More

    ಲಿಂಗೈಕ್ಯ ನಂದೆಪ್ಪ ಟೋಪಗಿ ಗುರುಗಳ ಸೇವೆ ಸ್ಮರಣೀಯ- ಡಾ.ವಿ.ಎಸ್.ಮಾಳಿ

    ನಂದೇಶ್ವರ: ಸಂಕೋನಟ್ಟಿ ಗ್ರಾಮದ ನಿವೃತ್ತ ಶಿಕ್ಷಕ, ಲಿಂಗೈಕ್ಯ ನಂದೆಪ್ಪ ಪರಪ್ಪ ಟೋಪಗಿ ಗುರುಗಳ ಕಾಯಕ ಹಾಗೂ ದಾಸೋಹ ಸೇವೆ ಸ್ಮರಣೀಯ. ಅವರು ತಮ್ಮ ಜೀವನದುದ್ದಕ್ಕೂ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆ ನೀಡುವ ಮೂಲಕ ಅವರ ಬಾಳಿಗೆ ದಾರಿದೀಪವಾಗಿದ್ದಾರೆ ಎಂದು ಸಾಹಿತ್ಯಶ್ರೀ ಪ್ರಶಸ್ತಿ ಪುರಸ್ಕೃತ ಡಾ.ವಿ.ಎಸ್.ಮಾಳಿ ಹೇಳಿದ್ದಾರೆ.

    ಸಮೀಪದ ಸಂಕೋನಟ್ಟಿ-ಚಿಕ್ಕಟ್ಟಿ ರಸ್ತೆಯಲ್ಲಿರುವ ನಂದೀಶ ತಪೋವನದಲ್ಲಿ ಭಾನುವಾರ ನಿವೃತ್ತ ಶಿಕ್ಷಕ, ಲಿಂ.ನಂದೇಪ್ಪ ಪರಪ್ಪ ಟೋಪಗಿ ಅವರ ದ್ವಿತೀಯ ಪುಣ್ಯಸ್ಮರಣೆ ಹಾಗೂ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

    ನಂದಗಾಂವ ಭೂಕೈಲಾಸ ಮಂದಿರದ ಮಹಾದೇವ ಮಹಾರಾಜರು ಮಾತನಾಡಿ, ಲಿಂ.ನಂದೇಪ್ಪ ಟೋಪಗಿ ಅವರು ವೃತ್ತಿಯಿಂದ ಶಿಕ್ಷಕರಾಗಿದ್ದರು ಸಹ ಅನೇಕ ಸಮಾಜಮುಖಿ ಕೆಲಸ ಕಾರ್ಯಗಳನ್ನು ಮಾಡಿ ಮಾದರಿಯಾಗಿದ್ದಾರೆ ಎಂದರು. ಯಕ್ಕಂಚಿಯ ಗರುದೇವ ತಪೋವನದ ಗೋಪಾಲ ಮಹಾರಾಜರು ಮಾತನಾಡಿದರು. ನಿವೃತ್ತ ಶಿಕ್ಷಕ ಎನ್.ಜಿ.ಪಾಟೀಲ ಹಾಗೂ ಅನೇಕ ಗಣ್ಯರು, ಉಪಸ್ಥಿತರಿದ್ದರು.

    ಅಭಿಯಂತ ರಾಜಶೇಖರ ಟೋಪಗಿ ದಂಪತಿ, ಡಾ.ವಿ.ಎಸ್.ಮಾಳಿ ಹಾಗೂ ತಹಸೀಲ್ದಾರ್ ಆಗಿ ಆಯ್ಕೆಯಾದ ಸುರೇಶ ಮುಂಜೆ ಅವರನ್ನು ಸನ್ಮಾನಿಸಲಾಯಿತು. ಶ್ರೀಲೇಖಾ ಟೋಪಗಿ ಪ್ರಾರ್ಥಿಸಿದರು. ಬಿ.ಜಿ.ಪಾಟೀಲ ಸ್ವಾಗತಿಸಿದರು. ವಿಜಯ ಹುದ್ದಾರ ನಿರೂಪಿಸಿದರು. ನ್ಯಾಯವಾದಿ ಸುಭಾಷ ನಾಯಿಕ ವಂದಿಸಿದರು. ನಂದಗಾಂವ ಹಾಗೂ ಸಂಕೋನಟ್ಟಿ ಕಲಾವಿದರಿಂದ ಭಜನೆ ಕಾರ್ಯಕ್ರಮ ಜರುಗಿದವು. ಪ್ರಸಾದ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts