More

    ರೈಲ್ವೆ ವಲಯ ಕಲಬುರಗಿಯಲ್ಲೇ ಮುಂದುವರಿಸುವಂತೆ ನವನಿರ್ಮಾಣ ಸೇನೆ ಕಾರ್ಯಕರ್ತರ ಆಗ್ರಹ

    ಲಿಂಗಸುಗೂರು: ಕಲಬುರಗಿ ರೈಲ್ವೆ ವಲಯ ರದ್ದುಪಡಿಸಿದ ಕೇಂದ್ರ ರೈಲ್ವೆ ಇಲಾಖೆ ನಡೆಗೆ ಕರ್ನಾಟಕ ನವನಿರ್ಮಾಣ ಸೇನೆ ಕಾರ್ಯಕರ್ತರು ಶನಿವಾರ ಖಂಡನೆ ವ್ಯಕ್ತಪಡಿಸಿ ಎಸಿ ಕಚೇರಿ ಸಿಬ್ಬಂದಿ ಹೀನಾ ಕೌಸರ್‌ಗೆ ಮನವಿ ಸಲ್ಲಿಸಿದರು.

    ಸರಿನ್ ಕಮಿಟಿ ವರದಿಯನ್ವಯ 2014ರಲ್ಲಿ ಕಲಬುರಗಿಯಲ್ಲಿ ಸ್ಥಾಪಿಸಿದ್ದ ರೈಲ್ವೆ ವಲಯ ಕಚೇರಿ ರದ್ದುಗೊಳಿಸಿ ಕಲ್ಯಾಣ ಕರ್ನಾಟಕಕ್ಕೆ ಮೋಸ ಮಾಡಿದೆ. ಸೋಲ್ಲಾಪುರ ಮತ್ತು ಸಿಕಂದರಾಬಾದ ರೈಲ್ವೆ ವಲಯಗಳಲ್ಲಿ ಹಂಚಿ ಹೋಗಿರುವ ಕಲಬುರಗಿ ವಿಭಾಗ ಈ ಎರಡೂ ವಲಯಗಳಿಗೆ ಅತ್ಯಂತ ಹೆಚ್ಚು ಆದಾಯ ತಂದುಕೊಡುವ ಕೇಂದ್ರ ಸ್ಥಾನವಾಗಿದ್ದು, ಕಲ್ಯಾಣ ಕರ್ನಾಟಕದ ಪ್ರಮುಖ ಆರ್ಥಿಕ ಮತ್ತು ವಾಣಿಜ್ಯ ನಗರಿಯಾಗಿರುವ ಕಲಬುರಗಿಗೆ ತನ್ನದೇ ಆದ ಸ್ವತಂತ್ರ ಸಾಮರ್ಥ್ಯವಿದೆ ಎಂದರು.

    ತೊಗರಿ, ಸಿಮೆಂಟ್ ಸೇರಿ ಹಲವು ವಾಣಿಜ್ಯ ವ್ಯಾಪಾರ ಮಾರುಕಟ್ಟೆಯ ಪ್ರಮುಖ ಸ್ಥಾನವಾಗಿರುವ ಕಲಬುರಗಿಗೆ 371(ಜೆ) ಕಲಂ ಈಗಾಗಲೇ ನೀಡಲಾಗಿದ್ದರೂ ಸರ್ಕಾರ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ರೈಲ್ವೆ ವಲಯ ಕಚೇರಿಗೆ ಅಡಿಗಲ್ಲು ಸಮಾರಂಭ ಮಾಡಿದ ಮೇಲೂ ರದ್ದು ಮಾಡಿರುವುದು ಸರಿಯಲ್ಲ. ಕೇಂದ್ರ ರೈಲ್ವೆ ಇಲಾಖೆ ರೈಲ್ವೆ ವಲಯ ಕಲಬುರಗಿಯಲ್ಲೇ ಸ್ಥಾಪಿಸಬೇಕು. ಇಲ್ಲದಿದ್ದರೆ ರೈಲು ತಡೆದು ಪ್ರತಿಭಟನೆ ನಡೆಸಲಾಗುವುದೆಂದು ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ. ಸಂಘಟನೆ ತಾಲೂಕು ಅಧ್ಯಕ್ಷ ಜಗದೀಶ ಪಾಟೀಲ್, ಅರುಣ ಕುಮಾರ, ಮೈಕಲ್, ಪ್ರವೀಣ ಕುಮಾರ, ತ್ಯಾಗರಾಜ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts