More

    ನಿಸ್ವಾರ್ಥ ಸೇವೆಗೆ ಲಯನ್ಸ್ ಸಂಸ್ಥೆ ಹೆಸರುವಾಸಿ

    ಕುಶಾಲನಗರ: ಸಮಾಜದ ತಳಮಟ್ಟದ ಜನರಿಗೆ ಸೇವೆ ನೀಡುವ ಮೂಲಕ ಲಯನ್ಸ್ ಸಂಸ್ಥೆ ವಿಶ್ವದ ಎಲ್ಲೆಡೆ ಗುರುತಿಸಿಕೊಂಡಿದೆ ಎಂದು ಲಯನ್ಸ್ 317 ಈ ಜಿಲ್ಲಾ ಪ್ರಾಂತಪಾಲ ಡಾ.ಮೆಲ್ವಿನ್ ಡಿಸೋಜಾ ತಿಳಿಸಿದರು.

    ಇಲ್ಲಿನ ಎಪಿಸಿಎಂಎಸ್ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕುಶಾಲನಗರ-ಮಡಿಕೇರಿ- ಸುಂಟಿಕೊಪ್ಪ ಲಯನ್ಸ್ ಸಂಸ್ಥೆಗಳ ಜಂಟಿ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಜಿಲ್ಲೆಯಲ್ಲಿ ಸಂಸ್ಥೆ ವತಿಯಿಂದ ಉತ್ತಮ ಕಾರ್ಯಗಳು ನಡೆಯುತ್ತಿದ್ದು, ಕುಶಾಲನಗರ ಘಟಕದ ಪದಾಧಿಕಾರಿಗಳ ಚಟುವಟಿಕೆಗಳ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕುಶಾಲನಗರ, ಮಡಿಕೇರಿ, ಸುಂಠಿಕೊಪ್ಪ ಸಂಸ್ಥೆಗಳ ಕಾರ್ಯದರ್ಶಿಗಳು ತಮ್ಮ ಘಟಕದ ವರದಿಯನ್ನು ಸಭೆಯಲ್ಲಿ ಮಂಡಿಸಿದರು. ಸಭೆಗೂ ಮುನ್ನ ಪ್ರಾಂತಪಾಲ ಮೆಲ್ವಿನ್ ಡಿಸೋಜಾ 3 ಘಟಕಗಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿದರು. ಸಮಾರಂಭದಲ್ಲಿ ಕುಡುಪಿ ಅರವಿಂದ ಶೆಣೈ ಅವರನ್ನು ಸನ್ಮಾನಿಸಲಾಯಿತು.

    ಪ್ರಾಂತೀಯ ಅಧ್ಯಕ್ಷ ಅಂಬೆಕಲ್ ನವೀನ್, ಟಿ.ಕೆ.ರೋಹಿತ್, ವಲಯ ಅಧ್ಯಕ್ಷ ಕೆ.ಎಸ್.ಸತೀಶ್‌ಕುಮಾರ್, ಕುಶಾಲನಗರ ಅಧ್ಯಕ್ಷ ವಿ.ಎಸ್.ಸುಮನ್ ಬಾಲಚಂದರ್, ಟಿ.ಕೆ.ರಾಜಶೇಖರ್, ಮಡಿಕೇರಿ ಅಧ್ಯಕ್ಷ ಡಿ.ಮಧುಕರ್‌ಶೇಟ್, ಕಾರ್ಯದರ್ಶಿ ನಟರಾಜ ಕೆಸ್ತೂರ್, ಸುಂಟಿಕೊಪ್ಪ ಅಧ್ಯಕ್ಷ ಸಿ.ವಿ.ನಿಕೇಶ್, ಕಾರ್ಯದರ್ಶಿ ಪ್ರೀತಮ್ ಪ್ರಭಾಕರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts