More

    ಮಂಡ್ಯ ಪೊಲೀಸರಿಂದ ಸಾಹಿತಿ ಹಂಪನಾ ವಿಚಾರಣೆ: ಸಾಹಿತ್ಯ ವಲಯದಲ್ಲಿ ಆಕ್ರೋಶ

    ಬೆಂಗಳೂರು: ಕೇಂದ್ರದ ಎನ್‌ಡಿಎ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದ ಹಿರಿಯ ಸಂಶೋಧಕ, ಸಾಹಿತಿ ಹಂ.ಪ. ನಾಗರಾಜಯ್ಯ ಅವರನ್ನು ಮಂಡ್ಯ ಪೊಲೀಸರು ಗುರುವಾರ ವಿಚಾರಣೆಗೆ ಒಳಪಡಿಸಿರುವುದು ಸಾಹಿತ್ಯ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

    ಇತ್ತೀಚೆಗೆ ನಡೆದ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದ ಹಂಪನಾ ಅವರು ಕೇಂದ್ರ ಸರ್ಕಾರವನ್ನು ಟೀಕಿಸುವ ಭರದಲ್ಲಿ ‘ದುರ್ಯೋಧನ, ಗೋಮುಖ ವ್ಯಾಘ್ರ’ ಎಂಬಿತ್ಯಾದಿ ಪದಗಳನ್ನು ಬಳಸಿದ್ದರು. ಇದನ್ನು ಗಮನಿಸಿದ ಕೆಲವು ಬಿಜೆಪಿ ಕಾರ್ಯಕರ್ತರು ಹಂಪನಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಂಪನಾ ಅವರನ್ನು ಪೊಲೀಸರು ಗುರುವಾರ ವಿಚಾರಣೆಗೆ ಕರೆದಿದ್ದರು. ದೂರು ನೀಡಿದವರೇ ವಿಚಾರಣೆ ಸಂದರ್ಭದಲ್ಲಿ ಹಾಜರಿಲ್ಲದ್ದರಿಂದ ಪೊಲೀಸರು ಕೆಲ ಕಾಲ ಹಂಪನಾ ಅವರಿಂದ ಅವರ ಭಾಷಣದ ಕುರಿತು ವಿವರಣೆ ಪಡೆದು ಕಳುಹಿಸಿದ್ದರು.

    ಇದನ್ನೂ ಓದಿ: ಇದು ಅಮಲಿಳಿಸೋ ಸುದ್ದಿ; ‘ಫಿಗರ್’ ಬೇಕೆಂದರೆ ‘ಡ್ರಿಂಕ್ಸ್’ ಬಿಡಿ..!

    ಈ ವಿಷಯ ಮಾಧ್ಯಮಗಳಲ್ಲಿ ವರದಿಯಾಗುತ್ತಿದ್ದಂತೆಯೇ ಕನ್ನಡ ಸಾಹಿತ್ಯ ವಲಯದಲ್ಲಿ ಪೊಲೀಸರ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ‘‘ಕನ್ನಡದ ಹಿರಿಯ ಸಾಹಿತಿಯೊಬ್ಬರನ್ನು ಹೀಗೆ ವಿಚಾರಣೆಗೆ ಕರೆಸಿದ್ದೇ ತಪ್ಪು. ಸರ್ಕಾರದ ವಿರುದ್ಧ ಯಾರೂ ಮಾತನಾಡಬಾರದು ಎಂಬುದು ಸರ್ವಾಧಿಕಾರಿ ಧೋರಣೆ. ಪೊಲೀಸರು ಕೂಡಲೇ ಕ್ಷಮೆ ಯಾಚಿಸಬೇಕು’’ ಎಂದು ಹಲವಾರು ಸಾಹಿತಿಗಳು, ಲೇಖಕರು ಒತ್ತಾಯಿಸಿದ್ದಾರೆ.

    ಇದು ಮಹಿಳೆಯರ ಮುಖಭಾವನೆಯನ್ನೇ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡುತ್ತದೆಯಂತೆ!

    ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts