More

    ಸಾಹಿತ್ಯ ಸೃಷ್ಟಿಗೆ ಸೃಜನಶೀಲತೆ ಅಗತ್ಯ

    ಬೆಳಗಾವಿ: ಸೃಜನಶೀಲ ಸಾಹಿತ್ಯವು ಸಾಮಾಜಿಕ ಸಂವೇದನೆಯಾಗಬೇಕು. ಸೃಜನಶೀಲ ಮತ್ತು ವಿದ್ವತ್ತು ಮೇಳೈಸಿದರೆ ಅದ್ಭುತವಾದ ಸಾಹಿತ್ಯ ಸೃಷ್ಟಿಯಾಗುತ್ತದೆ ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಮುಖ್ಯಸ್ಥ ಪ್ರೊ.ಎಸ್.ಎನ್. ಗಂಗಾಧರಯ್ಯ ತಿಳಿಸಿದರು. ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಲೇಖಕಿಯರ ಸಂಘ ಭಾನುವಾರ ಹಮ್ಮಿಕೊಂಡಿದ್ದ ಶ್ವೇತಾ ನರಗುಂದ ಅವರ ನಾಲ್ಕು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಥಾ ಪರಂಪರೆಯಲ್ಲಿ ಬೆಳವಣಿಗೆಯ ಮಜಲುಗಳ ಪಲ್ಲಟಗಳು ಕವಿತೆಯ ರೂಪಕ ಮಾಪಕಗಳು ವ್ಯವಸ್ಥೆಯೊಂದಿಗೆ ಮಾತನಾಡಬೇಕು ಎಂದರು.

    ಡಾ.ಗುರುದೇವಿ ಹುಲೆಪ್ಪನವರಮಠ ಮಾತನಾಡಿ, ಕಲೆ ಕಲಾತ್ಮಕವಾಗಿರಬೇಕು, ಜೀವನಾತ್ಮಕವಾಗಿರಬೇಕು. ಕಲೆಯು ಜೀವನದೊಂದಿಗಿನ ಸಂಬಂಧದ ಕೊಂಡಿಯಾಗಿರಬೇಕು ಎಂದು ಅಭಿಪ್ರಾಯಪಟ್ಟರು. ಡಾ.ಪಿ.ಜಿ. ಕೆಂಪಣ್ಣ, ಶಿರೀಷ ಜೋಶಿ, ಜಯಶೀಲಾ ಬ್ಯಾಕೋಡ, ಶ್ವೇತಾ ನರಗುಂದ, ಡಾ.ಸರಜೂ ಕಾಟ್ಕರ್, ನೀಲಗಂಗಾ ಚರಂತಿಮಠ, ಮಂಗಳಾ ಮೆಟಗುಡ್ಡ, ಎಂ.ವೈ. ಮೇನಸಿನಕಾಯಿ, ನಂದಾ ಗಾರ್ಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts