More

    Video: ನಾನೂ ಸಫಾರಿಗೆ ಬರ್ತೀನಿ, ನಂಗೂ ಲಿಫ್ಟ್​ ಕೊಡಿ…!

    ರಾಷ್ಟ್ರಿಯ ಉದ್ಯಾನಗಳಲ್ಲಿ ಕಾಡು ಪ್ರಾಣಿಗಳನ್ನು ಸ್ವಚ್ಛಂದವಾಗಿ ವಿಹರಿಸಲು ಬಿಟ್ಟು ಜನರನ್ನು ವಾಹನಗಳಲ್ಲಿ ಸಫಾರಿ ಕರೆದೊಯ್ಯುವುದು ಸಾಮಾನ್ಯ. ಹೀಗೆ ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಉದ್ಯಾನದಲ್ಲಿ ಸಫಾರಿಗೆ ತೆರಳಿದ್ದ ಕುಟುಂಬವೊಂದು ಕೂದಲೆಳೆ ಅಂತರದಲ್ಲಿ ಸಿಂಹಿಣಿಗೆ ಆಹಾರವಾಗುವ ಅಪಾಯದಿಂದ ಪಾರಾಗಿದೆ.

    ಆಗಿದ್ದೇನೆಂದರೆ, ಕುಟುಂಬವೊಂದು ಸಫಾರಿಗೆ ತೆರಳಿತ್ತು. ಅವರಿದ್ದ ವಾಹನ ಸಿಂಹಗಳ ವಾಸಸ್ಥಳವನ್ನು ಹಾದು ಹೋಗುವಾಗ ಅಲ್ಲೊಂದು ಸಿಂಹಗಳ ಗುಂಪು ಆರಾಮವಾಗಿ ವಿರಮಿಸುತ್ತಿತ್ತು. ವಾಹನದಲ್ಲಿದ್ದವರು ಅಚ್ಚರಿಯಿಂದ ನೋಡುತ್ತಿರುವಂತೆ ಗುಂಪಿನಲ್ಲಿದ್ದ ಸಿಂಹಿಣಿ ಗಂಭೀರವಾಗಿ ಎದ್ದು ಸಫಾರಿ ವಾಹನದ ಬಳಿ ಬಂದಿತು.

    ಇದನ್ನೂ ಓದಿ: ಸಮುದ್ರದಾಳದಿಂದ ಮನುಷ್ಯರಿಗೆ ಗಿಫ್ಟ್​ ತರುತ್ತಿರುವ ಡಾಲ್ಫಿನ್​ ಗುಂಪು!

    ಇದನ್ನು ಕಂಡು ವಾಹನದಲ್ಲಿದ್ದವರು ಹೆದರಿಕೊಂಡಿದ್ದಾಗಲೇ ಸಿಂಹವು ಬಾಯಿಂದ ಕಚ್ಚಿ ವಾಹನದ ಬಾಗಿಲನ್ನು ತೆರೆಯಿತು. ಅದೃಷ್ಟವಶಾತ್​ ವಾಹನದಲ್ಲಿದ್ದವರು ಒಬ್ಬರು ತಕ್ಷಣವೇ ವಾಹನದ ಬಾಗಿಲನ್ನು ಮುಚ್ಚಿ, ಲಾಕ್​ ಮಾಡಿಕೊಂಡಿದ್ದರಿಂದ ಸಿಂಹಿಣಿಗೆ ಆಹಾರವಾಗುವ ಅಪಾಯದಿಂದ ಕುಟುಂಬ ಪಾರಾಗಿದೆ.

    ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ (ಐಎಫ್​ಎಸ್​) ಸುಶಾಂತ್​ ನಂದಾ ಅವರು ಈ ವಿಡಿಯೋವನ್ನು ಟ್ವೀಟ್​ ಮಾಡಿದ್ದಾರೆ. ಇದರಿಂದಾಗಿ ಸ್ವಲ್ಪ ದಿನಗಳ ಹಿಂದೆ ನಡೆದಿರುವ ಘಟನೆ ಈಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಜತೆಗೆ ಅವರು ಭಾರತದಲ್ಲಿ ಸಫಾರಿಗೆ ಹೋಗುವಾಗ ಎಚ್ಚರಿಕೆಯಿಂದ ಇರುವಂತೆಯೂ ಸಲಹೆ ನೀಡಿದ್ದಾರೆ.

    ಈದ್ ಉಲ್ ಫಿತ್ರ್​ ಆಚರಣೆ ಸೋಮವಾರ: ಮರ್ಕಝಿ ಕಮಿಟಿ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts