More

    ಸಾಹಿತ್ಯ ರಚನೆಗೆ ಅನುಭವವೇ ಪೂರಕ ಸಾಧನ: ಸಚಿವ ತಂಗಡಗಿ ಅಭಿಮತ

    ಕಾರಟಗಿ: ಬದುಕಿನ ಅಪಾರ ಅನುಭವವೇ ಸಾಹಿತ್ಯ ರಚನೆಗೆ ಪೂರಕವಾಗಬಲ್ಲದು ಎಂದು ಸಚಿವ ಶಿವರಾಜ ತಂಗಡಗಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಪಟ್ಟಣದ ಕೆಪಿಎಸ್ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಏರ್ಪಡಿಸಿದ್ದ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದ ಮಂಜುನಾಯಕ ಚಳ್ಳೂರುಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

    ಸತತ ಪರಿಶ್ರಮ ಇದ್ದರೆ ಸಾಮಾನ್ಯನೂ ಅಸಾಮಾನ್ಯ ವ್ಯಕ್ತಿಯಾಗಬಲ್ಲ. ಗ್ರಾಮೀಣ ಪ್ರದೇಶದ ಸೊಗಡು, ಅಸಹಾಯಕತೆ, ಅಪಮಾನ, ಸೌಹಾರ್ದ-ಸಾಮರಸ್ಯ ಸೇರಿ ಎಲ್ಲ ರೀತಿಯ ಬದುಕಿನ ಚಿತ್ರಗಳನ್ನು ಕತೆಯ ಮೂಲಕ ಕತೆಗಾರ ನಾಡಿಗೆ ಪರಿಚಯಿಸಿದ್ದಾರೆ. ತಮ್ಮ ಅನುಭವಗಳ ಜತೆಗೆ ಸಾಹಿತಿಗಳು ಕನ್ನಡ ಭಾಷೆ ಮತ್ತು ಸಂಸ್ಕೃತಿ ಉಳಿವಿಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.

    ಪದವಿ ಮಹಾವಿದ್ಯಾಲಯ, ಸುಸಜ್ಜಿತ ಗ್ರಂಥಾಲಯ, ಬಾಲಕಿಯರ ಪ್ರೌಢಶಾಲೆ ಸೇರಿ ಅನೇಕ ಅಭಿವೃದ್ಧಿ ಕೆಲಸಗಳ ಬೇಡಿಕೆಯಿದೆ. ಚುನಾವಣೆ ಪೂರ್ವ ಘೋಷಿಸಿದ ಐದು ಗ್ಯಾರಂಟಿಗಳನ್ನು ಈಡೇರಿಸಲು ಸರ್ಕಾರ ಆದ್ಯತೆ ನೀಡಿದೆ. ಕ್ಷೇತ್ರದಲ್ಲಿ ನೀಡಿದ ಭರವಸೆಗಳನ್ನು ಹಂತಹಂತವಾಗಿ ಈಡೇರಿಸಲಾಗುವುದು ಎಂದು ತಿಳಿಸಿದರು.

    ಧಾರವಾಡ ಕೆಸಿಡಿ ಕಾಲೇಜಿನ ಪ್ರಾಚಾರ್ಯು ಡಾ.ಡಿ.ಬಿ.ಕರಡೋಣಿ, ಪ್ರೊ.ಸಿದ್ದು ಯಾಪಲಪರ್ವಿ ಮಾತನಾಡಿದರು. ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ, ಸಿಎ, ನೀಟ್, ಜೆಇಇಯಲ್ಲಿ ಉತ್ತೀರ್ಣರಾದವರಿಗೆ, ಕಸಾಪ ದತ್ತಿನಿಧಿ ಪ್ರಶಸ್ತಿಗೆ ಆಯ್ಕೆಯಾದ ಚನ್ನಬಸಪ್ಪ ಆಸ್ಪರಿ, ಆಸ್ಪತ್ರೆಗೆ ಭೂದಾನ ನೀಡಿದ ಕೆ.ಸಣ್ಣಸೂಗಪ್ಪ, ಕೆ.ನಾಗಪ್ಪ ಸಹೋದರರನ್ನು ಕಸಾಪದಿಂದ ಸನ್ಮಾನಿಸಲಾಯಿತು.

    ಓದಿದ, ನಂಬಿದ, ಬರೆಯಲು ಪ್ರಯತ್ನಿಸುವ ಸಾಹಿತ್ಯದ ಮುಖ್ಯ ಉದ್ದೇಶ ಸನ್ಮಾನ, ಅಭಿನಂದನೆ ಅಲ್ಲ. ಅದರ ಸಣ್ಣ ದನಿಯ ಆಳದಲ್ಲಿ ಸಮಾನತೆಯ ಕನಸಿದೆ. ಎಲ್ಲರೂ ಹಂಚಿಕೊಂಡು ಬದುಕುವ ಸಹಬಾಳ್ವೆಯ ಹಂಬಲವಿದೆ. ಅಸ್ಪಶ್ಯತೆ, ಜಾತೀಯತೆ, ಫ್ಯೂಡಲಿಸಂನಂಥಹ ಸಾಮಾಜಿಕ ರೋಗಗಳ ಕುರಿತು ಹೇವರಿಕೆಯಿದೆ. ಸೂಕ್ಷ್ಮಮನಸ್ಸುಗಳನ್ನು ತಟ್ಟಬೇಕು. ತಟ್ಟಿದ ಮನಸ್ಸುಗಳು ಸೂಕ್ಷ್ಮವಾಗಬೇಕೆಂಬುದಷ್ಟೇ ಸಾಹಿತ್ಯದ ಉದ್ದೇಶ.
    ಮಂಜುನಾಯಕ ಚಳ್ಳೂರು
    ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕೃತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts