More

    ಸರ್ಕಾರಿ ಭೂಮಿ ಆಂಧ್ರದವರಿಗೆ ವರ್ಗಾವಣೆ


    ಲಿಂಗಸುಗೂರು: ತಾಲೂಕಿನ ಚಿತ್ತಾಪುರ ಗ್ರಾಮದ ಸರ್ಕಾರಿ ಗೈರಾಣಿ ಜಮೀನನ್ನು ಈ ಹಿಂದಿನ ತಹಸೀಲ್ದಾರರು ಆಂಧ್ರ ಮೂಲದವರಿಗೆ ವರ್ಗಾವಣೆ ಮಾಡಿದ್ದು, ಕೂಡಲೇ ವರ್ಗಾವಣೆ ಹಿಂಪಡೆದು ತಹಸೀಲ್ದಾರ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮುಖಂಡರು ಎಸಿ ಕಚೇರಿ ತಹಸೀಲ್ದಾರ್ ಶಂಶಾಲಂರಿಗೆ ಶನಿವಾರ ಮನವಿ ಸಲ್ಲಿಸಿದರು.

    ಚಿತ್ತಾಪುರ ಗ್ರಾಮದ ಸನಂ. 59ರ 35.34 ಎಕರೆ ಮತ್ತು ಸನಂ. 56ರ 25.35 ಎಕರೆ ಸರ್ಕಾರಿ ಗೈರಾಣಿ ಜಮೀನನ್ನು ಗ್ರಾಮದ ಭೂ ರಹಿತ ಬಡ ಕುಟುಂಬಗಳಿಗೆ ಇಲಾಖೆ ನಿಯಮಾನುಸಾರ ಹಂಚಿಕೆ ಮಾಡುವ ಬದಲಾಗಿ ಅಕ್ರಮವಾಗಿ ಆಂಧ್ರದ ಮೂಲದವರಿಗೆ ವರ್ಗಾವಣೆ ಮಾಡಲಾಗಿದೆ. ಪಹಣಿಯಲ್ಲಿ ಸರ್ಕಾರಿ ಜಮೀನೆಂದು ನಮೂದಾಗಿದ್ದು, ಬಡವರಿಗೆ ಭೂಮಿ ನೀಡುವಂತೆ ಸಂಘಟನೆ ಅಧಿಕಾರಿಗಳ ಗಮನಕ್ಕೆ ತಂದಿತ್ತು.

    ಸದರಿ ಪ್ರಕರಣ ಸಹಾಯಕ ಆಯುಕ್ತರ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಆದರೂ ಜಮೀನನ್ನು ಆಂಧ್ರ ಮೂಲದವರು ಮಾಡುತ್ತಿರುವ ಸಾಗುವಳಿ ಪರಿಗಣಿಸಿ ಹಿಂದಿನ ತಹಸೀಲ್ದಾರ್ ಅವರ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ. ಹೈಕೋರ್ಟ್ ಮರು ಪರಿಶೀಲನೆಗೆ ಎಸಿ ಕಚೇರಿಗೆ ಕಳುಹಿಸಿದ್ದು, ಸಾರ್ವಜನಿಕ, ಭೂ ರಹಿತ, ಬಡ ಕುಟುಂಬಗಳ ಹಿತರಕ್ಷಣೆ ಅಡಿ ಬಡವರಿಗೆ ನಿಯಮಾನುಸಾರ ಭೂಮಿ ಹಂಚಿಕೆ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts