More

    ನಾಯಕತ್ವ ಗುಣ ಮೈಗೂಡಿಸಿಕೊಳ್ಳಲು ಅನುಕೂಲ, ಆರ್‌ಎಸ್‌ಐ ಬೀರಣ್ಣ ಅನಿಸಿಕೆ

    ಲಿಂಗಸುಗೂರು: ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಪ್ರಗತಿಗೆ ಸಹಕಾರಿಯಾಗಿದ್ದು, ಪ್ರೌಢಾವಸ್ಥೆಯಿಂದಲೇ ವಿದ್ಯಾರ್ಥಿಗಳಲ್ಲಿ ಧೈರ್ಯ, ನಾಯಕತ್ವ ಗುಣ ಮೈಗೂಡಿಸಿಕೊಳ್ಳಲು ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಮೀಸಲು ಪಡೆ ಸಬ್ ಇನ್ಸ್‌ಪೆಕ್ಟರ್ ಬೀರಣ್ಣ ಹೇಳಿದರು.

    ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ (ಎಸ್‌ಪಿಸಿ) ಕಾರ್ಯಕ್ರಮ ಉದ್ಘಾಟಿಸಿ ಶನಿವಾರ ಮಾತನಾಡಿದರು. ಸದೃಢ ಭಾರತ ನಿರ್ಮಾಣದ ಸಂಕಲ್ಪ ಹೊಂದಿದ್ದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಕನಸಿನ ಕೂಸಾಗಿದ್ದ ಎಸ್‌ಪಿಸಿ ಕಾರ್ಯಕ್ರಮವನ್ನು ಪ್ರಸಕ್ತ ವರ್ಷ ಸರ್ಕಾರ ಜಾರಿಗೆ ತಂದಿದೆ ಎಂದರು.

    ಶಾಲೆಗಳಲ್ಲಿ ಪಠ್ಯದೊಂದಿಗೆ ಸಾಮಾಜಿಕ ಕಾರ್ಯಗಳ ಆಯೋಜನೆಯಿಂದ ಸೇವಾ ಮನೋಭಾವ ಬೆಳೆಯಲಿದೆ. ಮಕ್ಕಳಲ್ಲಿ ನಾಗರಿಕ ಜ್ಞಾನ, ಸಂವಿಧಾನ, ಕಾನೂನು ಅರಿವು ಮೂಡಿಸಬೇಕು. ಈ ಮೂಲಕ ನಾಯಕತ್ವ, ಧೈರ್ಯ, ಆತ್ಮವಿಶ್ವಾಸ, ಸ್ವಯಂ ಶಿಸ್ತು, ಸಹಾನುಭೂತಿ ಸೇರಿ ಇತರ ನೈತಿಕ ಮೌಲ್ಯಗಳನ್ನು ಬೆಳೆಸಬೇಕು. ಎಸ್‌ಪಿಸಿಯಂತಹ ಕಾರ್ಯಕ್ರಮಗಳು ಇದಕ್ಕೆ ಪೂರಕವಾಗಿವೆ ಎಂದು ಬೀರಣ್ಣ ಹೇಳಿದರು. ಶಿಕ್ಷಕರಾದ ಹುಸೇನಸಾಬ್, ರುದ್ರಯ್ಯ ಕಂಬಿ, ಶರಣಬಸವ ಹೂಗಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts