More

    ಬಿಜೆಪಿ ಲಿಂಗಾಯತರನ್ನು ರಾಜಕೀಯವಾಗಿ ಮುಗಿಸುವ ಕುತಂತ್ರ- ಪಿಟಿಪಿ ಆರೋಪ

    ಹೂವಿನಹಡಗಲಿ: ಬಿಜೆಪಿ 2018ರ ಚುನಾವಣೆಯಲ್ಲಿ ಲಿಂಗಾಯತರಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಹೇಳಿ, 2023ರ ಚುನಾವಣೆ ಸಂದರ್ಭದಲ್ಲಿ ಅವರನ್ನು ಕಡೆಗಣಿಸುವ ಮೂಲಕ ಆ ಸಮುದಾಯದ ನಾಯಕರನ್ನು ರಾಜಕೀಯವಾಗಿ ಅಂತ್ಯಗೊಳಿಸುವ ಹುನ್ನಾರ ನಡೆಸಿದೆ ಎಂದು ಶಾಸಕ ಪಿ.ಟಿ.ಪರಮೇಶ್ವನಾಯ್ಕ ಆರೋಪಿಸಿದರು.

    ಇದನ್ನೂ ಓದಿ: ಲಿಂಗಾಯತ ವಿರೋಧಿ ಎಂದು ಬಿಂಬಿಸಲು ಹೇಳಿಕೆ ತಿರುಚಿದ್ದಾರೆ; ವಿವಾದ ಬಳಿಕ ಸಿದ್ದರಾಮಯ್ಯ ಸ್ಪಷ್ಟನೆ

    ಪಟ್ಟಣದ ಅವರ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಾಜಿ ಸಿ.ಎಂ.ಜಗದೀಶ್ ಶೆಟ್ಟರ್ ರಾಜ್ಯದಲ್ಲಿ ಬಿಜೆಪಿಯನ್ನು ಸಂಘಟಿಸಿದ್ದರು. ವಿವಿಧ ಸಚಿವ ಸ್ಥಾನಗಳ ಜತೆಗೆ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದರು.

    ಡಿಸಿಎಂ ಆಗಿದ್ದ ಲಕ್ಷ್ಮಣ ಸವದಿ ಮತ್ತು ಮಾಜಿ ಸಿ.ಎಂ.ಯಡಿಯೂರಪ್ಪ ಅವರನ್ನು ದೂರ ಇಡುವ ಮೂಲಕ ಲಿಂಗಾಯತ ನಾಯಕರ ರಾಜಕೀಯ ಜೀವನವನ್ನು ಅಂತ್ಯಗೊಳಿಸುವ ಹುನ್ನಾರವನ್ನು ಬಿಜೆಪಿ ನಡೆಸುತ್ತಿದೆ. ಅಷ್ಟೊಂದು ವರ್ಷಗಳ ಕಾಲ ಪಕ್ಷ ಸಂಘಟನೆ ಮಾಡಿದ್ದವರಿಗೆ ಬಿಜೆಪಿ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.


    ಬಸವಣ್ಣನ ತತ್ವದ ಅಡಿಯಲ್ಲಿ ಎಲ್ಲ ಸಮಾಜದವರಿಗೂ ಸಾಮಾಜಿಕ ನ್ಯಾಯ ಒದಗಬೇಕು ಎಂಬ ಆಶಯದೊಂದಿಗೆ ಕಾಂಗ್ರೆಸ್‌ನಲ್ಲಿ ಎಲ್ಲ ಸಮುದಾಯದವರಿಗೂ ಅವಕಾಶ ಕಲ್ಪಿಸಲಾಗಿದೆ. ಇದೇ ತಿಂಗಳ 26ರಂದು ಮಾಜಿ ಸಿಎಂ ಸಿದ್ದರಾಮಯ್ಯ ಹೂವಿನಹಡಗಲಿಗೆ ಆಗಮಿಸಲಿದ್ದಾರೆ ಎಂದರು.

    ಇದನ್ನೂ ಓದಿ: ಚೀನಾ ಗಡಿಗೆ ರಹಸ್ಯ ಪಡೆ ಕಳುಹಿಸಿದೆ ಭಾರತ: ಇದು ಕುತಂತ್ರಿ ಚೀನಾಗೆ ಮಿಲಿಟರಿ ಸವಾಲಿಗಿಂತಲೂ ದೊಡ್ಡದು!

    ಪಕ್ಷದ ಜಿಲ್ಲಾಧ್ಯಕ್ಷ ಬಿ.ವಿ.ಶಿವಯೋಗಿ ಮಾತನಾಡಿ, ಇಂದಿರಾಗಾಂಧಿ ಹಿಂದುಳಿದ ಎಲ್ಲ ಜನಾಂಗಗಳಿಗೆ ತಾಯಿಯಂತೆ ಇದ್ದರು. ಅವರ ಆಶಯದಂತೆ ಹಿಂದುಳಿದ ಪ್ರತಿಯೊಂದು ವರ್ಗಕ್ಕೆ ಸಾಮಾಜಕ ನ್ಯಾಯ ಒದಗಿಸುತ್ತ ಬರಲಾಗುತ್ತಿದೆ ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಹನುಮಂತಪ್ಪ, ಅಟವಾಳಗಿ ಕೊಟ್ರೇಶ್, ಪುರಸಭೆ ಅಧ್ಯಕ್ಷ ಜ್ಯೋತಿಮಲ್ಲಣ್ಣ, ಮಧು ನಾಯ್ಕ, ದೂದಾನಾಯ್ಕ, ಕೆ.ಡಿ.ನಾಯ್ಕ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts