್ಯೆ ಕಡಿಮೆಯಾಗಬೇಕು. ಯಾವುದೇ ವೃತ್ತಿಯಾದರೂ ಸರಿ ಮಾನವೀಯತೆ ಮರೆಯಾಗಬಾರದು. ದೇಶಕ್ಕೆ ಭವ್ಯ ಚ ರಿತ್ರೆ ಇದೆ,ಆದರೆ ಇಂದು ಚಾರಿತ್ಯವಂತರು ಬೇಕಾಗಿದ್ದಾರೆ. ನೀತಿ ಬೋಧಿಸುವ ಆಚಾರ‌್ಯರು ಇದ್ದಾರೆ,ಆದರೆ ನೀತಿಗಳನ್ನು ಆಚರಿಸುವಂತಾಗ ಬೇಕಾಗಿದೆ.
    ಅಧಿಕಾರಕ್ಕೆ ಬಂದಂಥ 59 ತಿಂಗಳು ಅಭಿವೃದ್ಧಿ ಕೆಲಸ ಮಾಡ ಬೇಕು. ಇನ್ನೊಂದು ತಿಂಗಳು ರಾಜಕಾರಣ ಮಾಡ ಬೇಕೆಂಬುದನ್ನು ರಾಜಕೀಯ ಪಕ್ಷಗಳ ಅರಿಯಬೇಕು. ರಾಜಕಾರಣಿ ಮುಂದಿನ ಚುನಾವಣೆ ನೋಡುತ್ತಾನೆ,ಆದರೆ ಮುತ್ಸದ್ಧಿ ದೃಷ್ಟಿ ಮುಂದಿನ ಪೀಳಿಗೆಯ ಮೇಲೆ ಇರುತ್ತದೆ. ಮುಂದಿನ ಪೀಳಿಗೆಗೆ ಮೌಲ್ಯಗಳನ್ನು ತಿಳಿಸ ಬೇಕಿದೆ.

    ಐದನೇ ಲೋಕಸಭೆಯವರೆಗೂ ಶೇ.30 ವಕೀಲರು ಸಂಸದರು ಹಾಗೂ ಮಂತ್ರಿಗಳಾಗಿದ್ದರು,ಸ್ವಾತಂತ್ರೃಹೋರಾಟ ಮತ್ತು ಉತ್ತಮ ಸಮಾಜದ ನಿರ್ಮಾಣದಲ್ಲಿ ವಕೀಲರ ಮಹತ್ವದ ಪಾತ್ರವನ್ನು ವಿವರಿಸಿದರು. ಸರಸ್ವತಿ ವಿದ್ಯಾಸ್ಥಂಸ್ಥೆ ಮಧ್ಯ ಕರ್ನಾಟಕದಲ್ಲಿ ಉತ್ತಮ ವಕೀಲರನ್ನು ರೂಪಿಸಿದೆ ಎಂದು ಶ್ಲಾಘಿಸಿದರು.

    2 ಕೋಟಿ ರೂ.ಅನುದಾನ
    ಸರಸ್ವತಿ ಕಾನೂನು ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ 2 ಕೋಟಿ ರೂ.ಅನುದಾನ ಒದಗಿಸುವುದಾಗಿ ಹೇಳಿದ ಸಿಎಂ,ಕಾಲೇಜು ವಿ ದ್ಯಾರ್ಥಿಗಳಿಗೆ ಹಾಸ್ಟೆಲ್ ಸ್ಥಾಪನೆ ಹಾಗೂ ಕಾನೂನು ಕಾಲೇಜುಗಳ ಆಡಳಿತಕ್ಕಾಗಿ ನಿರ್ದೇಶನಾಲಯ ಸ್ಥಾಪನೆ ಕುರಿತು ಚರ್ಚಿಸುವ ಭರವಸೆ ನೀಡಿದರು.

    ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷ ಎಚ್.ಹನುಂತಪ್ಪ ಮಾತನಾಡಿ,ಸ್ನಾತಕೋತ್ತರ ಕೇಂದ್ರಕ್ಕೆ ಅನುದಾನ,ಹಾಸ್ಟೆಲ್ ಹಾಗೂ ಕಾನೂನು ಕಾಲೇಜುಗಳ ಆಡಳಿತಕ್ಕೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸ ಬೇಕೆಂದು ಸಿಎಂಗೆ ಮನವಿ ಮಾಡಿದರು. ಸಚಿವರಾದ ಗೋವಿಂದ ಕಾರಜೋಳ, ಬಿ.ಎ.ಬಸವರಾಜ,ಶಾಸಕ ಎಂ.ಚಂದ್ರಪ್ಪ,ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ,ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್,ಕೆ.ಎಸ್.ನವೀನ್,ನಗರಸಭೆ ಅಧ್ಯಕ್ಷೆ ತಿಪ್ಪಮ್ಮ ವೆಂಕಟೇಶ್,ಕುಡಾ ಅಧ್ಯಕ್ಷ ಜಿ.ಟಿ.ಸುರೇಶ್,ಹುಬ್ಬಳ್ಳಿ ಕಾನೂನು ವಿವಿ ಉಪಕುಲಪತಿ ಡಾ.ಸಿ.ಬಸವರಾಜು,ಜಿ.ಪಂ. ಸಿಇಒ ಎಂ.ಎಸ್.ದಿವಾಕರ್,ಎಡಿಸಿ ಇ.ಬಾಲಕೃಷ್ಣ ಮತ್ತಿತರ ಅಧಿಕಾರಿಗಳು ಹಾಗೂ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯರು ಇದ್ದರು. ಕಾರ‌್ಯ ದರ್ಶಿ ಡಿ.ಕೆ.ಶೀಲಾ ಸ್ವಾಗತಿಸಿದರು. ಈ ವೇಳೆ ಸಾಧಕರನ್ನು ಗೌರವಿಸಲಾಯಿತು.

    ಕೋಟ್
    ಕಾಲೇಜು ಸ್ಥಾಪನೆಯಾದ 57 ವರ್ಷಗಳಿಂದ ಈವರೆಗೆ 6820 ವಿದ್ಯಾರ್ಥಿಗಳಿಗೆ ಕಾನೂನು ಶಿಕ್ಷಣ ನೀಡಲಾಗಿದೆ. 110 ರ‌್ಯಾಂಕ್‌ಗಳಲ್ಲಿ 11 ಪ್ರಥ ಮ ರ‌್ಯಾಂಕ್‌ಗಳು ಬಂದಿವೆ. ಪ್ರತಿ ವರ್ಷ 1100 ವಿದ್ಯಾರ್ಥಿಗಳು ಕಾನೂನು ಪದವಿ ಪಡೆಯುತ್ತಿದ್ದಾರೆ. 200 ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರತ್ಯೇಕ ವಸತಿ ನಿಲಯ ಬೇಕು. ರಾಜ್ಯದಲ್ಲಿರುವ ಎಲ್ಲ 108 ಕಾನೂನು ಕಾಲೇಜುಗಳಲ್ಲಿ 27ಕ್ಕೆ ವೇತಾನುದಾನವಿದೆ. ನಮ್ಮ ಕಾಲೇಜಿನ ಅನೇಕ ವಿ ದ್ಯಾರ್ಥಿಗಳು ನ್ಯಾಯಾಧೀಶರಾಗಿದ್ದಾರೆ. ಯಾವುದೇ ಅನುದಾನವಿಲ್ಲದೆ ನಾವೇ ಒಂದು ಕೋಟಿ ರೂ.ವೆಚ್ಚದಲ್ಲಿ ಕಾನೂನು ಸೌಧ ನಿರ್ಮಿಸಿದ್ದೇ ವೆ.
    ಎಚ್.ಹನುಮಂತಪ್ಪ,ಸರಸ್ವತಿ ವಿದ್ಯಾಸಂಸ್ಥೆ ಅಧ್ಯಕ್ಷ,ಚಿತ್ರದುರ್ಗ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts